CRIMENEWSನಮ್ಮಜಿಲ್ಲೆ

KSRTC ಬೇಲೂರು: ಡಿಎಂ ಕಿರುಕುಳಕ್ಕೆ ನೊಂದು ಡಿಪೋದಲ್ಲೆ ವಿಷ ಸೇವಿಸಿದ ಚಾಲಕ ಕಂ ನಿರ್ವಾಹಕ- ಸ್ಥಿತಿ ಗಂಭೀರ

ವಿಜಯಪಥ ಸಮಗ್ರ ಸುದ್ದಿ
  • ಡಿಎಂ ಶಾಜೀಯಾ ಭಾನು ಹಾಗೂ ಡಿಸಿ ಅಮಾನತಿಗೆ ಶಾಸಕ ಸುರೇಶ್‌ ಒತ್ತಾಯ
  • ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಪೊಲೀಸ್‌ ಅಧಿಕಾರಿಗಳು

ಬೇಲೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕಿ ಕಿರುಕುಳಕ್ಕೆ ನೊಂದ ಚಾಲಕ ಕಂ ನಿರ್ವಾಹಕರೊಬ್ಬರು ಡಿಪೋನಲ್ಲೇ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಬೇಲೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೋಟಿಗನಹಳ್ಳಿಯ ನಿವಾಸಿ ಚಾಲಕ ಕಂ ನಿರ್ವಾಹಕ ಹರೀಶ್‌ ಎಂಬುವರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದವರು. ಸದ್ಯ ಅವರನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

KSRTC ಬೇಲೂರು ಘಟಕದ ಡಿಎಂ ಶಾಜೀಯಾ ಭಾನು ಚಾಲಕ ಕಂ ನಿರ್ವಾಹಕ ಹರೀಶನಿಗೆ ಇಂದು ಮುಂಜಾನೆಯೇ ಡ್ಯೂಟಿಗೆ ಬಂದರೂ ಡ್ಯೂಟಿ ಕೊಟ್ಟಿಲ್ಲ. ಬದಲಿಗೆ ಕಿರುಕುಳ ನೀಡಿದ್ದಾರೆ. ಜತೆಗೆ ಚಾಲಕನನ್ನು ಡಿಎಂ ನಿಂದಿಸಿ ಅವಮಾಸಿನಿದ್ದಾರೆ.

ಇದರಿಂದ ಮನನೊಂದು ಚಾಲಕ ಕಂ ನಿರ್ವಾಹಕ ಹರೀಶ್‌ ವಿಶ್ರಾಂತಿ ಕೊಠಡಿಗೆ ಹೋಗಿ ವಿಷ ಸೇವಿಸಿ ಅಸ್ವಸ್ಥರಾಗಿದ್ದಾರೆ. ಅದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್‌.ಕೆ.ಸುರೇಶ್‌ ಚಾ ಕಂ ನಿ ಹರೀಶ್‌ನ ಆರೋಗ್ಯದ ಬಗ್ಗೆ ದೈದ್ಯರನ್ನು ವಿಚಾರಿಸಿದ್ದಾರೆ. ಅಲ್ಲದೆ ಈ ವೇಳೆ ನೌಕರನಿಗೆ ಕಿರುಕುಳ ನೀಡಿದ ಮತ್ತು ನೀಡುತ್ತಿರುವ ಡಿಪೋ ಮ್ಯಾನೇಜರ್‌ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಇಬ್ಬರನ್ನೂ ಕೂಡಲೇ ಅಮಾನತು ಮಾಡಬೇಕು ಎಂದು ಸಾರಿಗೆ ಸಚಿವರನ್ನು ಒತ್ತಾಯಿಸಿದ್ದಾರೆ.

ವಿಷಯ ತಿಳಿದು ಬೇಲೂರು ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಸಂಬಂಧ ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಇನ್ನು ಸರ್ಕಾರ ಕೂಡ ಸಾರಿಗೆ ನೌಕರರಿಗೆ ಸಿಗಬೇಕಾದ ವೇತನ ಸೌಲಭ್ಯವನ್ನು ಸರಿಯಾಗಿ ಕೊಡದೆ ಅರ್ಧಕ್ಕರ್ಧ ವೇತನ ಕೊಡುತ್ತಿದೆ. ಇತ್ತ ಸಮಯದ ಪರರಿವೇ ಇಲ್ಲದಂತೆ ಡ್ಯೂಟಿ ಮಾಡುತ್ತಿದ್ದರೂ ಕೂಡ ಅಧಿಕಾರಿಗಳು ನೌಕರರಿಗೆ ಕಿರುಕುಳ ಕೊಡುವುದು ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಎಲ್ಲ ಒತ್ತಡಗಳನ್ನು ಸಹಿಸಿಕೊಂಡು ಅರ್ಧ ಸಂಬಳಕ್ಕೆ ನೌಕರರು ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಭಾರಿ ನೋಯುತ್ತಿರುವ ನೌಕರರು ಈ ಕಿರುಕುಳದಿಂದ ಇನ್ನಷ್ಟು ನೊಂದ ಜೀವನವನ್ನೇ ಮುಗಿಸಿಕೊಳ್ಳುವುಕ್ಕೆ ಯತ್ನಿಸುತ್ತಿದ್ದಾರೆ.

ಇದು ನಿಲ್ಲಬೇಕಾದರೆ ಮೊದಲು ಅಧಿಕಾರಿಗಳು ನೌಕರರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು. ಜತೆಗೆ ಪ್ರತಿ ಡಿಪೋಗಳಲ್ಲೂ ಲಂಚ ಎಂಬುವುದು ಯಾರದೆ ಭಯವಿಲ್ಲದೆ ರಾಜರೋಷವಾಗಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಬೀಳಬೇಕು. ನೌಕರರ ಕಿತ್ತು ತಿನ್ನುವ ಈ ಲಂಚ ಎಂಬ ಭೂತಕ್ಕೆ ಕಡಿವಾಣ ಬೀಳಬೇಕು ಆಗ ಮಾತ್ರ ನೌಕರರು ತುಸು ನಿಮ್ಮದಿಯಿಂದ ಡ್ಯೂಟಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಇನ್ನು ಅಧಿಕಾರಿಗಳು ಕೂಡ ನೌಕರರ ಬಗ್ಗೆ ತುಚ್ಯವಾಗಿ ನೋಡದೆ ನಾವೆಲ್ಲರೂ ಕೂಡ ಸಾರ್ವಜನಿಕ ಸೇವಕರು ಎಂದು ಅಧಿಕಾರಿಗಳು ತಿಳಿದುಕೊಳ್ಳಬೇಖು. ಜತೆಗೆ ಸರ್ಕಾರದಿಂದ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ಒಗ್ಗಟ್ಟಾಗಬೇಕು. ಆದರೆ ಈ ಅಧಿಕಾರಿಗಳ ತಲೆಯಲ್ಲಿ ಅಹಂ ಎಂಬುವುದು ಹೊಕ್ಕಿದ್ದು ಇದರಿಂದ ಹೊರಬರದೆ ನೌಕರರಿಗೆ ಹಿಂಸೆ ನೀಡುವ ಪ್ರವತ್ತಿ ಬೆಳೆಸಿಕೊಂಡು ನಿತ್ಯ ಕಿರುಕುಳ ನೀಡುವುದನ್ನು ತಮ್ಮ ಡ್ಯೂಟಿ ಮಾಡಿಕೊಂಡಿಕೊಂಡಿದ್ದಾರೆ.

ಇನ್ನಾದರೂ ನೌಕರರ ಜತೆ ಸೌಜನ್ಯದಿಂದ ನಡೆಸಿಕೊಂಡು ನಾವು ಒತ್ತಡ ರಹಿತವಾಗಿ ಡ್ಯೂಟಿ ಮಾಡುವುದಕ್ಕೆ ಬಿಡಬೇಕು ಎಂದು ನೊಂದ ನೌಕರರು ಒತ್ತಾಯಿಸಿದ್ದಾರೆ. ಅಲ್ಲದೆ ನಾವೆಲ್ಲರೂ ಒಗ್ಗಟ್ಟಾಗೋಣ ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!