NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಸಂಬಂಧ ಕೋರ್ಟ್‌ ಆದೇಶ ಮಾಡಿದರೆ ನಾವು ಪಾಲಿಸಲೇಬೇಕು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ವಿಚಾರದಲ್ಲಿ ಹೈ ಕೋರ್ಟ್‌ ಆದೇಶ ಮಾಡಿದರೆ ಆ ಆದೇಶವನ್ನು ನಾವು ಪಾಲಿಸಲೇಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇಂದು ಹೈ ಕೋರ್ಟ್‌ನ 9ನೇ ಹಾಲ್‌ನಲ್ಲಿ ಮೇ 19ರಂದು ಮನೆಗೆಲಸದ ಮಹಿಳೆ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌.ಶ್ರೀಧರ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ನೌಕರರ ಬೇಡಿಕೆ ಮೊದಲು ಈಡೇರಿಸಿ ಬಳಿಕ ಇತ್ಯರ್ಥಪಡಿಸುತ್ತೇವೆ ಎಂದು ಹೇಳಿದೆ.

ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಕೋರ್ಟ್‌ ಇಂದು ಕಾರ್ಮಿಕ ಆಯುಕ್ತರ ಬಳಿ ಇತ್ಯರ್ಥಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದೆ. ಅದರಂತೆ ನಮ್ಮ ನಿಗಮದ ಎಂಡಿಗಳು ಹೋಗಿ ಚರ್ಚೆ ನಡೆಸಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ಮುಂದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ನಡುವೆ ಸರ್ಕಾರದ ಇತರೆ ಇಲಾಖೆಗಳ ನೌಕರರಿಗಿಂತ ಕಡಿಮೆ ವೇತನ ಇದೆ ಇದು ಸರಿಯಾದ ಕ್ರಮವಲ್ಲ ಸರ್‌ ಎಂದು ವರದಿಗಾರರೂ ಕೂಡ ಪ್ರಶ್ನಿಸಿದರು. ಈ ವೇಳೆ ಕೋರ್ಟ್‌ ಆದೇಶ ಮಾಡಿದರೆ ಅದನ್ನು ನಾವು ಪಾಲಿಸಲೇ ಬೇಕು ಎಂದರು.

ಇದರ ಜತೆಗೆ ಈ ಬಾರಿ ಮಾಧ್ಯಮ ಮಿತ್ರರೂ ಕೂಡ ನೌಕರರಿಗೆ ಇರುವ ವೇತನ ತಾರತಮ್ಯತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಇದು ಸರಿಯಲ್ಲ ಎನ್ನುತ್ತಿದ್ದಾರೆ. ಇದರ ಜತೆಗೆ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ರಂಗಣ ಅವರು ಕೂಡ ಪಿಐಎಲ್‌ ಹಾಕಿರುವುದಕ್ಕೆ ಮುಷ್ಕರಕ್ಕೆ ತಡೆ ನೀಡುವುದು  ಸರಿ. ಆದರೆ ನೌಕರರಿಗೆ ಹೇಗೆ ನ್ಯಾಯಕೊಡುತ್ತೀರಾ ಅವರು ಹೇಗೆ ಜೀವನ ಸಾಗಿಸಬೇಕು ಎಂದು ಪ್ರಶ್ನಿಸಿದ್ದರು.

ಅಲ್ಲದೆ, ಪ್ರತಿಬಾರಿಯೂ ವೇತನ ಸಂಬಂಧ ಹೋರಟಕ್ಕೆ ಮುಂದಾದರೆ ಈ ರೀತಿಯ ಪಿಐಎಲ್‌ನಡಿ ಹೋರಾಟ ನಿಲ್ಲಿಸಲಾಗುತ್ತಿದೆ. ಹೀಗೆ ಆದರೆ ನೌಕರರ ಹಕ್ಕನ್ನು ಕೇಳುವವರು ಯಾರು, ಸರ್ಕಾರ ಅಂತು ಈ ಬಗ್ಗೆ ಉದಾಸೀನತೆಯಿಂದ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಎಲ್ಲದರ ಪರಿಣಾಮವೋ ಏನೋ ಗೊತ್ತಿಲ್ಲ ಆದರೆ, ಇಂದು ಹೈ ಕೋರ್ಟ್‌ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದಾಗಿದೆ.

ಈ ನಡುವೆ ಸಾರಿಗೆ ಸಚಿವರು ಕೂಡ ಏನು ಸಬೂಬು ಹೇಳದೆ ಕೋರ್ಟ್‌ ಆದೇಶವನ್ನು ನಾವು ಪಾಲಿಸಲೇಬೇಕು ಎಂದು ಮೃದುಧೋರಣೆ ತಳೆದಿರುವುದು ಕೂಡ ನೌಕರರಿಗೆ ಎಲ್ಲೋ ಒಂದು ಕಡೆ ನ್ಯಾಯಸಿಗುವ ಆತ್ಮವಿಶ್ವಾಸ ಮೂಡಿದೆ ಎಂದರೆ ತಪ್ಪಾಗಲಾರದು.

ಒಟ್ಟಾರೆ ನೌಕರರು ಕಳೆದ ದಶಕಗಳಿಂದಲೂ ಅನುಭವಿಸುತ್ತಿರುವ ಯಾತನೆಗೆ ಹೈ ಕೋರ್ಟ್‌ ಈಗಲಾದರೂ ಮುಕ್ತಿ ನೀಡುತ್ತದೆ ಎಂಬ ಭರವಸೆಯಲ್ಲಿ ನೌಕರರು ಕಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡ ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಕೊಟ್ಟ ಭರವಸೆಯನ್ನು ಈಡೇರಿಸುವತ್ತ ಮನಸ್ಸು ಮಾಡಿದರೆ ಮುಂದೆ ಇಂಥ ಸಂದರ್ಭ ಬರುವುದಿಲ್ಲ ಎಂಬುವುದಂತು ಸ್ಪಷ್ಟ.

Deva
the authorDeva

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ