CRIMENEWSನಮ್ಮರಾಜ್ಯವಿಡಿಯೋ

KSRTC: SO ಮಗಳ ಮದುವೆಗೆ ಹೋಗಲು ಸಂಸ್ಥೆ ವಾಹನ, ಚಾಲಕರ ದುರುಪಯೋಗಪಡಿಸಿಕೊಂಡ CSO- ತರಾಟೆಗೆ ತೆಗೆದುಕೊಂಡ ಕೆಆರ್‌ಎಸ್‌ ಪಕ್ಷ

ಭ್ರಷ್ಟ ಅಧಿಕಾರಿಗಳಿಗೆ ಬಕಿಟ್‌ ಹಿಡಿಯಲು ಬಂದಾತ. ವಿಡಿಯೋ ನೋಡಿ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಹೋದ್ಯೋಗಿಯ ಮಗಳ ಮದುವೆಗೆ ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗಲು ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಯ ವಾಹನಗಳನ್ನು ಸಂಸ್ಥೆಯ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದು, ಅದನ್ನು ಕೋಲಾರ ಜಿಲ್ಲೆಯ ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಳು ಪತ್ತೆಹಚ್ಚಿ ತರಾಟೆಗೆ ತೆಗೆದುಕೊಂಡಿದ್ದಾರೆ.

KSRTC ಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ (CSO) ಲಿಂಗರಾಜು ತಮ್ಮ ಸಹೋದ್ಯೋಗಿ ಸಂಸ್ಥೆಯ ಭದ್ರತಾಧಿಕಾರಿ (SO) ಚಂದ್ರೇಗೌಡ ಅವರ ಮಗಳ ವಿವಾಹಕ್ಕೆ ಬೆಂಗಳೂರಿನಿಂದ 115 ಕಿಮೀ ದೂರದಲ್ಲಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಕಲ್ಯಾಣ ಮಂಟಪ ಒಂದರಲ್ಲಿ ಆಯೋಜಿಸಿದ್ದ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಲು ನಿನ್ನೆ ಅಂದರೆ ಏ.29ರ ರಾತ್ರಿ ಸಂಸ್ಥೆಯ ವಾಹನ ಮತ್ತು ಸಂಸ್ಥೆಯ ಚಾಲಕರನ್ನು ದುರುಪಯೋಪಡಿಸಿಕೊಂಡಿದ್ದಾರೆ.

ಇವರಷ್ಟೇ ಅಲ್ಲದೆ ಇನ್ನೂ ಮೂರು ಸಂಸ್ಥೆಯ ವಾಹನಗಳು ದುರುಪಯೋಗವಾಗಿದ್ದು ಈ ಬಗ್ಗೆ ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಗಳು ಪೊಲೀಸ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ರೀತಿ ಸಂಸ್ಥೆಯ ವಾಹನಗಳನ್ನು ಮೇಲಧಿಕಾರಿಗಳು ಪದೇ ಪದೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು ಹಾಗೂ ಸಾರಿಗೆ ಸಚಿವರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನು ಈ ಹಿಂದೆ KSRTC ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜೇಂದ್ರ ಕಠಾರಿಯ ಅವರ ಅವಧಿಯಲ್ಲಿ ಅಧಿಕಾರಿಗಳು ಸಂಸ್ಥೆಯ ವಾಹನಗಳನ್ನು ತಮ್ಮ ಸ್ವಂತಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಅವರು ಎಲ್ಲ ವಾಹನಗಳಿಗೂ ಜಿಪಿಎಸ್‌ ಅಳವಡಿಸಿದ್ದರು. ಆ ವೇಳೆ ವಾಹನಗಳ ಮತ್ತು ಸಂಸ್ಥೆಯ ಚಾಲಕರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದ ಅಧಿಕಾರಿಗಳಿಗೆ ನಡುಕವಿತ್ತು.

ಆದರೆ, ಇತ್ತೀಚೆಗೆ ಬಂದ ಹೊಸ ವಾಹನಗಳಿಗೆ ಜಿಪಿಎಸ್‌ ಅಳವಡಿಸಲು ಈ ಅಧಿಕಾರಿಗಳು ಮುಂದಾಗಿ, ಇದಕ್ಕೆ ಎಂಡಿ ಅನ್ಬುಕುಮಾರ್‌ ಅವರು ಕಾಳಜಿವಹಿಸಿಲ್ಲದ ಕಾರಣ ಈಗ ಸಂಸ್ಥೆಯ ವಾಹನಗಳನ್ನು ಹಾಗೂ ಚಾಲಕರನ್ನು ಬಹುತೇಕ ಅಧಿಕಾರಿಗಳು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಶಾಂತಿ ನಗರದ ಕೇಂದ್ರ ಕಚೇರಿಯ ಅಧಿಕಾರಿಯೊಬ್ಬರು ವಿಜಯಪಥಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಮಂಗಳವಾರ ರಾತ್ರಿ ಮುಳಬಾಗಿಲಿಗೆ ಅಂದರೆ 115 ಕಿಮೀ ಸಂಸ್ಥೆಯ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತು ಬಂದು ಫೇಸ್‌ಬುಕ್‌ ಲೈವ್‌ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಇತರೆ ಅಧಿಕಾರಿಗಳು ಬಸ್‌ ನಿಲ್ದಾಂಣದಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಕಲ್ಯಾಣ ಮಂಟಪದವರೆಗೂ ಆಟೋ ಮಾಡಿಕೊಂಡು ಹೋಗಿದ್ದರು ಎನ್ನಲಾಗಿದೆ.

ಹೀಗಾಗಿ ಮುಳಬಾಗಿಲು ಬಸ್‌ ನಿಲ್ದಾಣದ ಸಿಸಿ ಕ್ಯಾಮೆರಾವನ್ನು ಚೆಕ್‌ ಮಾಡಿದರೆ ಯಾವ ಯಾವ ಅಧಿಕಾರಿಗಳು ವಾಹನಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುವುದು ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಸಾರಿಗೆ ನೌಕರರು ಮುಷ್ಕರ ಮಾಡಿದರು ಎಂಬ ಕಾರಣಕ್ಕೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್‌ ಪ್ರಕರಣಗಳನ್ನು ದಾಖಲಿಸಿ ಇನ್ನಿಲ್ಲದ ಹಿಂಸೆ ನೀಡುತ್ತಿರುವ ಸಾರಿಗೆ ಆಡಳಿತ ವರ್ಗ ಈ ರೀತಿ ಸಾರಿಗೆ ವಾಹನ ಮತ್ತು ಸಾರಿಗೆ ನೌಕರರನ್ನು ತನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದೆ ಹಿಂದೆ ಸರಿಯಬಾರದು.

ಅಧಿಕಾರಿಗಳು ವೈಯಕ್ತಿಕ ಕೆಲಸಕ್ಕೆ ಸಾರಿಗೆ ವಾಹನ ಮತ್ತು ನೌಕರರನ್ನು ಬಳಸಿಕೊಂಡಿರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೂ ಈ ಕೃತ್ಯವನ್ನು ಅಧಿಕಾರಿಗಳು ನಿನ್ನೆ ಎಸಗಿದ್ದಾರೆ. ಅವರು ಸಾರಿಗೆ ವಾಹನವನ್ನು ಮತ್ತು ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಅದೇ ಒಬ್ಬ ನೌಕರ ತಪ್ಪು ಮಾಡದಿದ್ದರೂ ಕೂಡಲೇ ಅಮಾನತು, ವಜಾ ಮಾಡುತ್ತೀರಿ ಅದಕ್ಕೆ ನೌಕರರ ಹೇಳಿಕೆಯನ್ನು ಪಡೆಯುವುದಿಲ್ಲ. ಈಗ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿಮಗೆ ಬೇಕಾದ ಸಾಕ್ಷಿ ಸಹಿತ ದಾಖಲೆಗಳು ಕಣ್ಣಮುಂದೆ ಇವೆ. ಹೀಗಾಗಿ ಇವರಿಗೆ ತಕ್ಷ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇನ್ನು ಈ ಅಧಿಕಾರಿಗಳ ವಿರುದ್ಧ ಸಂಸ್ಥೆಯ ಎಂಡಿ ಮತ್ತು ಸಾರಿಗೆ ಸಚಿವರು ಸೇರಿದಂತೆ ಸರ್ಕಾರ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Deva
the authorDeva

Leave a Reply

error: Content is protected !!
Latest news
GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು?