NEWSನಮ್ಮಜಿಲ್ಲೆನಮ್ಮರಾಜ್ಯ

KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸಿ

ಅತಿಕುಶಲರಿಗೆ ತಿಂಗಳಿಗೆ 34225 ರೂ. ಮಾಲಿಗಳಿಗೆ 19319 ರೂ. ಕನಿಷ್ಠ ವೇತನ ಹೀಗೆ ಅವರ ಹುದ್ದೆಗಳಿಗೆ ತಕ್ಕಂತೆ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕಾರ್ಮಿಕ ಇಲಾಖೆ ಸರ್ಕಾರದ ಅಧೀಣ ಕಾರ್ಯದರ್ಶಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ ಕನಿಷ್ಠ ವೇತನ ದರಗಳನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಪರಿಷ್ಕರಿಸಿ ಕಾರ್ಮಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌.ತುಳಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ನಿನ್ನೆ ಅಂದರೆ ಮೇ 22-2026ರಂದು ಆದೇಶ ಹೊರಡಿಸಿರು ತುಳಸಿ ಅವರು ಕನಿಷ್ಠ ವೇತನ ನೀಡುವ ಬಗ್ಗೆ ಮೂರು ವಲಯಗಳಾಗಿ ವಿಂಗಡಿಸಿದ್ದು ವಲಯ-1ರಲ್ಲಿ ಗುರುತಿಸಿಕೊಳ್ಳುವ ಕಾರ್ಮಿಕರಿಗೆ ಅಂದೆ ಅತಿಕುಶಲರಿಗೆ ತಿಂಗಳಿಗೆ 34225.42 ರೂ.ಗಳ ಕನಿಷ್ಠ ವೇತನ ನಿಗದಿ ಮಾಡಲಾಗಿದೆ. ವಲಯ-2 ಅತಿಕುಶಲರಿಗೆ ತಿಂಗಳಿಗೆ 31114.02 ರೂ.ಗಳನ್ನೂ ಹಾಗೂ ವಲಯ-3 ಅತಿಕುಶಲರಿಗೆ 28285.47 ರೂ.ಗಳ ಕನಿಷ್ಠ ವೇತನವನ್ನು ನಿಗದಿಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

ಇನ್ನು ಅದರಂತೆ ವಲಯ-1ರ ಕುಶಲ ಕಾರ್ಮಿಕರಿಗೆ ತಿಂಗಳಿಗೆ 31114.02 ರೂ.ಗಳನ್ನು ವಲಯ-2ರ ಕುಶಲ ಕಾರ್ಮಿಕರಿಗೆ 28285.47 ರೂ.ಗಳನ್ನು ಹಾಗೂ ವಲಯ-3ರ ಕುಶಲ ಕಾರ್ಮಿಕರಿಗೆ 25714.07 ರೂ.ಗಳ ಕನಿಷ್ಠ ವೇತನ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ ವಲಯ-1ರ ಅರೆಕುಶಲ ಕಾರ್ಮಿಕರಿಗೆ ತಿಂಗಳಿಗೆ 28285.47 ರೂ.ಗಳನ್ನು, ವಲಯ-2ರ ಅರೆಕುಶಲ ಕಾರ್ಮಿಕರಿಗೆ ತಿಂಗಳಿಗೆ 25714.07 ರೂ.ಗಳನ್ನು ಹಾಗೂ ವಲಯ-3ರ ಅರೆಕುಶಲ ಕಾರ್ಮಿಕರಿಗೆ ತಿಂಗಳಿಗೆ 23376.43 ರೂ.ಗಳನ್ನು ನಿಗದಿ ಮಾಡಲಾಗಿದೆ.

ಇನ್ನು ವಲಯ-1ರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 25714.07 ರೂ.ಗಳು, ವಲಯ-2ರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 23376.43 ರೂ.ಗಳು, ವಲಯ-1ರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 21251.30 ರೂ.ಗಳ ಕನಿಷ್ಠ ವೇತನ ನಿಗದಿ ಮಾಡಲಾಗಿದೆ.

ಈ ವೇತನವನ್ನು ನೌಕರರ ಬ್ಯಾಂಕ್‌ ಖಾತೆಗೆ ನೇರವಾಗಿ ಅಥವಾ ಚೆಕ್‌ ಮೂಲಕ ಪಾವತಿ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಅಲ್ಲದೆ ಈ ಮೂರು ವಲಯಗಳ ಇತರ ಕೆಲಸಗಳನ್ನು ಇಲ್ಲಿ ಪರಿಗಣಿಸಲಾಗಿದ್ದು, ಇದರಲ್ಲಿ ಮಾಲಿಗಳು ಇವರಿಗೆ ಸಮನಾದ ಕೆಲಸ ಮಾಡುವವರಿಗೆ ದಿನಕ್ಕೆ 743.05 ರೂ.ಗಳಂತೆ ಅಂದರೆ ಕನಿಷ್ಠ 19319.36 ರೂ.ಗಳನ್ನು ತಿಂಗಳಿಗೆ ವೇತನವಾಗಿ ಪಾವತಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಯಾವ ಕೆಲಸಕ್ಕೆ ಎಷ್ಟು ಸಂಬಳ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ ಎಂಬುದನ್ನು ಪ್ರತಿಯೊಬ್ಬರು ಇಲ್ಲಿ ಕೊಟ್ಟಿರುವ ಪಿಡಿಎಫ್‌ ಫೈನ್‌ ನಲ್ಲಿ ನೋಡಿಕೊಳ್ಳಬಹುದಾಗಿದೆ. Minimum Wages Final Notification

Megha
the authorMegha

Leave a Reply

error: Content is protected !!
Latest news
ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ ಫೆಬ್ರವರಿ 2025- ಮಾರ್ಚ್‌ 2025ರ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಗೆ ನಿರ್ದೇಶನ ನೀಡಲು ಹೈ ಕೋರ್ಟ್‌ ಮೆಟ್ಟಿಲೇರಿ... BMTC ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ 4ತಿಂಗಳ ಮೂಲ ತುಟ್ಟಭತ್ಯೆ ಮೇ 2026ರ ವೇತನದೊಂದಿಗೆ ಪಾವತಿಸಲ...