ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಕಾನೂನು ಅಧಿಕಾರಿ ಪ್ರಸನ್ನ ಕುಮಾರ್ ಕೆ.ಬಾಳನಾಯ್ಕ ಅವರು ಇಂದು ಮುಂಜಾನೆ ಹೃದಯಾಘಾದಿಂದ ನಿಧನರಾಗಿದ್ದಾರೆ.
59 ವರ್ಷದ ಪ್ರಸನ್ನ ಕುಮಾರ್ ಕೆ.ಬಾಳನಾಯ್ಕ ಅವರು ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅನಂತಪುರದಲ್ಲಿ ಇಂದು ಮುಂಜಾನೆ 3.30ರ ಸಮಯದಲ್ಲಿ ಹೃದಯಾಘಾತದಿಂದ ಅಸುನೀಗಿದರು.
1997ರಲ್ಲಿ ನಿಗಮಕ್ಕೆ ನೇಮಕಗೊಂಡು 2019ರಲ್ಲಿ ಮುಖ್ಯ ಕಾನೂನು ಅಧಿಕಾರಿಯಾಗಿ ಮುಂಬಡ್ತಿಹೊಂದಿದ್ದರು. ಪ್ರಸ್ತುತ ಸಂಸ್ಥೆಯ ಮಾಲೂರಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತ ಪ್ರಸನ್ನ ಕುಮಾರ್ ಕೆ.ಬಾಳನಾಯ್ಕ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಕುಟುಂಬದವರಿಗೆ ಅಗಲಿಕೆಯ ನೋವು, ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಸಮಸ್ತ ಸಾರಿಗೆ ಅಧಿಕಾರಿಗಳು / ನೌಕರರು ಪ್ರಾರ್ಥಿಸಿದ್ದಾರೆ.
Related

Megha








