CRIMENEWSನಮ್ಮರಾಜ್ಯ

NWKRTC: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಳ್ಳದಲ್ಲಿ ನಿಂತ ಬಸ್‌- ಚಾಲಕ ಸೇರಿ 23 ಮಂದಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ಶಿಗ್ಗಾವಿ: ಚಾಲಕನ ನಿಯಂತ್ರಣ ತಪ್ಪಿದ ಹುಬ್ಬಳ್ಳಿ ಇಂದ ಹಾನಗಲ್‌ಗೆ ಹೋಗುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಶಿಗ್ಗಾವಿ ಹತ್ತಿರದ ಗರುಡ ಹೋಟೆಲ್ ಬಳಿ ಹೆದ್ದಾರಿಯ ಡಿವೈಡರ್ ದಾಟಿ ಎದುರು ರಸ್ತೆಗೆ ನುಗ್ಗಿಬಂದು ಇಳಿಜಾರಿನಲ್ಲಿ ನಿಂತಿರುವ ಘಟನೆ ಸಂಭವಿಸಿದೆ.

ಈ ಅಪಘಾತದ ಶುಕ್ರವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ನಡೆದಿದ್ದು, ಈ ವೇಳೆ ಬಸ್‌ ಚಾಲಕ ಸೇರಿದಂತೆ 23 ಜನ ಗಾಯಗೊಂಡಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿ- ಗಾನಗಲ್‌ ಮಾರ್ಗಾಚರಣೆಯಲ್ಲಿದ್ದ ಬಸ್‌ನಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಹೆದ್ದಾರಿಯಲ್ಲಿ ಹೊರಟಿದ್ದ ಬಸ್‌ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಗುದ್ದಿದೆ. ನಂತರ ಎದಿರು ರಸ್ತೆ ಪಕ್ಕದ ತಗ್ಗಿಗೆ ಹೋಗಿ ನಿಂತಿದೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೇರಿಯಾಗಿದ್ದು ಭಯಹುಟ್ಟಿಸುವಂತಿದೆ.

ಇನ್ನು ಎದಿರು ರಸ್ತೆಯಲ್ಲಿ ಬಸ್‌ ಅಪಘಾತವಾಗುವ ಕೆಲವೇ ಕೆಲವು ಸೆಕೆಂಡ್‌ಗಳ ಅಂತರದಲ್ಲಿ ಎರಡು ಕಾರುಗಳು ಹಾಗೂ ಹಿಂಬದಿ ಮಹಿಳೆ ಕೂರಿಸಿಕೊಂಡಿದ್ದ ಬೈಕ್‌ವೊಂದು ಪಾಸ್‌ಆಗಿದೆ. ಒಂದು ವೇಳೆ ಕೇವಲ 10 ಸೆಕೆಂಡ್‌ ಮುಂಚಿತವಾಗಿ ಬಸ್‌ ಬಂದಿದ್ದರೆ ಎರಡು ಕಾರು, ಬೈಕ್‌ನಲ್ಲಿದ್ದ ಇಬ್ಬರ ಸ್ಥಿತಿ ಏನಾಗುತ್ತಿತ್ತೊ! ಊಹಿಸಿಕೊಳ್ಳುವುದು ಅಸಾಧ್ಯ.

ಘಟನೆ ವಿವರ: ಹಾನಗಲ್‌ ಘಟಕದ ಬಸ್‌ ಚಾಲಕ ಕರಿಯಪ್ಪ ಭಾರ್ಕಿ ಇದ್ದ ವಾಹನ (ಕೆ ಎ 27 ಎಫ್ 716) ಹುಬ್ಬಳಿ -ಹಾನಗಲ್ ನಡುವೆ ಕಾರ್ಯಾಚರಣೆ ಮಾಡುತ್ತಿತ್ತು. ಆ ಬಸ್‌ ಶಿಗ್ಗಾವಿ ಹತ್ತಿರ, ಗರುಡ ಹೋಟೆಲ್ ಬಳಿ ಸುಮಾರು 3 ಗಂಟೆ ಸಮಯದಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ.

ಆಗ ಹೆದ್ದಾರಿಯ ಡಿವೈಡರ್ ಮೇಲೆ ಹತ್ತಿ ನಂತರ ರಸ್ತೆ ಪಕ್ಕದ ಇಳಿಜಾರಿನಲ್ಲಿ ನಿಂತಿದೆ. ಅಪಘಾತದ ಪರಿಣಾಮ 23 ಜನರು ಗಾಯಗೊಂಡಿದ್ದು, ಅಪಘಾತದ ರಭಸಕ್ಕೆ ಬಸ್‌ ಹೆಚ್ಚಿನ ಪ್ರಮಾಣದಲ್ಲಿ ಜಖಂಗೊಂಡಿದೆ. ಇತ್ತ ಚಾಲಕ ಸೇರಿದಂತೆ 23 ಜನ ಗಾಯಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದ 5 ಮಂದಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ.

ಉಳಿದ 18 ಮಂದಿ ಗಾಯಳುಗಳನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಅಪಘಾತಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇತ್ತ ಅಪಘಾತ ಸ್ಥಳಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ಸಂಚಾರಧಿಕಾರಿಗಳು, ವಿಭಾಗೀಯ ತಾಂತ್ರಿಕ ಶಿಲ್ಪಿ, ಹಾವೇರಿ ವಿಭಾಗ ಮತ್ತು ಶಿಗ್ಗಾವಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ DTO ಅಶೋಕ್ ಪಾಟೀಲ: ಶುಕ್ರವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಗಾಯಗೊಂಡವರಿಗೆ ಶಿಗ್ಗಾವಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆ ಎಲ್ಲ ಗಾಯಾಳುಗಳನ್ನು ರಾತ್ರಿ 10 ಗಂಟೆ ಸುಮಾರಿಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ DTO ಅಶೋಕ್ ಪಾಟೀಲ ಅವರು ಖುದ್ದಾಗಿ ನಿಂತು ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದರು.

ಅಲ್ಲದೆ KMCಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕರನ್ನು ಮತ್ತೆ ಸುಚಿರಾಯಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿ ಖುದ್ದಾಗಿ ನಿಂತು ಚಿಕಿತ್ಸೆ ಕೊಡಿಸುತ್ತಿದ್ದಾರೆ ಹಾಗೂ ಗಾಯಾಳುಗಳಿಗೆ ಹಾಗೂ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ಅವರ ಕುಟುಂಬಸ್ಥರಿಗೆ ನವಿದ್ದೇವೆಂಬ ಧೈರ್ಯ ತುಂಬಿದ್ದಾರೆ.

Megha
the authorMegha

Leave a Reply

error: Content is protected !!