NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಪರಿಷ್ಕರಣೆ ನನ್ನ ಹಂತ ದಾಟಿ ಸಿಎಂ ಬಳಿ ಹೋಗಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ನನ್ನ ಹಂತ ದಾಟಿ ಮುಖ್ಯಮಂತ್ರಿಗಳ ಬಳಿ ಹೋಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರ ನಾಯಕತ್ವದಲ್ಲಿ ಸಭೆಯಾಗಿ ನಿರ್ಧಾರವಾಗಬೇಕು. ಈ ವಿಚಾರದಲ್ಲಿ ನಾನು ವೀಕ್ ಆಗಿಲ್ಲ, ಸ್ಟ್ರಾಂಗ್ ಆಗಿದ್ದೇನೆ ಎಂದು ತಿಳಿಸಿದರು.

ಇನ್ನು ನಾವು ಅಧಿಕಾರದಲ್ಲಿದ್ದಾಗ 2016ರಲ್ಲಿ ವೇತನ ಪರಿಷ್ಕರಣೆ ಮಾಡಲಾಯಿತು. ನಂತರ 2020ರಲ್ಲಿ ಮಾಡಬೇಕಿತ್ತು. ಕೋವಿಡ್ ಕಾರಣದಿಂದ ಹಿಂದಿನ ಸರ್ಕಾರದವರು 2023ರಲ್ಲಿ ಹೆಚ್ಚಳ ಮಾಡಿದರು.

ಅದನ್ನು 2020 ಜನವರಿಯಿಂದ ಅನ್ವಯವಾಗುವಂತೆ ಆದೇಶ ಮಾಡಬೇಕಿತ್ತು. ಆದರೆ ಆದೇಶದಲ್ಲಿ 2023ರಿಂದ ಅನುಷ್ಠಾನ ಎಂದು ಮಾಡಿರುವುದು ಇದೀಗ ಸಮಸ್ಯೆಯಾಗಿದೆ ಎಂದು ಹೇಳಿದರು.

ಅಲ್ಲದೆ ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿರುವ ಕಾರಣ ಇದನ್ನು ಅವರೇ ಬಗೆಹರಿಸಬೇಕಿದೆ. ಹಿಂದಿನ ಸರ್ಕಾರದ ಆದೇಶದಲ್ಲಿನ ನ್ಯೂನತೆಯಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ‌ ಎಂದರು.

ಇನ್ನು ಹಿಂದಿನ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ನೌಕರರ ನೇಮಕಾತಿ ಮಾಡಿಕೊಳ್ಳದ ಪರಿಣಾಮ ಹೊರಗುತ್ತಿಗೆ ಜಾಸ್ತಿಯಾಗಿದೆ. 2016ರಿಂದ 2023ರವರೆಗೆ ನೇಮಕಾತಿಯಾಗಲಿಲ್ಲ. ಹೀಗಾಗಿ ಚಾಲಕರು, ಮೆಕ್ಯಾನಿಕ್‌ಗಳನ್ನು ಹೊರಗುತ್ತಿಗೆ ಮೇಲೆ ಪಡೆಯಲಾಗಿದೆ ಎಂದು ತಿಳಿಸಿದರು.

Megha
the authorMegha

Leave a Reply

error: Content is protected !!
Latest news
ರೈತರ ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ: ಕೇಂದ್ರ-ರಾಜ್ಯ. ಸರ್ಕಾರಗಳಿಗೆ ಕುರುಬೂರು ಶಾಂತಕುಮಾರ್ ಎಚ್ಚರಿಕೆ BMTC "ವಜ್ರ ವಿಸ್ತಾರ" ಬಸ್‌ಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ, ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ- ಸಿಟಿಎಂ ... ನಾಳೆ ಕನಿಷ್ಠ ಪಿಂಚಣಿ 7,500 ರೂ. ಮಾಡಲು ಆಗ್ರಹಿಸಿ ಪಿಎಫ್ ಕಚೇರಿ ಮುಂದೆ EPS-95, BMTC-KSRTC ನಿವೃತ್ತ ನೌಕರರ ಪ್ರತ... KSRTC ನೌಕರರದ್ದು ಹಾವು ಸಾಯೊಲ್ಲ ಕೋಲು ಮುರಿಯೊಲ್ಲ ಎಂಬ ಸ್ಥಿತಿ: ಇಂದಿನ ರಾಜೀ ಸಂಧಾನ ಸಭೆ ಮತ್ತೆ ವಿಫಲ ಜೂ.10ಕ್ಕೆ ಮ... 11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು BPL ಕಾರ್ಡ್‌ದಾರರು ಮಾತ್ರ ಗೃಹಲಕ್ಷ್ಮಿ ಫಲಾನುಭವಿಗಳು ಆದರೆ, ಅರ್ಹತೆ ಮೀರಿದವರು ಎಂದರೆ ಯಾರು? ಸರ್ಕಾರವನ್ನು ಪ್ರಶ್ನಿಸ... ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈ 2 ಯೋಜನಗೆಳು ಇನ್ನು ಮುಂದೆ ಸಿಗಲ್ಲ!? ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ...