NEWSನಮ್ಮಜಿಲ್ಲೆ

BMTC “ವಜ್ರ ವಿಸ್ತಾರ” ಬಸ್‌ಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ, ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ- ಸಿಟಿಎಂ ಆದೇಶ

ಮೇ 25ರಂದು ಆದೇಶ ಹೊರಡಿಸಿರುವ ಮುಖ್ಯ ಸಂಚಾರ ವ್ಯವಸ್ಥಾಪಕರು, ಈ ಆದೇಶ 01.06.2026 ರಿಂದ ಜಾರಿಗೆ ಬರಲಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಮನಗರ ಮತ್ತು ಕನಕಪುರಕ್ಕೆ ವಜ್ರ ವೇಗದೂತ ಸೇವೆಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಸೇವೆಗಳಿಗೆ "ವಜ್ರ ವಿಸ್ತಾರ" ಸೇವೆ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಜ್ರ ವಿಸ್ತಾರ ಸೇವೆಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ ದರದಲ್ಲಿ ಚೀಟಿ ವಿತರಿಸಬೇಕು ಮತ್ತು ಹಿರಿಯ ನಾಗರಿಕರಿಗೆ ಪೂರ್ಣ ಪ್ರಮಾಣದ ಚೀಟಿ ವಿತರಣೆ ಮಾಡಬೇಕು ಇವರಿಗೆ ಯಾವುದೇ ರಿಯಾಯಿತಿ ಇಲ್ಲ ಎಂಬ ಬಗ್ಗೆ ನಿರ್ವಾಹಕರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.

ಈ ಸಂಬಂಧ ನಿನ್ನೆ ಮೇ 25ರಂದು ಆದೇಶ ಹೊರಡಿಸಿರುವ ಮುಖ್ಯ ಸಂಚಾರ ವ್ಯವಸ್ಥಾಪಕರು, ಈ ಆದೇಶ 01.06.2026 ರಿಂದ ಜಾರಿಗೆ ಬರಲಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಮನಗರ ಮತ್ತು ಕನಕಪುರಕ್ಕೆ ವಜ್ರ ವೇಗದೂತ ಸೇವೆಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಸೇವೆಗಳಿಗೆ “ವಜ್ರ ವಿಸ್ತಾರ” ಸೇವೆ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ವಜ್ರ ವಿಸ್ತಾರ ಸೇವೆಗಳನ್ನು ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮತ್ತು ತುಮಕೂರು ಪ್ರದೇಶಗಳಿಗೂ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಾಗಿ ಈ ವಜ್ರ ವಿಸ್ತಾರ ಸೇವೆಗಳಲ್ಲಿ ಮಕ್ಕಳ ರಿಯಾಯಿತಿ ಚೀಟಿ ಹಾಗೂ ಹಿರಿಯ ನಾಗರಿಕರ ಚೀಟಿಗಳನ್ನು ವಿತರಣೆ ಮಾಡುವುದಕ್ಕೆ ಈ ಕೆಳಗಿನಂತೆ ಸೂಚನೆ ನೀಡಲಾಗಿದೆ ಎಂದು ಸಿಟಿಎಂ ತಿಳಿಸಿದ್ದಾರೆ.

ಮೊದಲನೆಯದಾಗಿ ವಜ್ರ ವಿಸ್ತಾರ ಸೇವೆಗಳಲ್ಲಿ ಮಕ್ಕಳಿಗೆ (6 ರಿಂದ 12 ವರ್ಷ) ವಯಸ್ಕರ ಪ್ರಯಾಣ ದರದಲ್ಲಿ ಶೇ.25 ರಷ್ಟು ರಿಯಾಯಿತಿ ಕಲ್ಪಿಸಬೇಕು. ಇನ್ನು ಹಿರಿಯ ನಾಗರಿಕರಿಗೆ ವಯಸ್ಕರಂತೆ ಪೂರ್ಣ ಪ್ರಮಾಣದ ಚೀಟಿ ದರಗಳನ್ನು ವಿತರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಇನ್ನು ಬೆಂಗಳೂರು-ತುಮಕೂರು ವಜ್ರ ವಿಸ್ತಾರ ಸೇವೆಗಳಲ್ಲಿ ಯಾವುದೇ ಪಾಸುಗಳು (ಹಾಲಿ/ಮಾಜಿ ವಿಧಾನಸಭಾ /ವಿಧಾನಪರಿಷತ್ತು ಪಾಸುಗಳನ್ನು ಹೊರತುಪಡಿಸಿ) ಮಾನ್ಯ ಇರುವುದಿಲ್ಲ. ಮುಂದುವರಿದು, ವಜ್ರ ವೇಗದೂತ (ವಿಸ್ತಾರ) ಪಾಸುದಾರರು ಹೆಚ್ಚುವರಿ ಚೀಟಿ ಪಡೆದು ವಾಯುವಜ್ರ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಈ ಆದೇಶವು ವಜ್ರ ವಿಸ್ತಾರ ಮಾಸಿಕ ಪಾಸುದಾರರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ವಿವರಿಸಿದ್ದಾರೆ.

ಅಲ್ಲದೆ ಈ ಸುತ್ತೋಲೆಯಲ್ಲಿನ ಎಲ್ಲ ಅಂಶಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ, ಬಸ್ ನಿಲ್ದಾಣದ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಬಸ್ ನಿಲ್ದಾಣ, ಘಟಕಗಳ ಸೂಚನಾ ಫಲಕಗಳ ಪ್ರಕಟಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು/ ಘಟಕ ವ್ಯವಸ್ಥಾಪಕರು/ ಬಸ್ ನಿಲ್ದಾಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಇನ್ನು ಈ ಸುತ್ತೋಲೆಯು 01.06.2026 ರಿಂದ ಜಾರಿಗೆ ಬರುತ್ತದೆ. ಸುತ್ತೋಲೆಯನ್ನು ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಜಾರಿಗೊಳಿಸಿದ್ದಕ್ಕೆ ಅನುಸರಣಾ ವರದಿಯನ್ನು ತಪ್ಪದೇ ಕಳುಹಿಸುವುದು ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
KSRTC ನೌಕರ ಕೇಶವಮೂರ್ತಿ ಹೃದಯಾಘಾತದಿಂದ ನಿಧನ ರೈತರ ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ: ಕೇಂದ್ರ-ರಾಜ್ಯ. ಸರ್ಕಾರಗಳಿಗೆ ಕುರುಬೂರು ಶಾಂತಕುಮಾರ್ ಎಚ್ಚರಿಕೆ BMTC "ವಜ್ರ ವಿಸ್ತಾರ" ಬಸ್‌ಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ, ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ- ಸಿಟಿಎಂ ... ನಾಳೆ ಕನಿಷ್ಠ ಪಿಂಚಣಿ 7,500 ರೂ. ಮಾಡಲು ಆಗ್ರಹಿಸಿ ಪಿಎಫ್ ಕಚೇರಿ ಮುಂದೆ EPS-95, BMTC-KSRTC ನಿವೃತ್ತ ನೌಕರರ ಪ್ರತ... KSRTC ನೌಕರರದ್ದು ಹಾವು ಸಾಯೊಲ್ಲ ಕೋಲು ಮುರಿಯೊಲ್ಲ ಎಂಬ ಸ್ಥಿತಿ: ಇಂದಿನ ರಾಜೀ ಸಂಧಾನ ಸಭೆ ಮತ್ತೆ ವಿಫಲ ಜೂ.10ಕ್ಕೆ ಮ... 11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು BPL ಕಾರ್ಡ್‌ದಾರರು ಮಾತ್ರ ಗೃಹಲಕ್ಷ್ಮಿ ಫಲಾನುಭವಿಗಳು ಆದರೆ, ಅರ್ಹತೆ ಮೀರಿದವರು ಎಂದರೆ ಯಾರು? ಸರ್ಕಾರವನ್ನು ಪ್ರಶ್ನಿಸ... ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈ 2 ಯೋಜನಗೆಳು ಇನ್ನು ಮುಂದೆ ಸಿಗಲ್ಲ!? ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು!