ಪುತ್ತೂರು: ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆಯೊಂದು ಪುತ್ತೂರಿನಲ್ಲಿ ಗುರುವಾರ ನಡೆದಿದೆ.
ಬಸ್ ನಿಲ್ದಾಣದಿಂದ ಹೊರಡುವ ವೇಳೆ ವಿದ್ಯಾರ್ಥಿ ರೈಟ್ ಪೋಯಿ ಎಂದು ಹೇಳಿದ್ದ ಹಾಗಾಗಿ ನಿರ್ವಾಹಕನೇ ರೈಟ್ ಪೋಯಿ ಎಂದು ಹೇಳಿದ್ದಾಗಿ ಭಾವಿಸಿಕೊಂಡು ಚಾಲಕ ಬಸ್ ಚಲಾಯಿಸಿದ್ದಾರೆ.
ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್‌ನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ಬಸ್ ಪುತ್ತೂರಿನಿಂದ ಹೊರಟು ಎಂ.ಟಿ.ರಸ್ತೆಯಾಗಿ ತಾಲೂಕು ಕಚೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ಚಾಲಕನಿಗೆ ಬಸ್‌ನಲ್ಲಿ ನಿರ್ವಾಹಕ ಇಲ್ಲದಿರುವುದು ಅರಿವಾಯಿತು. ಈ ಸಂದರ್ಭದಲ್ಲಿ ಬೇರೊಂದು ಕೆ.ಎಸ್.ಆರ್ .ಟಿ.ಸಿ. ಬಸ್ ಮೂಲಕ ನಿರ್ವಾಹಕ ಬಂದು ತನ್ನ ಕರ್ತವ್ಯದ ಬಸ್ ನ್ನು ಸೇರಿಕೊಂಡಿದ್ದಾರೆ.
ಚಾಲಕ ಮತ್ತು ನಿರ್ವಾಹಕರ ದಿಕ್ಕು ತಪ್ಪಿಸಿದ ವಿದ್ಯಾರ್ಥಿಯ ನಡೆಯಿಂದ ಸುಮಾರು 15 ನಿಮಿಷ ಬಸ್ ಸಂಚಾರ ತಡವಾಯಿತು. ಇದರಿಂದ ಪ್ರಯಾಣಿಕರು ವಿದ್ಯಾರ್ಥಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.