NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್‌ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು ಸಾರಿಗೆ ಇಲಾಖೆ ಪ್ರತಿಪಾದಿಸಿದೆ.

ಅಂದರೆ, 2020ರಲ್ಲಿ ನಡೆಯಬೇಕಿದ್ದ ಪರಿಷ್ಕರಣೆಯು ಕೋವಿಡ್‌ನ ಕಾರಣದಿಂದ ಮುಂದಕ್ಕೆ ಹೋಗಿತ್ತು. ಪರಿಷ್ಕರಣೆ ಮೂರು ವರ್ಷ ತಡವಾಯಿತು ಎಂದೇ, ಆರ್ಥಿಕ ನಿಯಮಾವಳಿಗಳ ಪ್ರಕಾರ 2023ರಲ್ಲಿ ಶೇ.15ರಷ್ಟು ಏರಿಕೆ ಮಾಡಲಾಗಿತ್ತು. ಸರ್ಕಾರಿ ನೌಕರರಿಗೂ ಈ ಮಟ್ಟದ ವೇತನ ಏರಿಕೆ ನೀಡಿಲ್ಲ ಎಂದು ಇಲಾಖೆಯ ಮೂಲಗಳು ಹೇಳಿವೆ.

ಇನ್ನು ಬಹಳ ಮುಖ್ಯವಾಗಿ ನಾನು ಗಮನಿಸಿರುವಂತೆ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಬೇಡಿಕೆಯಲ್ಲಿಯೇ ಒಮ್ಮತ ಇಲ್ಲ. ಬೇಡಿಕೆ ವಿಚಾರದಲ್ಲಿ ಸಂಘಟನೆಗಳು ಮೊದಲು ಒಮ್ಮತಕ್ಕೆ ಬರಲಿ. ಇಲ್ಲದಿದ್ದಲ್ಲಿ, ಯಾರ ಬೇಡಿಕೆಯನ್ನು ನಾವು ಪರಿಗಣಿಸಬೇಕು ಎಂದು ಪ್ರಶ್ನಿದೆ ಸಾರಿಗೆ ಇಲಾಖೆ.

2023ರ ವೇತನ ಪರಿಷ್ಕರಣೆಯನ್ನು 2020ಕ್ಕೆ ಅನ್ವಯಿಸಿ, 38 ತಿಂಗಳ ಪರಿಷ್ಕೃತ ವೇತನದ ಬಾಕಿ ಪಾವತಿಸಿ ಎಂದು ಕೆಲ ಸಂಘಟನೆಗಳು ಕೋರಿವೆ. 2023ರ ಆದೇಶದಲ್ಲಿ, ಪರಿಷ್ಕರಣೆ 2020ಕ್ಕೆ ಅನ್ವಯಿಸುತ್ತದೆ ಎಂದು ಎಲ್ಲಿ ಉಲ್ಲೇಖಿಸಲಾಗಿದೆ? 2023ರಲ್ಲಿ ಪರಿಷ್ಕರಣೆ ಆದೇಶ ಹೊರಡಿಸಿದ್ದು ಹಿಂದಿನ ಸರ್ಕಾರ. ಆ ಆದೇಶವನ್ನು ಈಗಿನ ಸರ್ಕಾರ ಯಾವ ಮಾನದಂಡದ ಆಧಾರದಲ್ಲಿ ಬದಲಿಸಲು ಸಾಧ್ಯ? ವೇತನ ಪರಿಷ್ಕರಣೆಯನ್ನು ಪೂರ್ವಾನ್ವಯ ಮಾಡಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಸರ್ಕಾರಿ ನೌಕರರಿಗೆ ಸಮನಾದ ವೇತನವನ್ನು ನೀಡಬೇಕು ಎಂದು ಕೆಲ ಸಂಘಟನೆಗಳು ಬೇಡಿಕೆ ಇಟ್ಟಿವೆ. ಸಾರಿಗೆ ನೌಕರರು ಸರ್ಕಾರಿ ನೌಕರರಲ್ಲ. ಸಾರಿಗೆ ನಿಗಮಗಳ ರೀತಿ ಸರ್ಕಾರದಡಿಯಲ್ಲಿ 62ಕ್ಕೂ ಹೆಚ್ಚು ನಿಗಮ-ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಿಗೆ ಅನ್ವಯವಾಗುವ ನಿಯಮಗಳ ಅಡಿಯಲ್ಲೇ ಪರಿಷ್ಕರಣೆ ನಡೆಯಬೇಕು. ನಿಯಮದಂತೆ 2023ರ ನಾಲ್ಕು ವರ್ಷದ ನಂತರ, ಅಂದರೆ 2027ರ ಮಾರ್ಚ್‌ನಲ್ಲಿ ಮಾತ್ರ ಪರಿಷ್ಕರಣೆ ಮಾಡಲು ಸಾಧ್ಯ ಎ೦ದಿದೆ.

ಸಾರಿಗೆ ನಿಗಮಗಳ ನೌಕರರ ಶ್ರೇಯಕ್ಕಾಗಿ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಆರೇಳು ವರ್ಷಗಳಿಂದ ಸ್ಥಗಿತವಾಗಿದ್ದ ನೇಮಕಾತಿಗೆ ಚಾಲನೆ ನೀಡಿದ್ದು, 10,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಆರಂಭವಾಗಿದ್ದು ಈಗಾಗಲೇ ಸಾವಿರಾರು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ 1,000 ಅನುಕಂಪದ ನೇಮಕಾತಿಗಳೂ ಇವೆ.

ಇನ್ನು 5,200 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಹೀಗೆ ನೌಕರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಹೀಗಾಗಿ ನೌಕರರು ಮುಷ್ಕರವನ್ನು ಕೈಬಿಡಬೇಕು ಎಂದು ಸಾರಿಗೆ ಇಲಾಖೆ ಮನವಿ ಮಾಡಿದೆ.

Megha
the authorMegha

Leave a Reply

error: Content is protected !!
Latest news
ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆ: ಪ್ರಾಣದ ಹಂಗು ತೊರೆದು ಅಮ್ಮನ ರಕ್ಷಿಸಿದ ಮಗಳು ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರಿಗೆ ಸಮಾನ ವೇತನ ಕೊಡಿಸಲು ಮುಂದಾಗಿ: ನೌಕರನ ಮನವಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರವು ಕಬ್ಬು ಬೇಸಾಯದಲ್ಲಿ ಎಐ ತಂತ್ರಜ್ಞಾನ ಜಾರಿಗೆ ತರಲಿ: ಕುರುಬೂರು ಶಾಂತಕುಮಾರ್ ಹುಚ್ಚಮ್ಮ ದೇವಿಯ 650 ಕುರಿಗಳ ಮೆರವಣಿಗೆ, 12 ಟನ್ ಮಟನ್ ಸಾರು: ಇತಿಹಾಸ ನಿರ್ಮಿಸಿದ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನ... KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆ... ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು... ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ 6ನೇ ದಿನ ಪೂರ್ಣಗೊಂಡ ಸಾರಿಗೆ ನೌಕರರ ಪಾದಯಾತ್ರೆ: ಏ.15ರಂದು ಸೀಬಿಯಿಂದ ಮುಂದುವರಿಕೆ ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್