NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಪರಿಷ್ಕರಣೆ ನನ್ನ ಹಂತ ದಾಟಿ ಸಿಎಂ ಬಳಿ ಹೋಗಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ನನ್ನ ಹಂತ ದಾಟಿ ಮುಖ್ಯಮಂತ್ರಿಗಳ ಬಳಿ ಹೋಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರ ನಾಯಕತ್ವದಲ್ಲಿ ಸಭೆಯಾಗಿ ನಿರ್ಧಾರವಾಗಬೇಕು. ಈ ವಿಚಾರದಲ್ಲಿ ನಾನು ವೀಕ್ ಆಗಿಲ್ಲ, ಸ್ಟ್ರಾಂಗ್ ಆಗಿದ್ದೇನೆ ಎಂದು ತಿಳಿಸಿದರು.

ಇನ್ನು ನಾವು ಅಧಿಕಾರದಲ್ಲಿದ್ದಾಗ 2016ರಲ್ಲಿ ವೇತನ ಪರಿಷ್ಕರಣೆ ಮಾಡಲಾಯಿತು. ನಂತರ 2020ರಲ್ಲಿ ಮಾಡಬೇಕಿತ್ತು. ಕೋವಿಡ್ ಕಾರಣದಿಂದ ಹಿಂದಿನ ಸರ್ಕಾರದವರು 2023ರಲ್ಲಿ ಹೆಚ್ಚಳ ಮಾಡಿದರು.

ಅದನ್ನು 2020 ಜನವರಿಯಿಂದ ಅನ್ವಯವಾಗುವಂತೆ ಆದೇಶ ಮಾಡಬೇಕಿತ್ತು. ಆದರೆ ಆದೇಶದಲ್ಲಿ 2023ರಿಂದ ಅನುಷ್ಠಾನ ಎಂದು ಮಾಡಿರುವುದು ಇದೀಗ ಸಮಸ್ಯೆಯಾಗಿದೆ ಎಂದು ಹೇಳಿದರು.

ಅಲ್ಲದೆ ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿರುವ ಕಾರಣ ಇದನ್ನು ಅವರೇ ಬಗೆಹರಿಸಬೇಕಿದೆ. ಹಿಂದಿನ ಸರ್ಕಾರದ ಆದೇಶದಲ್ಲಿನ ನ್ಯೂನತೆಯಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ‌ ಎಂದರು.

ಇನ್ನು ಹಿಂದಿನ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ನೌಕರರ ನೇಮಕಾತಿ ಮಾಡಿಕೊಳ್ಳದ ಪರಿಣಾಮ ಹೊರಗುತ್ತಿಗೆ ಜಾಸ್ತಿಯಾಗಿದೆ. 2016ರಿಂದ 2023ರವರೆಗೆ ನೇಮಕಾತಿಯಾಗಲಿಲ್ಲ. ಹೀಗಾಗಿ ಚಾಲಕರು, ಮೆಕ್ಯಾನಿಕ್‌ಗಳನ್ನು ಹೊರಗುತ್ತಿಗೆ ಮೇಲೆ ಪಡೆಯಲಾಗಿದೆ ಎಂದು ತಿಳಿಸಿದರು.

Megha
the authorMegha

Leave a Reply

error: Content is protected !!