NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಸೈಕಲ್‌ಜಾಥಾದ ಯಶಸ್ಸು ಸಹಿಸದೆ ನೌಕರರನ್ನು ಎತ್ತಿಕಟ್ಟುವ ಕೆಲಸ – ಕೂಟದ ಅಧ್ಯಕ್ಷರ ವಿರುದ್ಧ ಅಪಪ್ರಚಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಇದೇ ಅ.10ರಿಂದ ಹಮ್ಮಿಕೊಂಡಿರುವ ರಾಜ್ಯಾದ್ಯಂತ ಬೃಹತ್‌ಸೈಕಲ್‌ಜಾಥಾ ಹತ್ತಿಕ್ಕುವ ಹುನ್ನಾರಗಳು ನಡೆಯುತ್ತಿವೆ.

ಈ ನಿಟ್ಟಿನಲ್ಲಿ ಕೂಟದ ಅಧ್ಯಕ್ಷ ಚಂದ್ರಶೇಖರ್‌ವಿರುದ್ಧ ವಜಾಗೊಂಡ, ಅಮಾನತಾಗಿರುವ ಮತ್ತು ಇತರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ನೌಕರರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೆಲ ಸಂಘಟನೆಗಳ ಮುಖಂಡರು ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ.

ಸಾರಿಗೆ ನೌಕರರ ಕೂಟದ ಅಧ್ಯಕ್ಷರು ನೌಕರರು ಮತ್ತು ಕೂಟದ ಪದಾಧಿಕಾರಿಗಳ ಮಾತನ್ನೇ ಕೇಳುವುದಿಲ್ಲ ಎಂದು ಎರಡು ತಿಂಗಳ ಹಳೆಯ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಈ ಮೂಲಕ ಸೈಕಲ್‌ಜಾಥಾವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.

ಆದರೆ, ಈ ಬಗ್ಗೆ ಯಾವ ನೌಕರರು ತೆಲೆ ಕೆಡಿಸಿಕೊಳ್ಳದೆ ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಚಂದ್ರು ಮನವಿ ಮಾಡಿದ್ದಾರೆ. ಅಲ್ಲದೆ ನಾವು ಕುಟುಂಬವನ್ನು ನೂರಾರು ಕಿಮೀ ದೂರದಲ್ಲಿ ಬಿಟ್ಟು ರಾಜ್ಯಾದ ಮೂಲೆ ಮೂಲೆಗಳಿಗೂ ಸೈಕಲ್‌ಜಾಥಾ ಮಾಡುತ್ತಿದ್ದೇವೆ. ಅಲ್ಲಿ ನಮ್ಮ ಕುಟುಂಬ ಯಾವ ಸ್ಥಿತಿಯಲ್ಲಿ ಇದೆ ಎಂಬುವುದು ಕೂಡ ನಮಗೆ ಗೊತ್ತಾಗುತ್ತಿಲ್ಲ.

ಈ ಹೋರಾಟ ನನಗಾಗಿ ಅಲ್ಲ, ನಮಗಾಗಿ ಅಂದರೆ ಸಮಸ್ತ ನೌಕರರು ಮತ್ತು ಕುಟುಂಬದವರ ಮುಂದಿನ ಭವಿಷ್ಯಕ್ಕಾಗಿ. ಈಗಾಗಲೇ ಪ್ರತಿ ನೌಕರನಿಗೂ ಇದು ತಿಳಿದಿದೆ. ಈ ಬಗ್ಗೆ ನಾನು ಏನನ್ನು ಹೇಳಬೇಕಿಲ್ಲ. ಅದರೆ, ಕೆಲ ಕಿಡಿಗೇಡಿಗಳು ನೌಕರರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಒಂದು ಸಂಘಟನೆ ಎಂದು ನೋಡಬೇಡಿ ನಾವು ನಿಮ್ಮ ಭವಿಷ್ಯ ಉತ್ತಮವಾಗಿರಲಿ ಎಂದು ಮತ್ತು ನೌಕರರಿಗೆ ಸಿಗಬೇಕಿರುವ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿಗಳ ಮುಂದೆ ಮಂಡಿಸುತ್ತಿದ್ದು ಈಡೇರಸಬೇಕು ಎಂದು ಮನವಿ ಮಾಡುತ್ತಿದ್ದೇವೆ.

Advertisement

ಆದರೆ, ನಮ್ಮ ಬೇಡಿಕೆಗಳಲ್ಲಿ ಪ್ರಮುಖವಾಗಿರುವ ವೇತನ ಆಯೋಗದ ಬಗ್ಗೆ ನಮ್ಮ ನೌಕರರ ಹಲವು ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಮಾನ ವೇತನ ಬೇಡ ಎಂಬ ನಿಟ್ಟಿನಲ್ಲಿ ಮಾತನಾಡುತ್ತಿದ್ದಾರೆ.

ಅವರಂತೆ ನಾವು ಮಾಡಿದರೆ ಮತ್ತೆ 4 ವರ್ಷಕ್ಕೊಮ್ಮೆ ಇದೆ ಅಮಾನತು, ವಜಾ ಶಿಕ್ಷೆಗೆ ನೌಕರರು ಗುರಿಯಾಗುತ್ತಲೇ ಇರುತ್ತೇವೆ. ಅದು ಬೇಡ ನಮಗೆ ಶಾಶ್ವತ ಪರಿಹಾರ ಬೇಕು ಎಂದು ಎಂಬ ನಿಟ್ಟಿನಲ್ಲಿ ನಾವು ಅಂತಿಮವಾಗಿ ಈ ಜಾಥಾ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ಇದೇ ಅ.27ರಂದು ಕಲಬುರಗಿಯಲ್ಲಿ ಬೃಹತ್‌ಸಮಾವೇಶ ನಡೆಯಲಿದೆ. ಅದಕ್ಕೆ ಸಾವಿರಕ್ಕೂ ಮೀರಿ ನೌಕರರು ಭಾಗವಹಿಸಲಿದ್ದಾರೆ. ಈ ಸಮಾವೇಶವನ್ನು ಹತ್ತಿಕ್ಕುವ ಸಲುವಾಗಿಯೂ ಈ ಪಿತೂರಿ ಮಾಡುತ್ತಿದ್ದಾರೆ ಎಂದು ಚಂದ್ರು ಆರೋಪಿಸಿದ್ದಾರೆ.

ಒಟ್ಟಾರೆ ನಮ್ಮ ಜೀವವಿರುವ ವರೆಗೂ ನಾವು ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತಿರುವತ್ತೇವೆ ಎಂದು ನೌಕರರ ಕೂಟದ ಎಲ್ಲ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಇನ್ನು ಕಳೆದ 2-3 ತಿಂಗಳ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗುತ್ತಿರುವುದರ ಬಗ್ಗೆ ಕೂಟದ ಜಮರಾಮ ರಾಥೋಡ್‌ಅವರು ವಿಜಯಪಥಕ್ಕೆ ಪ್ರತಿಕ್ರಿಯಿಸಿದ್ದು, ಅಂದು ಮಾತನಾಡಿರುವುದು ನಾವೇ. ಅದು ಅಂದಿನ ಸಂದರ್ಭದಲ್ಲಿ ನಮ್ಮನ್ನು ಯಾರೋ ದಿಕ್ಕು ತಪ್ಪಿಸಿದ್ದರಿಂದ ಸ್ವಲ್ಪಕೋಪಗೊಂಡು ಚಂದ್ರಶೇಖರ್‌ಅವರ ಬಗ್ಗೆ ಮಾತನಾಡಿದ್ದೇವೆ. ಆದರೆ ಆ ರೀತಿ ಏನು ಇಲ್ಲ ನಾನು ಕೂಟದಲ್ಲೇ ಇದ್ದೇನೆ. ಈಗ ದೊಡ್ಡಮಟ್ಟದ ಸಮಾವೇಶ ಮಾಡುತ್ತಿದ್ದೇವೆ. ಹೀಗಾಗಿ ನೌಕರರು ಯಾರು ಆ ಆಡಿಯೋ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ವಿಜಯಪಥ - vijayapatha
Deva
the authorDeva

Leave a Reply

error: Content is protected !!