KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ

ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್‌ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು ಸಾರಿಗೆ ಇಲಾಖೆ ಪ್ರತಿಪಾದಿಸಿದೆ.
ಅಂದರೆ, 2020ರಲ್ಲಿ ನಡೆಯಬೇಕಿದ್ದ ಪರಿಷ್ಕರಣೆಯು ಕೋವಿಡ್‌ನ ಕಾರಣದಿಂದ ಮುಂದಕ್ಕೆ ಹೋಗಿತ್ತು. ಪರಿಷ್ಕರಣೆ ಮೂರು ವರ್ಷ ತಡವಾಯಿತು ಎಂದೇ, ಆರ್ಥಿಕ ನಿಯಮಾವಳಿಗಳ ಪ್ರಕಾರ 2023ರಲ್ಲಿ ಶೇ.15ರಷ್ಟು ಏರಿಕೆ ಮಾಡಲಾಗಿತ್ತು. ಸರ್ಕಾರಿ ನೌಕರರಿಗೂ ಈ ಮಟ್ಟದ ವೇತನ ಏರಿಕೆ ನೀಡಿಲ್ಲ ಎಂದು ಇಲಾಖೆಯ ಮೂಲಗಳು ಹೇಳಿವೆ.
ಇನ್ನು ಬಹಳ ಮುಖ್ಯವಾಗಿ ನಾನು ಗಮನಿಸಿರುವಂತೆ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಬೇಡಿಕೆಯಲ್ಲಿಯೇ ಒಮ್ಮತ ಇಲ್ಲ. ಬೇಡಿಕೆ ವಿಚಾರದಲ್ಲಿ ಸಂಘಟನೆಗಳು ಮೊದಲು ಒಮ್ಮತಕ್ಕೆ ಬರಲಿ. ಇಲ್ಲದಿದ್ದಲ್ಲಿ, ಯಾರ ಬೇಡಿಕೆಯನ್ನು ನಾವು ಪರಿಗಣಿಸಬೇಕು ಎಂದು ಪ್ರಶ್ನಿದೆ ಸಾರಿಗೆ ಇಲಾಖೆ.
2023ರ ವೇತನ ಪರಿಷ್ಕರಣೆಯನ್ನು 2020ಕ್ಕೆ ಅನ್ವಯಿಸಿ, 38 ತಿಂಗಳ ಪರಿಷ್ಕೃತ ವೇತನದ ಬಾಕಿ ಪಾವತಿಸಿ ಎಂದು ಕೆಲ ಸಂಘಟನೆಗಳು ಕೋರಿವೆ. 2023ರ ಆದೇಶದಲ್ಲಿ, ಪರಿಷ್ಕರಣೆ 2020ಕ್ಕೆ ಅನ್ವಯಿಸುತ್ತದೆ ಎಂದು ಎಲ್ಲಿ ಉಲ್ಲೇಖಿಸಲಾಗಿದೆ? 2023ರಲ್ಲಿ ಪರಿಷ್ಕರಣೆ ಆದೇಶ ಹೊರಡಿಸಿದ್ದು ಹಿಂದಿನ ಸರ್ಕಾರ. ಆ ಆದೇಶವನ್ನು ಈಗಿನ ಸರ್ಕಾರ ಯಾವ ಮಾನದಂಡದ ಆಧಾರದಲ್ಲಿ ಬದಲಿಸಲು ಸಾಧ್ಯ? ವೇತನ ಪರಿಷ್ಕರಣೆಯನ್ನು ಪೂರ್ವಾನ್ವಯ ಮಾಡಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.
ಸರ್ಕಾರಿ ನೌಕರರಿಗೆ ಸಮನಾದ ವೇತನವನ್ನು ನೀಡಬೇಕು ಎಂದು ಕೆಲ ಸಂಘಟನೆಗಳು ಬೇಡಿಕೆ ಇಟ್ಟಿವೆ. ಸಾರಿಗೆ ನೌಕರರು ಸರ್ಕಾರಿ ನೌಕರರಲ್ಲ. ಸಾರಿಗೆ ನಿಗಮಗಳ ರೀತಿ ಸರ್ಕಾರದಡಿಯಲ್ಲಿ 62ಕ್ಕೂ ಹೆಚ್ಚು ನಿಗಮ-ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಿಗೆ ಅನ್ವಯವಾಗುವ ನಿಯಮಗಳ ಅಡಿಯಲ್ಲೇ ಪರಿಷ್ಕರಣೆ ನಡೆಯಬೇಕು. ನಿಯಮದಂತೆ 2023ರ ನಾಲ್ಕು ವರ್ಷದ ನಂತರ, ಅಂದರೆ 2027ರ ಮಾರ್ಚ್‌ನಲ್ಲಿ ಮಾತ್ರ ಪರಿಷ್ಕರಣೆ ಮಾಡಲು ಸಾಧ್ಯ ಎ೦ದಿದೆ.
ಸಾರಿಗೆ ನಿಗಮಗಳ ನೌಕರರ ಶ್ರೇಯಕ್ಕಾಗಿ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಆರೇಳು ವರ್ಷಗಳಿಂದ ಸ್ಥಗಿತವಾಗಿದ್ದ ನೇಮಕಾತಿಗೆ ಚಾಲನೆ ನೀಡಿದ್ದು, 10,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಆರಂಭವಾಗಿದ್ದು ಈಗಾಗಲೇ ಸಾವಿರಾರು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ 1,000 ಅನುಕಂಪದ ನೇಮಕಾತಿಗಳೂ ಇವೆ.
ಇನ್ನು 5,200 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಹೀಗೆ ನೌಕರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಹೀಗಾಗಿ ನೌಕರರು ಮುಷ್ಕರವನ್ನು ಕೈಬಿಡಬೇಕು ಎಂದು ಸಾರಿಗೆ ಇಲಾಖೆ ಮನವಿ ಮಾಡಿದೆ.
Related

You Might Also Like
ಕರ್ತವ್ಯ ಲೋಪವೆಸಗಿದ ಮೂವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ
ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್...
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಜಿಲ್ಲಾಧಿಕಾರಿ ಬಸವರಾಜು
10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ...
ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ: KSRTC ಎಂಡಿ ಅಕ್ರಮ್ ಪಾಷ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿರುವುದರಿಂದ ನೌಕರರು...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ನಾಳೆ ಖಾಸಗಿ ಬಸ್ ಮಾಲೀಕರ ಸಭೆ ಕರೆದ ಸಾರಿಗೆ ಆಯುಕ್ತರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಆಯುಕ್ತರ...
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...