KSRTC: SO ಮಗಳ ಮದುವೆಗೆ ಹೋಗಲು ಸಂಸ್ಥೆ ವಾಹನ, ಚಾಲಕರ ದುರುಪಯೋಗಪಡಿಸಿಕೊಂಡ CSO- ತರಾಟೆಗೆ ತೆಗೆದುಕೊಂಡ ಕೆಆರ್‌ಎಸ್ ಪಕ್ಷ

ಬೆಂಗಳೂರು: ಸಹೋದ್ಯೋಗಿಯ ಮಗಳ ಮದುವೆಗೆ ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗಲು ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಯ ವಾಹನಗಳನ್ನು ಸಂಸ್ಥೆಯ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದು, ಅದನ್ನು ಕೋಲಾರ ಜಿಲ್ಲೆಯ ಕೆಆರ್‌ಎಸ್ ಪಕ್ಷದ ಪದಾಧಿಕಾರಿಳು ಪತ್ತೆಹಚ್ಚಿ ತರಾಟೆಗೆ ತೆಗೆದುಕೊಂಡಿದ್ದಾರೆ.
KSRTC ಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ (CSO) ಲಿಂಗರಾಜು ತಮ್ಮ ಸಹೋದ್ಯೋಗಿ ಸಂಸ್ಥೆಯ ಭದ್ರತಾಧಿಕಾರಿ (SO) ಚಂದ್ರೇಗೌಡ ಅವರ ಮಗಳ ವಿವಾಹಕ್ಕೆ ಬೆಂಗಳೂರಿನಿಂದ 115 ಕಿಮೀ ದೂರದಲ್ಲಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಕಲ್ಯಾಣ ಮಂಟಪ ಒಂದರಲ್ಲಿ ಆಯೋಜಿಸಿದ್ದ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಲು ನಿನ್ನೆ ಅಂದರೆ ಏ.29ರ ರಾತ್ರಿ ಸಂಸ್ಥೆಯ ವಾಹನ ಮತ್ತು ಸಂಸ್ಥೆಯ ಚಾಲಕರನ್ನು ದುರುಪಯೋಪಡಿಸಿಕೊಂಡಿದ್ದಾರೆ.
ಇವರಷ್ಟೇ ಅಲ್ಲದೆ ಇನ್ನೂ ಮೂರು ಸಂಸ್ಥೆಯ ವಾಹನಗಳು ದುರುಪಯೋಗವಾಗಿದ್ದು ಈ ಬಗ್ಗೆ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ರೀತಿ ಸಂಸ್ಥೆಯ ವಾಹನಗಳನ್ನು ಮೇಲಧಿಕಾರಿಗಳು ಪದೇ ಪದೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು ಹಾಗೂ ಸಾರಿಗೆ ಸಚಿವರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.
ಇನ್ನು ಈ ಹಿಂದೆ KSRTC ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜೇಂದ್ರ ಕಠಾರಿಯ ಅವರ ಅವಧಿಯಲ್ಲಿ ಅಧಿಕಾರಿಗಳು ಸಂಸ್ಥೆಯ ವಾಹನಗಳನ್ನು ತಮ್ಮ ಸ್ವಂತಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಅವರು ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಿದ್ದರು. ಆ ವೇಳೆ ವಾಹನಗಳ ಮತ್ತು ಸಂಸ್ಥೆಯ ಚಾಲಕರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದ ಅಧಿಕಾರಿಗಳಿಗೆ ನಡುಕವಿತ್ತು.
ಆದರೆ, ಇತ್ತೀಚೆಗೆ ಬಂದ ಹೊಸ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಈ ಅಧಿಕಾರಿಗಳು ಮುಂದಾಗಿ, ಇದಕ್ಕೆ ಎಂಡಿ ಅನ್ಬುಕುಮಾರ್ ಅವರು ಕಾಳಜಿವಹಿಸಿಲ್ಲದ ಕಾರಣ ಈಗ ಸಂಸ್ಥೆಯ ವಾಹನಗಳನ್ನು ಹಾಗೂ ಚಾಲಕರನ್ನು ಬಹುತೇಕ ಅಧಿಕಾರಿಗಳು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಶಾಂತಿ ನಗರದ ಕೇಂದ್ರ ಕಚೇರಿಯ ಅಧಿಕಾರಿಯೊಬ್ಬರು ವಿಜಯಪಥಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಮಂಗಳವಾರ ರಾತ್ರಿ ಮುಳಬಾಗಿಲಿಗೆ ಅಂದರೆ 115 ಕಿಮೀ ಸಂಸ್ಥೆಯ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತು ಬಂದು ಫೇಸ್‌ಬುಕ್ ಲೈವ್ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಇತರೆ ಅಧಿಕಾರಿಗಳು ಬಸ್ ನಿಲ್ದಾಂಣದಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಕಲ್ಯಾಣ ಮಂಟಪದವರೆಗೂ ಆಟೋ ಮಾಡಿಕೊಂಡು ಹೋಗಿದ್ದರು ಎನ್ನಲಾಗಿದೆ.
ಹೀಗಾಗಿ ಮುಳಬಾಗಿಲು ಬಸ್ ನಿಲ್ದಾಣದ ಸಿಸಿ ಕ್ಯಾಮೆರಾವನ್ನು ಚೆಕ್ ಮಾಡಿದರೆ ಯಾವ ಯಾವ ಅಧಿಕಾರಿಗಳು ವಾಹನಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುವುದು ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಸಾರಿಗೆ ನೌಕರರು ಮುಷ್ಕರ ಮಾಡಿದರು ಎಂಬ ಕಾರಣಕ್ಕೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಇನ್ನಿಲ್ಲದ ಹಿಂಸೆ ನೀಡುತ್ತಿರುವ ಸಾರಿಗೆ ಆಡಳಿತ ವರ್ಗ ಈ ರೀತಿ ಸಾರಿಗೆ ವಾಹನ ಮತ್ತು ಸಾರಿಗೆ ನೌಕರರನ್ನು ತನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದೆ ಹಿಂದೆ ಸರಿಯಬಾರದು.
ಅಧಿಕಾರಿಗಳು ವೈಯಕ್ತಿಕ ಕೆಲಸಕ್ಕೆ ಸಾರಿಗೆ ವಾಹನ ಮತ್ತು ನೌಕರರನ್ನು ಬಳಸಿಕೊಂಡಿರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೂ ಈ ಕೃತ್ಯವನ್ನು ಅಧಿಕಾರಿಗಳು ನಿನ್ನೆ ಎಸಗಿದ್ದಾರೆ. ಅವರು ಸಾರಿಗೆ ವಾಹನವನ್ನು ಮತ್ತು ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅದೇ ಒಬ್ಬ ನೌಕರ ತಪ್ಪು ಮಾಡದಿದ್ದರೂ ಕೂಡಲೇ ಅಮಾನತು, ವಜಾ ಮಾಡುತ್ತೀರಿ ಅದಕ್ಕೆ ನೌಕರರ ಹೇಳಿಕೆಯನ್ನು ಪಡೆಯುವುದಿಲ್ಲ. ಈಗ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿಮಗೆ ಬೇಕಾದ ಸಾಕ್ಷಿ ಸಹಿತ ದಾಖಲೆಗಳು ಕಣ್ಣಮುಂದೆ ಇವೆ. ಹೀಗಾಗಿ ಇವರಿಗೆ ತಕ್ಷ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಇನ್ನು ಈ ಅಧಿಕಾರಿಗಳ ವಿರುದ್ಧ ಸಂಸ್ಥೆಯ ಎಂಡಿ ಮತ್ತು ಸಾರಿಗೆ ಸಚಿವರು ಸೇರಿದಂತೆ ಸರ್ಕಾರ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Related


You Might Also Like
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...
ಬೋನಿನಲ್ಲಿದ್ದ ಕರುವ ಬೇಟೆಯಾಡಲು ಬಂದು ತಿನ್ನದೆ ಅಚ್ಚರಿ ಮೂಡಿಸಿದ ಚಿರತೆ !
ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಅಚ್ಚರಿಯೊಂದು ನಡೆದಿದೆ. ಬೋನಿನಲ್ಲಿ ಹಸುವಿನ ಕರು ಇದ್ದರೂ ಅದನ್ನು ತಿನ್ನದೆ ಚಿರತೆ ಹಾಗೆಯೇ ಅದರ ಜತೆಗೆ ಇದ್ದಿದ್ದು ಭಾರಿ ಅಚ್ಚರಿ ಮೂಡಿಸಿದೆ....
ಕಾಡುಪ್ರಾಣಿಗಳ ದಾಳಿಯಿಂದ ಸತ್ತರೆ ಲಕ್ಷ ಲಕ್ಷ ಪರಿಹಾರ ಸಿಗುತ್ತದೆ ಎಂಬ ಆಸೆಗೆ ಬಿದ್ದು ಪತಿಯನ್ನೇ ಕೊಂದು ಕಥೆ ಕಟ್ಟಿದ ಐನಾತಿ ಪತ್ನಿ
ಮೈಸೂರು: ಕಾಡು ಪ್ರಾಣಿಗಳಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರ ಹಣದ ಆಸೆಗೆ ಪತಿಯನ್ನು ತಾನೇ ಕೊಂದು, ಹುಲಿ ಕೊಂದಿದೆ ಅಂತ ನಂಬಿಸಲು ಯತ್ನಿಸಿದ ಪತ್ನಿ...