
ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಜಿಲ್ಲೆಯ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ನಿವಾಸಿ KSRTC ಬಸ್ ಚಾಲಕ ಬಿ.ಎಂ.ಪುಟ್ಟರಾಜು ಅವರ ಮಗ ಯಶಸ್.ಪಿ ಗೌಡ ಉತ್ತೀರ್ಣರಾಗಿದ್ದಾರೆ.
ಸಾಲಿಗ್ರಾಮ ಸರ್ಕಾರಿ ಜೂನಿಯರ್ ಕಾಲೇಜ್ (ಜಿಜೆಸಿ)ನಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 566 ಅಂಕ ಗಳಿಸಿ (ಶೇ.90.56) ಶಾಲೆಗೆ ಮೊದಲಿಗರಾಗಿ ತೇರ್ಗಡೆಯಾದ್ದಾರೆ. ಈ ಮೂಲಕ ಪೋಷಕರಿಗೆ, ಶಿಕ್ಷಕರಿಗೆ ಕೀರ್ತಿ ತಂದಿದ್ದಾರೆ.
ಸರ್ಕಾರಿಶಾಲೆಯಲ್ಲಿ ವಿದ್ಯಾಭ್ಯಾಸಮಾಡಿ ಗ್ರಾಮೀಣ ವಿದ್ಯಾರ್ಥಿಯಾಗಿ ಯಶಸ್ ಮಾಡಿರುವ ಸಾಧನೆ ಅನುಕರಣೀಯ. ಮುಂದೆ ಪಿಸಿಎಂಬಿ ಐಚ್ಛಿಕ ವಿಷಯಗಳನ್ನು ತೆಗೆದುಕೊಂಡು ವೈದ್ಯನಾಗಬೇಕು ಎಂಬ ಹಂಬಲ ಹೊಂದಿದ್ದಾರೆ.
