BMTC ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ 4ತಿಂಗಳ ಮೂಲ ತುಟ್ಟಭತ್ಯೆ ಮೇ 2026ರ ವೇತನದೊಂದಿಗೆ ಪಾವತಿಸಲು ಎಂಡಿ ಆದೇಶ
ಸಂಸ್ಥೆಯ ಸೇವಾನಿರತ ಸಿಬ್ಬಂದಿಗಳಿಗೆ ಏಪ್ರಿಲ್-2018 ನೇ ಮಾಹೆಯಿಂದ ಜುಲೈ-2018 ನೇ ಮಾಹೆಯವರೆಗಿನ 04 ತಿಂಗಳುಗಳ ಹಿಂಬಾಕಿ ಮೊತ್ತವನ್ನು ಮೇ-2026 ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಕ್ರಮ ಕೈಗೊಳ್ಳಲು ಹಾಗೂ ಸೇವಾ ವಿಮುಕ್ತ/ ವರ್ಗಾವಣೆ ಪ್ರಕರಣಗಳಲ್ಲಿ 10.06.2026 ರಂದು ಪಾವತಿಗೆ ಕ್ರಮ ಕೈಗೊಳ್ಳಲು ಅವಶ್ಯಕ ಬಿಲ್ಲುಗಳನ್ನು ಕೂಡಲೇ ಕೇಂದ್ರ ಕಚೇರಿಗೆ ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
BMTC MD Shivakumarಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ ಮೂಲ ತುಟ್ಟಭತ್ಯೆ ನಿಗದಿಯ ತುಟ್ಟಿಭತ್ಯೆ ಮನೆಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆಯ ಹಿಂಬಾಕಿ ಮೊತ್ತವನ್ನು ಮೇ 2026ರ ವೇತನದೊಂದಿಗೆ ಪಾವತಿಸಲು ಸೂಕ್ತಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಸೂಕ್ತಾಧಿಕಾರಿಗಳು ಆದೇಶದ ಮೇರೆಗೆ ಮೇ-2026 ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಕ್ರಮ ಕೈಗೊಳ್ಳಲು ಹಾಗೂ ಸೇವಾ ವಿಮುಕ್ತ/ ವರ್ಗಾವಣೆ ಪ್ರಕರಣಗಳ ನೌಕರರಿಗೆ 10.06.2026 ರಂದು ಪಾವತಿಗೆ ಕ್ರಮ ಕೈಗೊಳ್ಳಲು ಅವಶ್ಯಕ ಬಿಲ್ಲುಗಳನ್ನು ಕೂಡಲೇ ಕೇಂದ್ರ ಕಚೆರಿಗೆ ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿಗಳು ಸೂಚನೆ ನೀಡಿದ್ದಾರೆ.
01.07.2017 ರಲ್ಲಿದ್ದ ಶೇ.45.25 ರಷ್ಟು ತುಟ್ಟಭತ್ಯೆಯನ್ನು 0104.2019 ರಿಂದ ಜಾರಿಗೆ ಬರುವಂತೆ ಮೂಲ ಹುಟ್ಟಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರಾಗಿರುವಂತೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳಲು ಸುತ್ತೋಲೆಗಳನ್ನು ಹೊರಡಿಸಲಾಗಿದ್ದು, ಏಪ್ರಿಲ್-2018 ರಿಂದ ಜುಲೈ-2018 ರವರಗಿನ ಹಿಂಬಾಕಿ ಮೊತ್ತಗಳ ಪಾವತಿಯ ಬಗ್ಗೆ ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಆದೇಶ ಹೊರಡಿಸಲಾಗಿತ್ತು.
ಮುಂದುವರೆದಂತೆ, ಉಲ್ಲೇಖ-03 ರ ಸೂಕ್ತಾಧಿಕಾರಿಗಳಾದ ವ್ಯವಸ್ಥಾಪಕ ನಿರ್ದೇಶಕರ ಆದೇಶ 28.03.2026ರಂತೆ 2018 ನೇ ಸಾಲಿನ ಮೂಲತುಟ್ಟಿಭತ್ಯೆ ನಿಗದಿಯ ತುಟ್ಟಿಭತ್ಯೆ ಮನೆಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆಯ ಹಿಂಬಾಕಿ ಮೊತ್ತವನ್ನು ಅರ್ಹ ಸೇವಾನಿರತ/ ಸೇವಾವಿಮುಕ್ತಿ ಸಿಬ್ಬಂದಿಗಳಿಗೆ ಪಾವತಿಸಲು ಅನುಮೋದಿಸಿದ್ದಾರೆ.
ಅದರನ್ವಯ ಸೇವಾನಿರತ ಸಿಬ್ಬಂದಿಗಳಿಗೆ ಏಪ್ರಿಲ್-2018 ನೇ ಮಾಹೆಯಿಂದ ಜುಲೈ-2018 ನೇ ಮಾಹೆಯವರೆಗಿನ 04 ತಿಂಗಳುಗಳ ಹಿಂಬಾಕಿ ಮೊತ್ತವನ್ನು ಮೇ-2026 ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಕ್ರಮ ಕೈಗೊಳ್ಳಲು ಹಾಗೂ ಸೇವಾ ವಿಮುಕ್ತ/ ವರ್ಗಾವಣೆ ಪ್ರಕರಣಗಳಲ್ಲಿ 10.06.2026 ರಂದು ಪಾವತಿಗೆ ಕ್ರಮ ಕೈಗೊಳ್ಳಲು ಅವಶ್ಯಕ ಬಿಲ್ಲುಗಳನ್ನು ಕೂಡಲೇ ಕೇಂದ್ರ ಕಚೇರಿಗೆ ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Related









