ಸಾರಿಗೆ ನೌಕರರ ನ್ಯಾಯಯುತವಾದ ಬೇಡಿಕೆಯ ನ್ಯಾಯಯುತವಾಗಿ ಈಡೇರಿಸಿದ ನಂತರ ಪ್ರಕರಣ ಇತ್ಯರ್ಥ: ಹೈ ಕೋರ್ಟ್
ಎಲ್ಲರನ್ನು ಕರೆಸಿ ಪಕ್ಕದಲ್ಲಿ ಒಂದು ಕೋರ್ಟ್ ಹಾಲ್ಖಾಲಿ ಇದೆ ಅಲ್ಲೇ ಕುಳಿತುಕೊಳ್ಳೋಣ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿ ಅದನ್ನು ಈಡೇರಿಸಿದ ಬಳಿಕ ಇತ್ಯರ್ಥಪಡಿಸೋಣ ಎಂದು ಸರ್ಕಾರದ ಪರ ಹಾಗೂ ಸಾರಿಗೆ ನಿಗಮಗಳ ಪರ ವಕೀಲರಿಗೆ ಗರಂಆಗಿಯೇ ಹೇಳಿ ಜೂನ್ 2ಕ್ಕೆ ವಿಚಾರಣೆಯನ್ನು ಮುಂದೂಡಿದ ಹೈ ಕೋರ್ಟ್ ನ್ಯಾಯಪೀಠ

ಬೆಂಗಳೂರು: ರಾಜ್ಯದ ರಸ್ತೆ ಸಾರಿಗೆ ನೌಕರರಿಗೆ ಕೊಡುವಂತಹ ನ್ಯಾಯಯುತವಾದ ಬೇಡಿಕೆಯನ್ನು ನ್ಯಾಯಯುತವಾಗಿ ಈಡೇರಿಸಿದ ನಂತರ ಪ್ರಕರಣವನ್ನು ಇತ್ಯರ್ಥಪಡಿಸುತ್ತೇನೆ ಅದಕ್ಕೂ ಮುಂಚೆ ಆಗುವುದಿಲ್ಲ ಎಂದು ಹೈ ಕೋರ್ಟ್ ನ್ಯಾಯಪೀಠ ಹೇಳುವ ಮೂಲಕ ನೌಕರರಲ್ಲಿ ಆಶಾದಾಯಕ ಮನೋಭಾವನೆ ಮೂಡಿಸಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮೇ 19ರಂದು ಹೈ ಕೋರ್ಟ್ ವಿಭಾಗೀಯ ಪೀಠ ತಡೆ ನೀಡಿ ಮತ್ತೆ ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು.
ಸಾರಿಗೆ ನೌಕರರ ಮುಷ್ಕರದ ಹೋರಾಟಕ್ಕೆ ಹೈಕೋರ್ಟ್ನಲ್ಲಿ ತಡೆ ಹಿಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ ನ್ಯಾಯಾಲಯದ ಕೋರ್ಟ್ ಹಾಲ್ 9ರಲ್ಲಿ ಪ್ರಕರಣ ವಿಚಾರಣೆಗೆ ಬಂದಿದ್ದು, ಸಮಯ.1.15ಗಂಟೆಯಲ್ಲಿ ವಿಚಾರಣೆಗೆ ಬಂದಿದ್ದು ಸರ್ಕಾರಿ ವಕೀಲರು ಕೆಎಸ್ಆರ್ಟಿಸಿ ಪರವಾದ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಸವಿಸ್ತಾರವಾದ ವಾದ ಮಂಡಿಸಿದರು.
ವಿಚಾರಣೆ ವೇಳೆ ವಾದ ಮಂಡಿಸಿ ನ್ಯಾಯಮೂರ್ತಿಗಳಲ್ಲಿ ಈ ಅರ್ಜಿಯನ್ನು ಮುಕ್ತಾಯ ಮಾಡುವಂತೆ ಮನವಿ ಮಾಡಿದರು ಸರ್ಕಾರ ಹಾಗೂ ಸಾರಿಗೆ ಸಂಸ್ಥೆಗಳ ಪರ ವಕೀಲರು. ಅದಕ್ಕೆ ಸ್ಪಂದಿಸದ ನ್ಯಾಯಮೂರ್ತಿಗಳು ಸಾರಿಗೆ ನೌಕರರಿಗೆ ಕೊಡುವಂತಹ ನ್ಯಾಯಯುತವಾದ ಬೇಡಿಕೆಯನ್ನು ನ್ಯಾಯಯುತವಾಗಿ ಈಡೇರಿಸಿದ ನಂತರ ಪ್ರಕರಣವನ್ನು ಇತ್ಯರ್ಥಪಡಿಸುತ್ತೇನೆ. ಅಲ್ಲಿಯವರೆಗೂ ಇದು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲದೆ ಮೇ 25 ರಂದು ಕಾರ್ಮಿಕ ಇಲಾಖೆಯಲ್ಲಿ ನಡೆಯಲಿರುವ ರಾಜಿ ಸಂಧಾನ ಸಭೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ನ್ಯಾಯಮೂರ್ತಿಗಳು ನಿರ್ದೇಶ ನೀಡಿದರು. ಅದು ಸಾಧ್ಯವಾಗದಿದ್ದರೆ ಎಲ್ಲರನ್ನು ಕರೆಸಿ ಪಕ್ಕದಲ್ಲಿ ಒಂದು ಕೋರ್ಟ್ ಹಾಲ್ ಖಾಲಿ ಇದೆ ಅಲ್ಲೇ ಕುಳಿತುಕೊಳ್ಳೋಣ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿ ಅದನ್ನು ಈಡೇರಿಸಿದ ಬಳಿಕ ಇತ್ಯರ್ಥಪಡಿಸೋಣ ಎಂದು ಸರ್ಕಾರದ ಪರ ಹಾಗೂ ಸಾರಿಗೆ ನಿಗಮಗಳ ಪರ ವಕೀಲರಿಗೆ ಗರಂ ಆಗಿಯೇ ಹೇಳಿ ಜೂನ್ 2ಕ್ಕೆ ವಿಚಾರಣೆಯನ್ನು ಮುಂದೂಡಿದರು.
ನ್ಯಾಯಾಧೀಶ ಈ ನಡೆಯಿಂದ 1.07 ಲಕ್ಷ ನೌಕರರು ತುಸು ಸಂತಸಗೊಂಡಿದ್ದು, ನಮ್ಮ ಪಾಲಿಗೆ ನ್ಯಾಯಾಲವಿದೆ ಇಲ್ಲೇ ನಮಗೆ ಕಾನೂನಾತ್ಮಕವಾದ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂಬ ಆಶಾಭಾವನೆ ವ್ಯಕ್ತಪಡಿಸಿ ನ್ಯಾಯಮೂರ್ತಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಈಗಾಗಲೇ ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಜತೆಗೆ 26 ತಿಂಗಳ ಹಿಂಬಾಕಿಯನ್ನೂ ನೀಡಲಾಗಿದೆ. ಆದರೆ, ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ವೇತನ ಕಾನೂನು ಬದ್ಧವಾಗಿ ನಮ್ಮ ಕೈ ಸೇರಿಲ್ಲ ಅಂತ ಅಸಮಾಧಾನಗೊಂಡಿರುವ ನೌಕರರು ನ್ಯಾಯಬದ್ಧವಾಗಿ ಬರಬೇಕಿರುವುದನ್ನು ನಮಗೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಆದರೆ, ನಮಗೆ 38 ತಿಂಗಳ ಬಾಕಿ ವೇತನ ಬರಬೇಕು, ಈಗ ಆಗಿರುವ ವೇತನ ಪರಿಷ್ಕರಣೆಯಿಂದ ನಮಗೆ ಅನ್ಯಾಯವಾಗಿದೆ ಇದನ್ನು ಸರಿಪಡಿಸಿಕೊಡಿ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದು, ಮುಷ್ಕರಕ್ಕೆ ಮುಂದಾಗಿದ್ದರು ಆದರೆ, ನೌಕರರಿಗೆ ಕೊಡಬೇಕಿರುವುದನ್ನು ಕೊಡದೆ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಎಸ್ಮಾ ಜಾರಿ ಮಾಡುವ ಬೆದರಿಕೆ ಹಾಕುವ ಜತೆಗೆ ಈ ಪಿಐಎಲ್ ಹಾಕುವ ಮೂಲಕ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ಯಾಮಾರಿಕೊಂಡು ಕಳೆದ 5 ವರ್ಷಗಳಿಂದಲೂ ಬರಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳು ಕೂಡ ನೌಕರರಿಗೆ ಅವರ ಹಕ್ಕುಗಳನ್ನು ಕೇಳಲು ಕೋರ್ಟ್ ಕೂಡ ಬಿಡುತ್ತಿಲ್ಲ. ಈಗಾದರೆ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಹೇಗೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದವು. ಈ ಎಲ್ಲವನ್ನು ಅರಿತ ಹೈ ಕೋರ್ಟ್ ನ್ಯಾಯಪೀಠ ಇಂದು ಒಂದು ಒಳ್ಳೆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನೌಕರರು ಖುಷಿಪಡುತ್ತಿದ್ದಾರೆ.
ಇನ್ನು ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘಟನೆಗಳ ಜತೆಗೆ ಈಗಾಗಲೇ ಸಿಎಂ ಚರ್ಚೆ ನಡೆಸಿದ್ದು, ಆದರೂ ಕೂಡ ಹಿಂಬಾಕಿ ವೇತನ ಹಾಗೂ ವೇತನ ಪರಿಷ್ಕರಣೆಯಲ್ಲಿ ಆಗಿರುವ ದೋಷ ಸರಿಪಡಿಸಲು ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ. ವೇತನ ಪರಿಷ್ಕರಣೆ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬಾರದಿರುವುದರಿಂದ ಸಾರಿಗೆ ನೌಕರರು ಮುಷ್ಕರ ಮಾಡಲು ನಿರ್ಧರಿಸಿದ್ದರೂ ಇತ್ತ ಹೈ ಕೋರ್ಟ್ನಲ್ಲಿ ಪಿಐಎಲ್ ಹಾಕಿ ಅತಂತ್ರ ಮಾಡಲಾಗುತ್ತಿದೆ.
ಅಂದರೆ ಮುಷ್ಕರ ಮಾಡದಂತೆ ಹೈ ಕೋರ್ಟ್ ತಡೆ ನೀಡುತ್ತದೆ ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಸರಿ ಇದ್ದರೂ ನೌಕರರ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿದೆ. ಹೀಗಾಗಿ ನೌಕರರು ಹತಾಶರಾಗಿ ಮುಂದೆ ದಾರಿ ಕಾಣದೆ ಕಷ್ಟದಿಂದಲೇ ದಿನ ದೂಡುತ್ತಿದ್ದಾರೆ. ಸದ್ಯಕ್ಕೆ ಇದೆಲವನ್ನು ಮನಗಂಡ ಹೈ ಕೋರ್ಟ್ ನ್ಯಾಯಪೀಠ ಇಂದು ತೆಗೆದುಕೊಂಡ ನಿರ್ಧಾರದಿಂದ ಸ್ವಲ್ಪ ಉಸಿರಾಡುವಂತಾಗಿದೆ ಎಂದು ನೌಕರರು ಸಂತಸ ಹಂಚಿಕೊಂಡಿದ್ದಾರೆ.
Related









