NEWSನಮ್ಮಜಿಲ್ಲೆನಮ್ಮರಾಜ್ಯ

11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು

ಹಿಂಬಾಕಿಯಲ್ಲಿ ನೌಕರರಿಗೆ ಆಗಿರುವ  ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಡಿಪೋಗಳಿಗೆ ಹೋಗುವ ನೌಕರರಿಗೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಲು  ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೇ ಹೋಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಆಗಬೇಕೆಂದು ಕೆಲ ನೌಕರರು ನಿರ್ಧರಿಸಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಇತ್ತೀಚೆಗೆ ಅವರವರ ಬ್ಯಾಂಕ್‌ ಖಾತೆಗಳಿಗೆ ಹಾಕಿರುವ ಶೇ.15ರಷ್ಟು ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ನೌಕರರು ಅಸಮಾಧಾನಗೊಂಡಿದ್ದಾರೆ.

ಅಲ್ಲದೆ, ಈ ವ್ಯತ್ಯಾಸ ಆಗಿರುವುದರ ಬಗ್ಗೆ ಸ್ಪಷ್ಟನೆಕೊಡಿ ಎಂದು ಡಿಪೋಗಳಲ್ಲಿನ ಲೆಕ್ಕಪತ್ರ ಶಾಖೆ (ADM) ವಿಭಾಗದಲ್ಲಿ ನೌಕರರು ಕೇಳುತ್ತಿದ್ದಾರೆ. ಆದರೆ, ಇಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಅವರು ಸರಿಯಾದ ಲೆಕ್ಕ ಕೊಡದೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಹೀಗಾಗಿ ಈ ಹಿಂಬಾಕಿಯಲ್ಲಿ ನೌಕರರಿಗೆ ಆಗಿರುವ  ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಡಿಪೋಗಳಿಗೆ ಹೋಗುವ ನೌಕರರಿಗೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಲು  ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೇ ಹೋಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಆಗಬೇಕೆಂದು ಕೆಲ ನೌಕರರು ನಿರ್ಧರಿಸಿದ್ದಾರೆ.

ಜೂನ್‌ 1ರ ಸೋಮವಾರ ಬೆಳಗ್ಗೆ 11ಗಂಟೆಗೆ ಕೇಂದ್ರ ಕಚೇರಿಗೆ ಬನ್ನಿ ಎಂದು ಕೆಲವರು ವಿನಂತಿ ಮಾಡಿದ್ದಾರೆ. ಇನ್ನು ಕೆಲವರು ಎಂಡಿ ಅವರನ್ನು ಭೇಟಿ ಮಾಡುವುದಕ್ಕಿಂತ ನಿಮ್ಮ ಡಿಪೋಗಳಲ್ಲೇ ಇರುವ ಎಡಿಎಂ ವಿಭಾಗದಲ್ಲಿ ನಿಮಗೆ ಹಿಂಬಾಕಿ ನೀಡಿರುವ ಬಗ್ಗೆ ನಿಮ್ಮ ವಾಟ್ಸ್‌ಆಪ್‌ಗೆ ಮಾಹಿತಿ ಹಾಕಿಸಿಕೊಳ್ಳಿ ಇದರಿಂದ ಎ4 ಶೀಟ್‌ ತೆಗೆಯುವುದು ತಪ್ಪುದೆ ಎಂಬ ಸಲಹೆ ನೀಡಿದ್ದಾರೆ.

ಆದರೆ, ಎಡಿಎಂ ವಿಭಾಗದಲ್ಲಿ ನೌಕರರಿಗೆ ಅಲ್ಲಿ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು ಈ ಬಗ್ಗೆ ಲೆಕ್ಕಪತ್ರ ಶಾಖೆಯ ಮುಖ್ಯ ಲೆಕ್ಕಾಧಿಕಾರಿಗಳು ಮಾಹಿತಿ ನೀಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು BPL ಕಾರ್ಡ್‌ದಾರರು ಮಾತ್ರ ಗೃಹಲಕ್ಷ್ಮಿ ಫಲಾನುಭವಿಗಳು ಆದರೆ, ಅರ್ಹತೆ ಮೀರಿದವರು ಎಂದರೆ ಯಾರು? ಸರ್ಕಾರವನ್ನು ಪ್ರಶ್ನಿಸ... ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈ 2 ಯೋಜನಗೆಳು ಇನ್ನು ಮುಂದೆ ಸಿಗಲ್ಲ!? ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ...