ಬಿಎಂಟಿಸಿ ಹೊಸ ವೇಗದೂತ ಬಸ್ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಎರಡು ಮಾರ್ಗಗಳಲ್ಲಿ ನಿತ್ಯ 88 ಟ್ರಿಪ್ ಬಸ್ಗಳು ಸಂಚಾರ ಮಾಡಲಿದ್ದು, ಶುಕ್ರವಾರ ಎಚ್ ಕ್ರಾಸ್ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ನೂತನ ವೇಗದೂತ ಸೀಮಿತ ನಿಲುಗಡೆ ಮಾರ್ಗಗಳಿಗೆ ಸಾರಿಗೆ ಸಚಿವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಬೆಂಗಳೂರು: ನೆಲಮಂಗಲ – ಹೊಸಕೋಟೆ, ಟಿನ್ಪ್ಯಾಕ್ಟರಿ – ಎಚ್ ಕ್ರಾಸ್ ನಡುವೆ ಬಿಎಂಟಿಸಿ ಹೊಸ ಎಕ್ಸ್ಪ್ರೆಸ್ ವೇಗದೂತ ಬಸ್ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಈ ಬಸ್ಗಳು ಒಟ್ಟು ಎರಡು ಮಾರ್ಗಗಳಲ್ಲಿ ನಿತ್ಯ 88 ಟ್ರಿಪ್ ಬಸ್ಗಳು ಸಂಚಾರ ಮಾಡಲಿದ್ದು, ಶುಕ್ರವಾರ ಎಚ್ ಕ್ರಾಸ್ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ನೂತನ ವೇಗದೂತ ಸೀಮಿತ ನಿಲುಗಡೆ ಮಾರ್ಗಗಳಿಗೆ ಸಾರಿಗೆ ಸಚಿವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಎಚ್.ಕ್ರಾಸ್ ಹಾಗೂ ಹೊಸಕೋಟೆ ರಸ್ತೆ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಈ ಹೊಸ ಬಸ್ಗಳ ಸೇವೆ ಪ್ರಾರಂಭಿಸಲಾಗುತ್ತಿದ್ದು, 30 ನಿಮಿಷಗಳ ಅಂತರದಲ್ಲಿ ಪ್ರತಿದಿನ 60 ಸುತ್ತುವಳಿಗಳು (ಟ್ರಿಪ್) ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಪ್ರಯಾಣ ದರ 60 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಇನ್ನು ಹೊಸಕೋಟೆಯಿಂದ ನೆಲಮಂಗಲದವರೆಗೆ ಪ್ರಯಾಣಿಸುವ ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮಾರ್ಗ ಸಂಖ್ಯೆ EX-STRR-1 ಅಡಿಯಲ್ಲಿ ನೂತನ ವೇಗದೂತ ಸೀಮಿತ ನಿಲುಗಡೆ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
ಈ ಮಾರ್ಗದಲ್ಲಿ ನೆಲಮಂಗಲ, ರೈಲ್ವೆ ಗೊಲ್ಲಹಳ್ಳಿ, ಕನಸವಾಡಿ, ಮಧುರೆ ದೇವಸ್ಥಾನ, ದೊಡ್ಡಬಳ್ಳಾಪುರ, ಡಿ ಕ್ರಾಸ್, ಚಪ್ಪರದಕಲ್ಲು, ವಿಶ್ವನಾಥಪುರ, ದೇವನಹಳ್ಳಿ, ಎಂ.ವಿ.ಜೆ. ಮೆಡಿಕಲ್ ಕಾಲೇಜು ಹಾಗೂ ಹೊಸಕೋಟೆ ಪ್ರಮುಖ ನಿಲುಗಡೆಗಳಾಗಿವೆ. ನಿತ್ಯ 11 ಬಸ್ಗಳು 28 ಟ್ರಿಪ್ ಸಂಚಾರ ನಡೆಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣ ದರವನ್ನು 25 ರಿಂದ 110 ರೂ.ರವರೆಗೆ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಇನ್ನು ಈ ಸೇವೆಗಳಿಂದ ಕೆ.ಆರ್.ಪುರಂ, ಹೊಸಕೋಟೆ, ನಂದಗುಡಿ, ಹಿಂಡಗಾನಹಳ್ಳಿ, ಎಚ್.ಕ್ರಾಸ್, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಹಾಗೂ ಸುಲಭ ಪ್ರಯಾಣ ಸೌಲಭ್ಯ ದೊರೆಯಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ಶರತ್ ಬಚ್ಚೇಗೌಡ, ಬಿ.ಎನ್. ರವಿಕುಮಾರ್, ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ಸೇರಿದಂತೆ ಹಲವು ಉಪಸ್ಥಿತರಿದ್ದರು.
Related









