Please assign a menu to the primary menu location under menu

CrimeNEWSನಮ್ಮಜಿಲ್ಲೆ

KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲ ಅಧಿಕಾರಿಗಳು ನೌಕರರ ಸುಲಿಗೆ ಮಾಡುವುದಲ್ಲದೇ ಸಂಸ್ಥೆಯಲ್ಲಿರುವ ಕೆಲ ವಸ್ತುಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ.

ಅದಕ್ಕೆ ತಾಜಾ ನಿದರ್ಶನ ಎಂಬಂತೆ ಚಾಮರಾಜನಗರ ವಿಭಾಗದ ಚಾಮರಾಜನಗರ ವರ್ಕ್‌ಶಾಪ್‌ನಲ್ಲಿನ ಇಂಜಿನ್‌ ಟ್ರಾಲಿ ಜತೆಗೆ ಸ್ಟ್ಯಾಂಡ್‌ಅನ್ನು ಟಾಟಾ ಲೈಲ್ಯಾಂಡ್‌ನವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಕಳೆದ ಜೂನ್‌ 4ರಂದು ಘಟಕದಿಂದ ಇಂಜಿನ್‌ ಟ್ರಾಲಿ ಜತೆಗೆ ಸ್ಟ್ಯಾಂಡ್‌ ಹೊರಗೆ ಕೊಟ್ಟಿರುವ ಬಗ್ಗೆ ಹೊರನೋಂದಣಿ ಆಗಿದೆ.

ಇನ್ನು ಜೂನ್‌ 4ರಂದು ಕೊಟ್ಟಿರುವ ಬಗ್ಗೆ ವರ್ಕ್‌ಶಾಪ್‌ನಲ್ಲೇ  ಹೊರ ನೋಂದಣಿ ಮಾಡಿದ್ದಾರೆ ಎಂದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಏಕೆ ತನಿಖೆ ಮಾಡಿಲ್ಲ ಎಂಬುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಇನ್ನು ಅಂದು ವಿಭಾಗೀಯ ತಾಂತ್ರಿಕ ಶಿಲ್ಪಿ, ಪ್ರಸ್ತುತ ಬೆಂಗಳೂರು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿರುವ ಸೂರ್ಯಕಾಂತ್ ಹಾಗೂ ಚಾಮರಾಜನಗರ ವಿಭಾಗೀಯ ಕಾರ್ಯಾಗಾರದ ಎಂಡಬ್ಲ್ಯೂಎಸ್ ಎಂ.ಆರ್. ಸೋಮೇಗೌಡ ಅವರು ಈ ಸಾಮಾಗ್ರಿ ಸಾಗಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದಿಷ್ಟೇ ಅಲ್ಲದೆ ಈ ರೀತಿ ಸಾಕಷ್ಟು ಅವ್ಯವಹಾರ ಇವರ ಕಾಲದಲ್ಲಿ ನಡೆದಿದ್ದು ಸಂಬಂಧಪಟ್ಟ ಮೇಲಧಿಕಾರಿಗಳು ತನಿಖೆ ಕೈಗೊಂಡಲ್ಲಿ ಎಲ್ಲ ಅವ್ಯವಹಾರ ಬಯಲಿಗೆ ಬರಲಿದೆ ಎಂದು ವಿಭಾಗದಲ್ಲಿರುವ ಸಿಬ್ಬಂದಿಗಳೇ ಹೇಳುತ್ತಿದ್ದಾರೆ.

ಇನ್ನು ಈ ರೀತಿ ಅಧಿಕಾರಿಗಳು ಕಾರ್ಯಾಗಾರಕ್ಕೆ ಬರುವ ಬಸ್‌ಗಳ ಬಿಡಿ ಭಾಗಗಳನ್ನು ಬೇರೆಡೆ ಸಾಗಿಸುವುದರಿಂದ ಬಿಡಿಭಾಗಗಳ ಅವಶ್ಯವಿರುವ ಬಸ್‌ಗಳಿಗೆ ಅಳವಡಿಸದೆ ಬಸ್‌ಗಳು ಅಪಘಾತಕ್ಕೀಡಾಗುತ್ತವೆ. ಈ ವೇಳೆ ಚಾಲಕರನ್ನು ಹೊಣೆ ಮಾಡಿ ಅವರ ವಿರುದ್ಧ ಪೊಲೀಸ್‌ ಪ್ರಕರಣಗಳನ್ನು ದಾಖಲಿಸುತ್ತಾರೆ.

ಚಾಲಕರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳೆ ಈ ರೀತಿ ಹಿಂಸೆ ನೀಡಿದರೆ ಚಾಲಕರು ಯಾರ ಬಳಿ ಹೋಗಬೇಕು. ಸಂಸ್ಥೆಯ ಅಧಿಕಾರಿಗಳೇ ನೌಕರರ ವಿರುದ್ಧ ಪ್ರಕರಣದಾಖಲಿಸುತ್ತಿರುವುದರಿಂದ ಚಾಲಕರು ಖಾಸಗಿ ವಕೀಲರ ಮೊರೆ ಹೋಗಿ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಇನ್ನು ಈ ಅಧಿಕಾರಿಗಳು ಮಾಡುವ ಈ ರೀತಿಯ ತಪ್ಪುಗಳಿಗೆ ನಿಗಮಕ್ಕೆ 10-20 ಸಾವಿರ ರೂಪಾಯಿ ದಂಡವನ್ನು ಚಾಲಕರು ಕಟ್ಟಬೇಕು. ಇಲ್ಲ ಒಂದೆರೆಡು ವರ್ಷ ಇಂಕ್ರಿಮೆಂಟ್‌ಅನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕು. ಜತೆಗೆ ಅಮಾನತು ಶಿಕ್ಷೆಯನ್ನು ಅನುಭವಿಸಬೇಕು. ಇದಾದ ಬಳಿಕ ಕೋರ್ಟ್‌ ಕಚೇರಿ ಎಂದು ಅಲೆಯಬೇಕು. ಈ ರೀತಿ ಚಾಲಕರನ್ನು ಕಳೆದ 4 ದಶಕಗಳಿಂದಲೂ ಕೆಲ ಅಧಿಕಾರಿಗಳು ತಾವು ಮಾಡುವ ಹೀನಕೃತ್ಯವನ್ನು ಮುಚ್ಚಿಕೊಳ್ಳಲು ಚಾಲಕರನ್ನು ಪಾಪದ ಕೂಸುಗಳಾಗಿ ಬಿಂಬಿಸುತ್ತಿದ್ದಾರೆ.

ಇನ್ನಾದರೂ ಈ ರೀತಿ ಬಿಡಿಭಾಗಗಳನ್ನು ಹೊರಗಡೆ ಕಳುಹಿಸುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜತೆಗೆ ವಿಭಾಗೀಯ ಕಾರ್ಯಾಗಾರದ ಗೇಟ್‌ನಲ್ಲಿ ಹೊರ ಹೋಗಿರುವುದಕ್ಕೆ ನೋಂದಣಿ ಆಗಿರುವ ಬಗ್ಗೆ ತನಿಖೆ ನಡೆಸಿ ತಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಅಧಿಕಾರಿಗಳ ಬಗ್ಗು ಬಡಿಯಲು "ದಂಡಂ ದಶಗುಣಂ": EPS ಪಿಂಚಣಿದಾರರ ಎಚ್ಚರಿಕೆ ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯೊಳಗೆ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ಸಾರಿಗೆ ಬಸ್‌-ಕಾರು ಡಿಕ್ಕಿ: ಐವರು ಮೆಡಿಕಲ್ ವಿದ್ಯಾರ್ಥಿಗಳು ಸಾವು, ಇಬ್ಬರ ಸ್ಥಿತಿ ಗಂಭೀರ ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ