KSRTC ಅಧಿಕಾರಿಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಸ್ಥಿತಿಗೆ ನಮ್ಮನ್ನು ತರಬೇಡಿ- ಸಂಘಟನೆಗಳ ಮುಖಂಡರಿಗೆ ಚಾಲನಾ ಸಿಬ್ಬಂದಿಗಳ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ವೇತನ ಪರಿಷ್ಕರಣೆ ಸಂಬಂಧ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಮುಷ್ಕರಕ್ಕೆ ಚಾಲಕ ಮತ್ತು ನಿರ್ವಾಹಕರು ಇನ್ನು ಅಲ್ಪಸಲ್ಪ ಮೆಕ್ಯಾನಿಕ್ ಇವರಷ್ಟೇ ಏಕೆ ಸಾಥ್ ಕೊಡಬೇಕು ಸಂಘಟನೆಗಳ ಮುಖಂಡರೆ.
ಕಾರ್ಮಿಕ ಕಾಯ್ದೆಯಡಿ ಚಾಲನಾ ಸಿಬ್ಬಂದಿಗಳನ್ನು ಯಾರನ್ನು ಹೇಳದೆ ಕೇಳದೆ ನಿಮ್ಮಿಷ್ಟಕ್ಕೆ ನೀವೆ ಸೇರಿಸಿಕೊಂಡು ಈಗ ಅಧಿಕಾರಿಗಳು ಮುಷ್ಕರಕ್ಕೆ ಬರುವಂತಿಲ್ಲ ನೀವು ಮಾತ್ರ ಮಾಡಬೇಕು ಎಂದು ನೌಕರರ ನಂಬಿಸಿಕೊಂಡು ಹತ್ತಾರು ವರ್ಷಗಳಿಂದ ಚಾಲನಾ ಸಿಬ್ಬಂದಿಗಳ ಬೀದಿಗೆ ತಂದು ನಿಲ್ಲಿಸಿ ಮತ್ತೆ ಅವರು ಡ್ಯೂಟಿಗೆ ಹೋಗದಂತೆ ಮಾಡುತ್ತಿರುವ ಎಲ್ಲ ಸಂಘಟನೆಗಳ ಮುಖಂಡರಾದ ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ಪ್ರಜ್ಞಾವಂತ ಚಾಲನಾ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಇನ್ನು ನೀವು ಇವರನ್ನು ಕರೆದು ಮುಷ್ಕರಕ್ಕೆ ಕರೆ ನೀಡುತ್ತೀರಿ ನಿಮ್ಮನ್ನು ನಂಬಿಕೊಂಡು ಹೋರಾಟಕ್ಕೆ ಇಳಿಯುವ ಇವರಿಗಷ್ಟೇ ಸಂಬಳ ಜಾಸ್ತಿಯಾಗುತ್ತದೆಯೇ? ಅಧಿಕಾರಿಗಳಿಗಳಿಗೆ ಆಗುವುದಿಲ್ಲವೇ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದ್ದಾರೆ.
ನೋಡಿ ಸಂಬಳ ಜಾಸ್ತಿಯಾಗುವುದು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು, ಸಂಚಾರಿ ಅಧೀಕ್ಷಕರು, ಸಂಚಾರಿ ನಿರೀಕ್ಷಕರು, AWS, ADM ಆಡಳಿತ ಶಾಖೆಯವರು, ಟಿಕೆಟ್ ಆಡಳಿತ ಶಾಖೆಯವರು ಇವರಿಗೆಲ್ಲ. ಆದರೆ ಇವರೆಲ್ಲರೂ ಮುಷ್ಕರ ದಿನ ಕರ್ತವ್ಯ ಮಾಡುತ್ತಾರೆ ಘಟಕದಲ್ಲಿ ಇವರಿಗೆ ನಾವುಗಳು ಚಾಲಕ, ನಿರ್ವಾಹಕರು ಬೀದಿಗಿಳಿದು ಹೋರಾಟ ಮಾಡಿ ಸಂಬಳ ಜಾಸ್ತಿ ಮಾಡಿಸಿ ಕೊಡಬೇಕಾ? ನಾಚಿಕೆ ಆಗಬೇಕು, ಮೊದಲು ಚಾಲಕ ನಿರ್ವಾಹಕರಿಗೆ… ಎಂದು ತಮ್ಮನ್ನು ತಾವೇ ಶಪಿಸಿಕೊಂಡಿದ್ದಾರೆ.
ಇನ್ನು ಇವರೆಲ್ಲರಿಗೂ ಸಂಬಳ ಜಾಸ್ತಿ ಆಗುತ್ತೆ? ಇವರು ಸಹ ಮುಷ್ಕರ ದಿನ ಘಟಕಕ್ಕೆ ಯಾರು ಹೋಗಬಾರದು ವಿಶೇಷವಾಗಿ ಮುಷ್ಕರದಂದು ಘಟಕದ ಗೇಟ್‌ಗಳನ್ನು ಓಪನ್ ಮಾಡಬಾರದು ಅದು ಬಂದ್, ಅದು ಮುಷ್ಕರ ಅದನ್ನು ಬಿಟ್ಟು ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಮಾತ್ರ ಮುಷ್ಕರಕ್ಕೆ ಭಾಗಿಯಾಗಿದ್ದಾರೆಂದು ಅವರನ್ನು ಅವರಿಗೆ ಗುರಿಯಾದವರನ್ನು ಅಮಾನತು ಇಂಕ್ರಿಮೆಂಟ್ ಕಡಿತಮಾಡಿ, ವಜಾ, ವರ್ಗಾವಣೆ ಜತೆಗೆ ಪೊಲೀಸ್ ಕೇಸ್ ಹಾಕಿ ಹಿಂಸೆಕೊಡುವುದು.
ಈ ರೀತಿ ಹಲವಾರು ಶಿಕ್ಷೆಗಳನ್ನು ಕೊಡುತ್ತಾರೆ ಇದು ನಮಗೆ ಬೇಕಾ??? ಆದಕಾರಣ ಯಾವುದೇ ಕಾರಣಕ್ಕೂ ಯಾರೇ ಆಗಲಿ ಚಾಲಕ, ನಿರ್ವಾಹಕರು ನಾವು ಮುಸ್ಕರಕ್ಕೆ ಭಾಗವಹಿಸುವುದಿಲ್ಲ ಎಂದು ಖಂಡಿತವಾಗಿ ಧೈರ್ಯದಿಂದ ಹೇಳಿ.
ಚಾಲಕ, ನಿರ್ವಾಹಕರು ಇನ್ನು ಮುಂದೆ ಮುಷ್ಕರಕ್ಕೆ ಭಾಗವಹಿಸಬೇಕೆಂದರೆ ಮೊದಲು ಆಡಳಿತ ಮಂಡಳಿಯವರು ಬೀದಿಗಿಳಿಬೇಕು. ಅಧಿಕಾರಿಗಳು ಬೀದಿಗಳಿಗೆ ಬೇಕು ಸರ್ಕಾರದ ವಿರುದ್ಧ. ಅವಾಗ ಚಾಲಕ ಮತ್ತು ನಿರ್ವಾಹಕ, ಮೆಕ್ಯಾನಿಕ್ ಸಹ ಸಾಥ್ ಕೊಡ್ತಾರೆ, ಇಲ್ಲದಿದ್ದರೆ ಈ ನಿಮ್ಮ ನವರಂಗಿ ಆಟಕ್ಕೆ ಏಳು ಜನ್ಮ ಬಂದರು ಸಾಥ್ ಕೊಡುವುದಿಲ್ಲ.
ಹೀಗೆ ಚಾಲಕ ನಿರ್ವಾಹಕರು ಇನ್ನು ಮುಂದೆ ಬಹಿರಂಗವಾಗಿ ಹೇಳುತ್ತಾರೆ. ನಾವು ಮುಷ್ಕರ ದಿನ ಡ್ಯೂಟಿ ಮಾಡ್ತೀವಿ ಎಂದು ಏಕೆಂದರೆ ನಮಗೂ ಕುಟುಂಬವಿದೆ. ನಾವು ಸಮಾಜದಲ್ಲಿ ಘನತೆ ಗೌರವವನ್ನು ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಎಲ್ಲರಿಗಾಗಿ ನಾವು ನಮಗಾಗಿ ಎಲ್ಲರೂ ಎಂಬ ಧ್ಯೇಯವಾಕ್ಯದೊಂದಿಗೆ ಅಧಿಕಾರಿಗಳು ಸಾಥ್ ನೀಡಿದರೆ ನಾವು ಸಾಥ್ ನೀಡುತ್ತೇವೆ ಇಲ್ಲದಿದ್ದೆ ನಿಮಗೆ ಆದಾಗಲೇ ನಮಗೂ ವೇತನ ಪರಿಷ್ಕರಣೆ ಆಗಲಿ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಸಾರಿಗೆ ಕಾರ್ಮಿಕರ ನೌಕರರ ಸಂಘಟನೆಗಳ ಮುಖಂಡರು ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ನಿಮಗೆ ಇಷ್ಟ ಬಂದಂತೆ ಮುಷ್ಕರಕ್ಕೆ ಕರೆ ನೀಡಿ ನಮ್ಮನ್ನು ಬೀದಿಪಾಲು ಮಾಡಿ ನಾವು ಅಧಿಕಾರಿಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಸ್ಥಿತಿಗೆ ನಮ್ಮನ್ನು ತರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
Related

You Might Also Like
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ
ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...