NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ಕ್ರೆಡಿಟ್ ಸಹಕಾರ ಸಂಘದ ಚುನಾವಣೆ ಫಲಿತಾಂಶ ಪ್ರಕಟ: 19ಕ್ಕೆ 18 ಕೂಟದ ಅಭ್ಯರ್ಥಿಗಳಿಗೆ ಒಲಿದ ವಿಜಯಲಕ್ಷ್ಮಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊನೆಗೂ ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಲಿ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು ನೌಕರರ ಕೂಟದಿಂದ ಸ್ಪರ್ಧಿಸಿದ್ದ 19 ಅಭ್ಯರ್ಥಿಗಳಲ್ಲಿ 18 ಅಭ್ಯರ್ಥಿಗಳು ವಿಜಯದ ನಗೆ ಬೀರಿದ್ದು ಮಲಕಪ್ಪ ಹಾವಿನಾಳ ಎಂಬುವರು ಸೋತ್ತಿದ್ದಾರೆ ಎಂದು ತಿಳಿದು ಬಂದಿದೆ.

ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಲಿ ಚುನಾವಣೆ ಕಳೆದ ಜುಲೈ 7ರಂದು ನಡೆದಿದ್ದು, ಆ ವೇಳೆ ಉಚ್ಚ ನ್ಯಾಯಾಲಯದ ಆದೇಶ ಮೇರೆಗೆ ವೋಟ್‌ ಹಾಕಿದವರ ವೋಟ್‌ಗಳನ್ನು 24 ಬಾಕ್ಸ್‌ಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಇನ್ನು ಮತ ಎಣಿಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಆದೇಶಾನುಸಾರ ಮತ ಎಣಿಕೆಯ ದಿನಾಂಕವನ್ನು ಇಂದಿಗೆ ನಿಗದಿಪಡಿಸಲಾಗಿತ್ತು.

ಇಂದು ನಡೆದ ಮತ ಎಣಿಕೆಯಲ್ಲಿ ಅನಂತ ಸುಬ್ಬರಾವ್‌ ಬಣದ ಅಭ್ಯರ್ಥೀಗಳಲ್ಲಿ 18 ಅಭ್ಯರ್ಥಿಗಳು ಕೂಟದ ಪರ ಅಭ್ಯರ್ಥಿಗಳ ವಿರುದ್ಧ ಸೋತ್ತಿದ್ದಾರೆ. ಅದದ್ದರೆ ಒಬ್ಬರು ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಉಚ್ಛ ನ್ಯಾಯಾಲಯವು 18/7/2024 ರಂದು ಹೊರಡಿಸಿರುವ ಆದೇಶದಂತೆ ಮತ ಎಣಿಕೆ ಮಾಡಲು ಎಲ್ಲ ಅಭ್ಯರ್ಥಿಗಳಿಗೆ ನೋಟಿಸ್ ನೀಡಬೇಕಾಗಿರುವುದರಿಂದ ಮತ ಎಣಿಕೆ ಕಾರ್ಯವನ್ನು ಆಗಸ್ಟ್‌ 18ರಂದು ನಡೆಸಲು ವ್ಯವಸ್ಥೆ ಮಾಡಬೇಕು ಎಂದು ರಿಟರ್ನಿಂಗ್‌ ಆಫಿಸರ್‌ ಎನ್‌.ಲಕ್ಷಣ್‌ ಸೂಚಿಸಿದ್ದರು ಅದರಂತೆ ಇದು ಮತ ಎಣಿಕೆ ಕಾರ್ಯ ನಡೆದಿದೆ.

ಈಗಾಗಲೇ ಉಚ್ಛ ನ್ಯಾಯಾಲಯದ ಆದೇಶವಿಲ್ಲದೆ ಮತದಾನ ಮಾಡಿದ್ದ ಮತಗಳ ಎಣಿಕೆ ಕಾರ್ಯ ಜುಲೈ 7ರಂದೆ ಮುಗಿದಿದ್ದು, ಆ ವೇಳೆ ಸಂಸ್ಥೆಯ ಕೂಟದ ಅಭ್ಯರ್ಥಿಗಳು ಹೆಚ್ಚು ಮತ ಪಡೆದು ಅನಂತ ಸುಬ್ಬರಾವ್‌ ಅವರ ಬಣದ ಅಭ್ಯರ್ಥಿಗಳನ್ನು ಹಿಂದಿಕ್ಕಿದ್ದರು. ಆದರೆ, ಇಂದು ನಡೆದ ಮತಗಳ ಎಣಿಕೆಯನ್ನು ಹಿಂದೆ ನಡೆದಿದ್ದ ಮತಗಳ ಎಣಿಕೆಗೆ ಸೇರಿಸಿ ಲೆಕ್ಕ ಹಾಕಿದಾಗ ಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ತಿಳಿದು ಬಂದಿದ್ದು ಇನ್ನು ಚುನಾವಣಾಧಿಕಾರಿಗಳ ಘೋಷಣೆ ಮಾತ್ರ ಬಾಕಿ ಇದೆ ಎಂದು ತಿಳಿದು ಬಂದಿದೆ.

ಈ ಮೂಲಕ ಭಾರಿ ಹಣಹಣಿ ಏರ್ಪಟ್ಟಿದ್ದ ಈ ಚುನಾವಣೆಯಲ್ಲಿ ಶತಾಯಗತಾಯ ನಾವೇ ಗೆಲ್ಲಬೇಕು ಇಲ್ಲ ನಾವೇ ಗೆಲ್ಲಬೇಕು ಎಂದು ಪೈಪೋಟಿಯಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಪ್ರಚಾರ ಮಾಡಿದ್ದ ಕೂಟದ ಚಂದ್ರು ಬಣ ಮತ್ತು ಅನಂತ ಸುಬ್ಬರಾವ್‌ ಬಣದಲ್ಲಿ ಸದ್ಯಕ್ಕೆ ಕೂಟದ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ.

Leave a Reply

error: Content is protected !!
LATEST
KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌