BPL ಕಾರ್ಡ್‌ದಾರರು ಮಾತ್ರ ಗೃಹಲಕ್ಷ್ಮಿ ಫಲಾನುಭವಿಗಳು ಆದರೆ, ಅರ್ಹತೆ ಮೀರಿದವರು ಎಂದರೆ ಯಾರು? ಸರ್ಕಾರವನ್ನು ಪ್ರಶ್ನಿಸುತ್ತಿರುವ ಜನತೆ
ಆದರೆ, ಬಿಪಿಎಲ್ ಕಾರ್ಡ್‌ನಡಿ ಗೃಹಲಕ್ಷ್ಮಿ ಹಣ ಪಡೆಯುತ್ತಿರುವವರು ಅನರ್ಹರು ಎಂದು ಸರ್ಕಾರ ಹೇಗೆ ಹೇಳುತ್ತದೆ ಎಂಬುವುದೇ ಇಲ್ಲಿ ಎದ್ದಿರುವ ಪ್ರಶ್ನಿಯಾಗಿದೆ. ಗೃಹಜ್ಯೋತಿ ಫಲಾನುಭವಿಗಳು ಎಂದರೆ ಇಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲರೂ ಅರ್ಹರಾಗಿದ್ದಾರೆ. ಆದರೆ, 200 ಯೂನಿಟ್‌ಗಿಂತ ಹೆಚ್ಚು ಯೂನಿಟ್ ಬಳಸುವವರು ಇದರ ವ್ಯಾಪ್ತಿಗೆ ಬರುವುದಿಲ್ಲ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಅರ್ಹತೆ ಮೀರಿದವರು ಜೊತೆಗೆ ಸತ್ತವರ ಹೆಸರಿನಲ್ಲೂ ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಗೃಹ ಜ್ಯೋತಿ ಯೋಜನೆಯಲ್ಲೂ ಬಹುತೇಕ ಅರ್ಹತೆ ಮೀರಿದವರು ಫಲಾನುಭವಿಗಳಾಗುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ಅದೇ ಕಾರಣಕ್ಕೆ ಈ ಎರಡು ಯೋಜನೆಯ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ.

ಹೀಗಾಗಿ ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಈಗ 2 ಮಹತ್ವದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳ ಪರಿಷ್ಕರಣೆ ಮಾಡುವುದಕ್ಕೆ ತೀರ್ಮಾನ ಮಾಡಿದೆ.
ಈ ಪರಿಷ್ಕರಣೆ ಮಾಡುವುದಕ್ಕೆ ಇತ್ತೀಚೆಗೆ ನಡೆದ ಶಾಸಕರು ಹಾಗೂ ಹಿರಿಯ ನಾಯಕರ ಸಭೆಯಲ್ಲಿ ಈ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಸರ್ಕಾರ ಮುಂದಾಗಿದ್ದು, ಇಲ್ಲಿ ನಿರ್ಧರಿಸಿದಂತೆ ಆದರೆ, 200 ಯೂನಿಟ್ ವರೆಗೂ ಫ್ರೀ ಅಂತ ಹೇಳಿದ್ದೆ ಇಲ್ಲಿ ಉಲ್ಟವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಇನ್ನು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿತಿಂಗಳು 1.64 ಕೋಟಿ ಮಹಿಳೆಯರು 2,000 ರೂ. ಹಣ ಪಡೆಯುತ್ತಿದ್ದಾರೆ. ಇವರೆಲ್ಲರೂ ಬಿಪಿಎಸ್ ಕಾರ್ಡ್ ಹೊಂದಿರುವವರಾಗಿದ್ದಾರೆ. ಇದರ ಜತೆಗೆ ಗೃಹಜ್ಯೋತಿ ಯೋಜನೆಯಲ್ಲೂ 1.67 ಕೋಟಿ ಫಲಾನುಭವಿಗಳಿದ್ದಾರೆ. ಇವರೆಲ್ಲರೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಫಲಾನುಭವಿಗಳಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಅರ್ಹತೆ ಮೀರಿದವರು ಜತೆಗೆ ಸತ್ತವರ ಹೆಸರಿನಲ್ಲೂ ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಗೃಹ ಜ್ಯೋತಿ ಯೋಜನೆಯಲ್ಲೂ ಬಹುತೇಕ ಅರ್ಹತೆ ಮೀರಿದವರು ಫಲಾನುಭವಿಗಳಾಗುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ಅದೇ ಕಾರಣಕ್ಕೆ ಎರಡು ಯೋಜನೆಯ ಪರಿಷ್ಕರಣೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇತ್ತೀಚೆಗಷ್ಟೇ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗೃಹಲಕ್ಷ್ಮಿ ಹಣದಲ್ಲಿ 5,000 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಇದಾದ 2 ದಿನಗಳಲ್ಲೇ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಆದರೆ ಇಲ್ಲಿ ಸತ್ತವರ ಹೆಸರಿನಲ್ಲಿ ಹಣ ಪಡೆಯುತ್ತಿರುವುದನ್ನು ನಿಲ್ಲಿಸಬಹುದು. ಆದರೆ, ಬಿಪಿಎಲ್ ಕಾರ್ಡ್‌ನಡಿ ಗೃಹಲಕ್ಷ್ಮಿ ಹಣ ಪಡೆಯುತ್ತಿರುವವರು ಅನರ್ಹರು ಎಂದು ಸರ್ಕಾರ ಹೇಗೆ ಹೇಳುತ್ತದೆ ಎಂಬುವುದೇ ಇಲ್ಲಿ ಎದ್ದಿರುವ ಪ್ರಶ್ನಿಯಾಗಿದೆ.
ಇದರ ಜತೆಗೆ ಗೃಹಜ್ಯೋತಿ ಫಲಾನುಭವಿಗಳು ಎಂದರೆ ಇಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲರೂ ಅರ್ಹರಾಗಿದ್ದಾರೆ. ಆದರೆ, 200 ಯೂನಿಟ್‌ಗಿಂತ ಹೆಚ್ಚು ಯೂನಿಟ್ ಬಳಸುವವರು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಿರುವಾಗ ಇಲ್ಲಿ ಯಾರನ್ನು ಅನರ್ಹರು ಎಂದು ಗುರುತಿಸುತ್ತದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಒಟ್ಟಾರೆ, ಕುಂಟು ನೆಪಹೇಳಿ ಯೋಜನೆಗಳಿಂದ ಹಿಂದೆ ಸರಿಯುವ ತಂತ್ರ ಮಾಡುತ್ತಿದೆ ಎಂಬ ಅನುಮಾನಗಳು ದಟ್ಟವಾಗಿವೆ.
Related









