KSRTC: 38ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡದೇ, 22ತಿಂಗಳು ಮುಗಿದರೂ ನಯಪೈಸೆ ಸಂಬಳ ಹೆಚ್ಚು ಮಾಡದೇ ನುಡಿದಂತೆ ನಡೆದಿದ್ದಾರೆ ಸಿಎಂ- ಸಾರಿಗೆ ನೌಕರರು ವ್ಯಂಗ್ಯ

- KSRTCಯ ನಾಲ್ಕೂ ನಿಗಮಗಳ ನೌಕರರಾದ ನಮಗೆ ಕೊಡಬೇಕಾಗಿರೋ 38ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡದೇ, 22ತಿಂಗಳು ಮುಗಿದರೂ ನಯಪೈಸೆ ವೇತನ ಹೆಚ್ಚು ಮಾಡದೇ ನುಡಿದಂತೆ ನಡೆದಿದ್ದಾರೆ ಸಿದ್ದರಾಮಯ್ಯನವರು – ಅಭಿನಂದನೆಗಳು ಸಿಎಂ ಅವರೇ …
ಬೆಂಗಳೂರು: ಸಾರಿಗೆ ನೌಕರರಿಗೆ ಕೊಡಬೇಕಾಗಿರೋ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡದೇ, 22 ತಿಂಗಳು ಮುಗಿದರೂ ನಯಪೈಸೆ ವೇತನ ಹೆಚ್ಚು ಮಾಡದೇ ನುಡಿದಂತೆ ನಡೆದಿದ್ದಾರೆ ಸಿದ್ದರಾಮಯ್ಯನವರು.
ಸಾರಿಗೆ ನೌಕರರಿಗೆ ಕೊಡಬೇಕಾಗಿರೋ ಒಟ್ಟು ಬಾಕಿ ಲೆಕ್ಕ ಹಾಕಿದರೆ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಆಗುತ್ತೆ. ಅದರ ಬಡ್ಡಿ ಹಣ ಲೆಕ್ಕ ಹಾಕಿದರೆ ಈ ಶಕ್ತಿ ಯೋಜನೆ ಆ ಬಡ್ಡಿ ಹಣದಲ್ಲೇ ನಡೆಯುತ್ತಿದೆ. ಇದನ್ನೇ ಸಿದ್ದರಾಮಯ್ಯ ನವರು ಸಾರಿಗೆ ನೌಕರರಿಗೆ ಕೊಟ್ಟಿದ್ದರೆ ಸಿದ್ದರಾಮಯ್ಯನವರ ಅಬ್ಬರದ ಭಾಷಣಕ್ಕೆ ಮೆರುಗು ಬರುತ್ತಿತ್ತು.
ಸಿದ್ದರಾಮಯ್ಯ ನವರೇ ಈ ರಾಜ್ಯದ ಸಾರಿಗೆ ನೌಕರರಿಗೆ ಅನ್ಯಾಯ ಮಾಡುತ್ತಿದ್ದೀರಿ. ಅವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಿ. ನೆನಪು ಇಟ್ಟು ಕೊಳ್ಳಿ ಈ ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ಸಾರಿಗೆ ನೌಕರರ ಮತ್ತು ಅವರ ಕುಟುಂಬದ ಘೋರ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಬಿಡುವುದಿಲ್ಲ.
ಅಂದು 2016ರಲ್ಲಿ ಏನಾಯಿತು ನೆನಪು ಮಾಡಿಕೊಳ್ಳಿರಿ ನಿಮ್ಮ ಒಬ್ಬ…ಇನ್ನು ಮುಂದೆ ಇನ್ನೂ ಏನೇನು ಆಗುತ್ತೋ ಗೊತ್ತಿಲ್ಲ. ಆ ದೇವರು ಸಾರಿಗೆ ನೌಕರರ ಕಣ್ಣೀರಿನ ಶಾಪ ಕೊಡುತ್ತಾನೆ ಎಂಬ ನಂಬಿಕೆ ರಾಜ್ಯ ಸಾರಿಗೆ ನೌಕರರು ಇಟ್ಟುಕೊಂಡಿದ್ದಾರೆ ಎಂದು ನೊಂದ ನೌಕರರು ಸರ್ಕಾರಕ್ಕೆ ಹಾಗೂ ವೈಯಕ್ತಿಕವಾಗಿ ಶಾಪಹಾಕುತ್ತಿದ್ದಾರೆ.
ಆದರೆ, ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ತಾವು ಚುನಾವಣೆ ಪೂರ್ವದಲ್ಲಿ ಕೊಟ್ಟ ಪ್ರಣಾಳಿಕೆ ಭರವಸೆಯನ್ನೇ ಮರೆತು ನೌಕರರ ವಿಷಯದಲ್ಲಿ ಭಾರಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೂ ನಾವು ನುಡಿದಂತೆ ನಡೆದಿದ್ದೇವೆ ನಡೆಯುತ್ತಿದ್ದೇವೆ ಎಂದು ಗಂಟಲು ಹರಿದು ಹೋಗುವ ರೀತಿ ಭಾಷಣ ಮಾಡುತ್ತಿದ್ದಾರೆ. ಇವರಿಗೆ ಈ ಬಗ್ಗೆ ನಾಚಿಕೆ ಆಗುವುದಿಲ್ಲವೇ ಎಂದು ನೌಕರರು ಪ್ರಶ್ನಿಸಿದ್ದಾರೆ.
ಇನ್ನು ಸಿಎಂ ಕುರ್ಚಿಯ ಬಗ್ಗೆ ಹಗ್ಗಜಗ್ಗಾಟ ಮಾಡುತ್ತ ಕಾಲಕಳೆಯುತ್ತಿರುವ ಈ ಸರ್ಕಾರ ರಾಜ್ಯದ ಸಾರಿಗೆ ನೌಕರರ ಬಗ್ಗೆ ಕಿಂಚಿತ್ತು ಕಾಳಜಿ ತೋರದಿರುವುದಕ್ಕೆ ಭಾರಿ ನೋವಾಗುತ್ತಿದೆ. ಅಲ್ಲದೆ ನಮ್ಮ ಮನವಿಗಳಿಗೂ ಸ್ಪಂದಿಸದಿರುವುದು ಅವರ ಸಂಸ್ಕೃತಿಯನ್ನು ತೋರುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ.

Related








