ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಗುಪ್ತಾಂಗವನ್ನು ಸ್ಪರ್ಶಿಸಿ ಅಸಭ್ಯವಾಗಿ ನಡೆದುಕೊಂಡಿದ್ದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
KSRTC ಮಂಗಳೂರು ವಿಭಾಗದ 3ನೇ ಘಟಕದ ಉಲ್ಲಾಳ-ಮುಡಿಪು ಮಾರ್ಗದಲ್ಲಿ ಚಲಿಸುತ್ತಿದ್ದಾಗ ಶೀಟ್‌ನಲ್ಲಿ ಕುಳಿತಿದ್ದ ಮಹಿಳೆ ಪಕ್ಕದಲ್ಲಿ ಹೋಗಿ ನಿಂತುಕೊಂಡ ನಿರ್ವಾಹಕ ಪ್ರದೀಪ್ ನಾಯ್ಕರ್ ಎಂಬಾತ ಆಕೆಯ ಎದೆ ಭಾಗವನ್ನು ಸ್ಪರ್ಶಿಸಿದ್ದಾನೆ. ಇನ್ನು ಅದನ್ನು ಗಮನಿಸಿದ ಸಹ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಇತ್ತ ನಿರ್ವಾಹಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಪೊಲೀಸರು ನಿರ್ವಾಹಕರನ್ನು ವಶಕ್ಕೆ ಪಡೆದಿದ್ದು, ಸುಮೋಟೊ ಕೇಸ್ ದಾಖಲಿಸಿ FIR ಕೂಡ ಮಾಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿರುವ ಸಾರಿಗೆ ಕೇಂದ್ರ ಕಚೇರಿಯಿಂದ ಈತನ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಡಿಸಿ ನಿರ್ವಾಹಕನ ಅಮಾನತು ಆದೇಶ ಪ್ರಕ್ರಿಯೆ ನಡೆಸಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಮೇಲೆ ಕೈ ಹಾಕುತ್ತಿರುವ ಸರಕಾರಿ ಬಸ್ ಕಂಡಕ್ಟರ್… ಇಂತಹ ಕಾಮುಕ ಕಂಡಕ್ಟರನ್ನು ಕೂಡಲೆ ಕೆಲಸದಿಂದ ಅಮಾನತು ಮಾಡಿ ಕಠಿಣ ಕಾನೂನಿನ ಅಡಿಯಲ್ಲಿ ಬಂಧಿಸಿ… ಇಲ್ಲದಿದ್ದಲ್ಲಿ ಸಾರ್ವಜನಿಕರಿಂದ ಗೂಸ ಬೀಳೋದಂತೂ ಗ್ಯಾರಂಟಿ ಎಂದು ಎಚ್ಚರಿಕೆ ಸಂದೇಶವನ್ನು ನೆಟ್ಟಿಗರು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ ಈತ KSRTC ಮಂಗಳೂರು ವಿಭಾಗದ ಕಂಡಕ್ಟರ್ ಆಗಿರುತ್ತಾನೆ.. ಇವನ ಬಗ್ಗೆ ಹೆಣ್ಣು ಮಕ್ಕಳು ಜಾಗರೂಕರಾಗಿರಿ… ಮಂಗಳೂರಿನ ಪೋಲೀಸ್ ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
Related
