ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಸಮೀಪದ ಆಲ್ಬುರಿನಲ್ಲಿ ನಡೆದಿದೆ.
![](https://vijayapatha.in/wp-content/uploads/2025/02/8-Feb-2025-bus-bike-accident-300x170.jpg)
ಬಿದರೆಕೆರೆ ಗ್ರಾಮದ ಯೋಗೇಶ್(23), ದಯಾನಂದ್(25) ಮೃತರು. ರಾತ್ರಿ ಯೋಗೇಶ್ ಮತ್ತು ದಯಾನಂದ್ ಒಂದೇ ಬೈಕ್‌ನಲ್ಲಿ ಬಿದರೆಕೆರೆ ಕಡೆಯಿಂದ ತುರುವೇಕೆರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ತುರುವೇಕೆರೆ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
ಈ ಮೃತರಿಬ್ಬರೂ ಬೈಕ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.