KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು
- ಮುಷ್ಕರಕ್ಕೆ ಕರೆ ಕೊಟ್ಟು ನಿದ್ದೆಕೂಡ ಮಾಡಲಾಗದ ಪರಿಸ್ಥಿತಿ ತಲುಪಿದ ಹೋರಾಟಗಾರರು
- ಜಂಟಿ ಪದಾಧಿಕಾರಿಗಳು ಡಿಪೋಗಳಿಗೆ ಹೋದರೂ ಮಾತನಾಡಿಸದ ನೌಕರರು
- ನೌಕರರ ಬೇಡಿಕೆಗೆ ವಿರುದ್ಧವಾದ ಬೇಡಿಕೆ ಇಟ್ಟು ಮುಷ್ಕರಕ್ಕೆ ಕರೆ ನೀಡಿ ಗೊಂದಲಕ್ಕೆ ಸಿಲುಕಿದರೆ?
- ನಡೆ ಬದಲಿಸುವ ಚಿಂತನೆಯಲ್ಲಿ ಮುಳುಗಿದರೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಎಂಬ ಅನುಮಾನ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು 4 ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್ ನಮಗೆ ಬೇಡ ನಮಗೆ ವೇತನ ಸಂಬಂಧ ಶಾಶ್ವತ ಪರಿಹಾರ ಬೇಕು ಎಂಬ ಗಟ್ಟಿ ನಿಲುವು ತಾಳಿರುವುದರಿಂದ ಇದೇ ಡಿ.31ರಿಂದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ನೆಲಕಚ್ಚು ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಹೀಗಾಗಿ ಈ ನಡೆ ಜಂಟಿ ಕ್ರಿಯಾ ಸಮಿತಿಯ ಬಹುತೇಕ ಎಲ್ಲ ಪದಾಧಿಕಾರಿಗಳ ನಿದ್ದೆಗೆಡಿಸಿದ್ದು, ಯಾಕಾದರೂ ನಾವು ಈ ಮುಷ್ಕರಕ್ಕೆ ಕರೆ ಕೊಟ್ಟೇವೋ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಜತೆಗೆ ಜಂಟಿ ಕ್ರಿಯಾ ಸಮಿತಿಯ ಬಹುತೇಕ ನೌಕರರು ಕೂಡ ನಮಗೆ ಸರಿ ಸಮಾನ ವೇತನವೇ ಬೇಕು ಎಂದು ಹಠಹಿಡಿದಿದ್ದು ಡಿ.31ರ ಮುಷ್ಕರದಲ್ಲಿ ನಾವು ಭಾಗಿಯಾವುದಿಲ್ಲ ಎಂದು ಹೇಳುತ್ತಿದ್ದಾರಂತೆ.
ಈ ಎಲ್ಲದರಿಂದ ಪದಾಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದು ಕಳೆದ 40 ವರ್ಷಗಳಿಂದಲೂ ನಾವು ಸಾರಿಗೆ ಕಾರ್ಮಿಕರು ಎಂದು ಹೇಳಿಕೊಂಡು ನೌಕರರನ್ನು ದಾರಿ ತಪ್ಪಿಸಿ ಬೇಳೆ ಬೇಯಿಸಿಕೊಂಡಿರುವುದು ಈಗಿನ ನೌಕರರಿಗೆ ತಿಳಿದುಹೋಗಿದೆ. ಇದರಿಂದ ನಾವು ಬಲವಂತವಾಗಿ ನೌಕರರನ್ನು ಮುಷ್ಕರಕ್ಕೆ ಬನ್ನಿ ಎಂದು ಕರೆದರೂ ಬರುತ್ತಿಲ್ಲ, ಏನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರಂತೆ.
ಇನ್ನೊಂದೆಡೆ ನೌಕರರ ದಾರಿ ತಪ್ಪಿಸುವ ಸಲುವಾಗಿ ಇಷ್ಟುದಿನ ಸರಿ ಸಮಾನ ವೇತನದ ಬಗ್ಗೆ ಮಾತನಾಡದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಈಗ ನಾವೂ ಕೂಡ ಸರಿ ಸಮಾನ ವೇತನ ಕೊಡಬೇಕು ಎಂಬ ಬಗ್ಗೆ ಹೋರಾಟ ಮಾಡುತ್ತೇವೆ ಎಂಬ ಹುಸಿಬಾಂಬ್ ಎಸೆದು ನೌಕರರ ದಾರಿ ತಪ್ಪಿಸುವ ಹೈಡ್ರಾಮಾ ಮಾಡಲು ಮುಂದಾಗಿದ್ದಾರಂತೆ.
ಜಂಟಿ ಕ್ರಿಯಾ ಸಮಿತಿಯವರು ಸರಿ ಸಮಾನ ವೇತನದ ಬಗ್ಗೆ ಈ ಮೊದಲೇ ಕರೆ ನೀಡಿದ್ದರೆ ಪ್ರತಿಯೊಬ್ಬ ನೌಕರರೂ ಹಾಗೂ ಅಧಿಕಾರಿಗಳು ಕೂಡ ಬೆಂಬಲ ನೀಡುತ್ತಿದ್ದರು. ಆದರೆ ಈ ದಿನದವರೆಗೂ ಅಗ್ರಿಮೆಂಟ್ ಬೇಕು ಅದೂ ಕೂಡ 25% ಕೇಳಿಕೊಂಡು ಮುಷ್ಕರಕ್ಕೆ ಕರೆ ನೀಡಿ ದಿನಾಂಕವನ್ನು ನಿಗದಿಪಡಿಸಿಕೊಂಡಿದ್ದಾರೆ.
ಆದರೆ ಇತ್ತ ಅಧಿಕಾರಿಗಳು/ನೌಕರರು ಇವರು 25% ವೇತನ ಹೆಚ್ಚಳದ ಹೋರಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ನಮಗೆ ಸರಿ ಸಮಾನ ವೇತನ ಬೇಕೇಬೇಕು ಎಂದು ಪಟ್ಟು ಹಿಡಿದು ಕುಳಿತು ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಆದರೆ ನಾವು ಕಾರ್ಮಿಕರ ಪರ ಇದ್ದೇವೆ ಎಂದು ಹೇಳಿಕೊಂಡು 25% ವೇತನ ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟು ಮುಷ್ಕರಕ್ಕೆ ಕರೆ ನೀಡುವ ಜಂಟಿಯವರು ಇಂದು ಯಾವೊಬ್ಬ ನೌಕರನೂ ಬೆಂಬಲ ನೀಡದಿರುವುದಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ.
ಇದರಿಂದ ಆಚೆ ಬರಬೇಕು ನೌಕರರನ್ನು ಮುಷ್ಕರಕ್ಕೆ ಹೇಗಾದರೂ ಮಾಡಿ ಕರೆ ತರಬೇಕು ಎಂಬ ನಿಟ್ಟಿನಲ್ಲಿ ಈಗ ನಾವು ಸರಿ ಸಮಾನ ವೇತನ ಕೊಡುವಂತೆ ಸರ್ಕಾರ ಮತ್ತು ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತೇವೆ ಎಂಬ ಹೇಳಿಕೆಯನ್ನು ಕೊಡಿಸುತ್ತಿದ್ದಾರೆ. ಆದರೆ ಇದನ್ನೇ ಈ ಜಂಟಿ ಸಮಿತಿಯ ಪ್ರಮುಖ ಎನಿಸಿರುವ ಅನಂತ ಸುಬ್ಬರಾವ್ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡಬಹುದಲ್ಲ.
ಈ ಅನಂತ ಸುಬ್ಬರಾವ್ ಅವರು ಸರಿ ಸಮಾನ ವೇತನವನ್ನು ಸರ್ಕಾರ ಕೊಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ನಾವು ಮುಷ್ಕರ ಮಾಡುತ್ತಿದ್ದೇವೆ ಹೀಗಾಗಿ ಸಂಸ್ಥೆಯ ಎಲ್ಲ ನೌಕರರು ಬೆಂಬಲ ಕೊಡಿ ಎಂದು ಮಾಧ್ಯಮಗಳ ಮೂಲಕವೇ ಕರೆ ನೀಡಿದರೆ ನೌಕರರು ಒಪ್ಪಿಕೊಳ್ಳಬಹುದೇನೋ. ಅದನ್ನು ಬಿಟ್ಟು ಇಲ್ಲಿ ತಾವು ಮೌನವಾಗಿದ್ದುಕೊಂಡೆ ಬೇರೊಬ್ಬರನ್ನು ಬಿಟ್ಟು ಸರಿ ಸಮಾನ ವೇತನ ಕೊಡಿಸಲು ನಾವು ಹೋರಾಡುತ್ತೇವೆ ಎಂದು ಹೇಳಿಕೆ ಕೊಡಿಸುವ ಇವರ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕುವಂತಿದೆ.
ಹೀಗಾಗಿ ನಮ್ಮ ಪ್ರತಿಯೊಬ್ಬ ಸಾರಿಗೆ ನೌಕರರಲ್ಲಿ ನಾವು ಕೇಳಿಕೊಳ್ಳುತ್ತಿದ್ದೇವೆ ಈ ಅನಂತ ಸುಬ್ಬರಾವ್ ಅವರು ಮಾಧ್ಯಮಗಳ ಮುಂದೆ ಬಂದು ಅಗ್ರಿಮೆಂಟ್ ಬಿಟ್ಟು ನಾವು ಸರಿಸಮಾನ ವೇತನ ಕೊಡಿಸುವುದಕ್ಕೆ ಈ ಮುಷ್ಕರ ಮಾಡುತ್ತಿದ್ದೇವೆ ಎಂದು ಹೇಳಿಕೆ ಕೊಡುವ ತನಕ ಯಾವೊಬ್ಬ ನೌಕರರು ಗೊಂದಲಕ್ಕೆ ಒಳಗಾಗದೆ ಇರಬೇಕು ಎಂದು ಪ್ರಜ್ಞಾನವಂತ ನೌಕರರು ಮನವಿ ಮಾಡಿದ್ದಾರೆ.
ಒಟ್ಟಾರೆ ಇಲ್ಲಿ ನೌಕರರು ದಡ್ಡರು ಅವರ ದಾರಿ ತಪ್ಪಿಸೋಣ ಎಂಬ ಕುತಂತ್ರವನ್ನು ಜಿಂಟಿ ಕ್ರಿಯಾ ಸಮಿತಿಯ ಪ್ರಮುಖರು ಮಾಡುತ್ತಿದ್ದಾರೆ ಎನಿಸುತ್ತಿದೆ. ಕಾರಣ ಯಾವ ಘಟಕಗಳಿಗೆ ಹೋದರೂ ಇವರನ್ನು ಯಾರು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ 40 ವರ್ಷದಿಂದ ಹೋರಾಡಿದ ನಮ್ಮನ್ನು ಯಾರು ಮಾತನಾಡಿಸುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆ. ಇದರಿಂದ ಈಗ ಮುಷ್ಕರ ಮಾಡುವುದಕ್ಕೆ ನೌಕರರ ಬೆಂಬಲವಿಲ್ಲ ಏನು ಮಾಡುವುದು ಎಂಬ ಗೊಂದಲದಲ್ಲೆ ಇದ್ದಾರೆ ಸಮಿತಿ ಪದಾಧಿಕಾರಿಗಳು.
ಈ ಎಲ್ಲವನ್ನು ಗಮನಿಸಿದರೆ ಡಿ.31ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ದಿಕ್ಕುದೆಸೆ ಇಲ್ಲದ ಹೋರಾಟವಾಗಿ ಕರೆ ನೀಡಿದವರಿಗೆ ಅವಮಾನ ಆಗುವುದು ಪಕ್ಕ ಎಂಬಂತೆ ಕಾಣುತ್ತಿದೆ. ಹೀಗಾಗಿ ಮುಷ್ಕರ ಹಿಂಪಡೆಯುತ್ತಾರೋ ಇಲ್ಲ ಏನಾದರೂ ಸರಿಯೆ ಮಾಡೇ ಬಿಡೋಣ ಎಂದು ಅಖಾಡಕ್ಕೆ ದುಮುಕ್ಕುತ್ತಾರೋ ಎಂಬದನ್ನು ತಿಳಿಯಲು ನಾಳೆ ಸಂಜೆಯೊಳಗೂ ಇಲ್ಲ ಎಂದರೆ ಡಿ.31ರ ತನಕ ಕಾಯಲೇ ಬೇಕು.
Related
You Might Also Like
ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ
ನ್ಯೂಡೆಲ್ಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಇಂದು ರಾತ್ರಿ ನಿಧನಹೊಂದಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರನ್ನು ವಯೋಸಹಜ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು....
2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್
ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ತ್ವರಿತ ವಿಲೇಗೆ ಕ್ರಮ ಬೆಂ.ಗ್ರಾ.: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ತೋರದೆ...
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 27, 2024 ರಂದು "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರು ವಿನೂತನ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ...
ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ
ಮೈಸೂರು: ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕೆಂದು ಪಂಜಾಬ್ ಹರಿಯಾಣ ಕನೋರಿ ಬಾರ್ಡರ್ನಲ್ಲಿ 29 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂಯುಕ್ತ...
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋಣ
ಬೆಂಗಳೂರು: ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬಂದು ಉದ್ಭವವಾಗುವ ಈ ಮಹಾನುಭಾವ ತಮ್ಮ ಸ್ವಾರ್ಥ ಹಾಗೂ ಆರ್ಥಿಕವಾಗಿ ಸಬಲರಾಗಲು ಸರ್ಕಾರದ ಹಾಗೂ ಸಾರಿಗೆ ನಿಗಮದ ಆಡಳಿತ ಮಂಡಳಿಯ ಮುಂದೆ...
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳು- ಸಚಿವರಿಂದ ಲೋಕಾರ್ಪಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳಿಗೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಸಚಿವರಾದ ರಾಮಲಿಂಗರೆಡ್ಡಿ ಮತ್ತು...
KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ
ಬೆಂಗಳೂರು: ಶಕ್ತಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ತಮ್ಮ ಪ್ರತಿಯೊಂದು ಸುಳ್ಳಿನ ಸರಮಾಲೆಯ ಟ್ಟೀಟ್ಗೂ ನಾವು...
ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್
ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಅಡುಗೆ ಅನಿಲ ಸ್ಫೋಟದಿಂದ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಇಂದು ಗೃಹ...
KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್ ಕೊಡಬೇಕು ಎಂದರೆ ಹೋರಾಟ ಮಾಡುವುದು ನೌಕರರು. ಅದಕ್ಕೆ ಕರೆ ಕೊಡುವುದು...
BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಕಳೆದ ಬಾರಿ ಮಳೆಯಿಂದಾದ ಅನಾಹುತಗಳು ಮತ್ತೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಯಲಹಂಕ ವಲಯದ ಟಾಟಾನ ಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು...
ಡಿ.31 ರಂದು ಇಳಕಲ್ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್ ಸಮಾವೇಶ
ಬಾಗಲಕೋಟೆ: ರಾಷ್ಟ್ರೀಯ ಸಂಘರ್ಷ ಸಮಿತಿಯ NACಯ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಒದೇ ಡಿ.31 ರಂದು ಇಳಕಲ್ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್...
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ
ಸರ್ಕಾರ ರೈತರ ಪರವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್....