ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಫೇಕ್ ಫೋನ್ ಪೇ/ UPI ಆಪ್ಗಳಿಂದ ದಿನನಿತ್ಯ ನಿರ್ವಾಹಕರು ತಮ್ಮ ಕೈಯಿಂದ ಹಣವನ್ನು ಘಟಕಕ್ಕೆ ಕಟ್ಟಿ ಹೋಗುತ್ತಿದ್ದಾರೆ, ಈ ಬಗ್ಗೆ ಘಟಕ ವ್ಯವಸ್ಥಾಪಕರಿಗೆ ಗೊತ್ತಿದೆ. ಆದರೂ ನಿರ್ವಾಹಕರಿಗೆ ಆಗುತ್ತಿರುವ ನಷ್ಟ ತಪ್ಪಿಸುವಲ್ಲಿ ಯಾವುದೇ ಪ್ರಯತ್ನ ಪಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಇನ್ನು ಈ ನಕಲಿ ಆಪ್ಗಳು ಸಾಮನ್ಯ ಆಪ್ಗಳಂತೆಯೇ ಕಾರ್ಯ ನಿರ್ವಹಿಸುತ್ತವೆ, ಹೀಗಾಗಿ ನಿರ್ವಾಹಕರಾದ ನಮಗೆ ಗೊತ್ತಾಗುವುದಿಲ್ಲ ಜತೆಗೆ ಮುಖ್ಯವಾಗಿ ನಮಗೆ ಬೇಕಿರುವುದು ಪ್ರಯಾಣಿಕರ ಮೊಬೈಲ್ನಲ್ಲಿ transaction success ಆಗಿರೋದು ಮತ್ತು ಎಷ್ಟು ಅಮೌಂಟ್ ಹಾಕಿದ್ದಾನೆ ಎಂಬುವುದು.
ಅದು ಪ್ರಯಾಣಿಕರ ಮೊಬೈಲ್ನಲ್ಲಿ ಸಕ್ಸಸ್ ಆಗಿರುತ್ತದೆ. ಆದರೆ QR ಕೋಡ್ SCAN ಮಾಡಿದ ಅಮೌಂಟ್ ಜಮೆನೆ ಆಗಿರುವುದಿಲ್ಲ. ಪ್ರಯಾಣಿಕರು ಸಕ್ಸಸ್ ಆಗಿದೆ ಅಂತ ಹೇಳುತ್ತಾರೆ ನಾವು ನೋಡಿ ಯಾವುದೆ ಮರು ಮಾತಾಡದೆ ಸರಿ ಆಯ್ತು ಅಂತ ಮುಂದುವರಿಯುತ್ತೇವೆ.
ಆದರೆ ಕಂಡಕ್ಟರ್ ಆಪ್ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಲವಾರು ERROR ಗಳು ಬರುತ್ತಿವೆ. ಅದನ್ನಾದರೂ ಸರಿ ಪಡಿಸಿ ಕೊಡಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ನಿರ್ವಾಹಕರು ಮನವಿ ಮಾಡುತ್ತಿದ್ದಾರೆ.
ಇನ್ನು ಬಸ್ ರಶ್ ಆದಾಗ ಫೇಕ್ UPI ಆಪ್ಗಳನ್ನು ಪರಿಶೀಲನೆ ಮಾಡುವುದು ಕಷ್ಟಸಾಧ್ಯ. ಇವತ್ತು ಬೆಳಗ್ಗೆ 5.15ರ ಸುಮಾರಿಗೆ ಒಂದೇ ಗುಂಪಿನ 7 ಜನ್ ಪ್ರಯಾಣಿಕರು ದಿನದ ಪಾಸು ತೆಗೆದುಕೊಂಡರು. ಎಲ್ರೂ ತಮ್ಮ ತಮ್ಮ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿ ಅಮೌಂಟ್ ಪೇ ಮಾಡಿದ್ದಾರೆ. ಸಕ್ಸಸ್ ಅಂತ ತೋರಿಸಿದೆ ನಾನು ಸುಮ್ಮನಾದೆ.
ಆದರೆ ಘಟಕದ ಟಿಕೆಟ್ ಸಕ್ಷನ್ನಲ್ಲಿ ದೂರವಾಣಿ ಮೂಲಕ ವಿಚಾರಿಸಿದಾಗ ಎರಡು ಪಾಸಿನ ಅಮೌಂಟ್ ಮಾತ್ರ ಒರಿಜಿನಲ್ ಆಪ್ ಮೂಲಕ ಪೇ ಮಾಡಿದ್ದಾರೆ. ಇನ್ನುಳಿದ ಅಮೌಂಟ್ ಫೇಕ್ UPI ಆಪ್ ಮೂಲಕ ಮಾಡಿದ್ದಾರೆ ಅಂತ ತಿಳಿಯಿತು. ಪ್ರತಿ ನಿತ್ಯ ಈ ರೀತಿ ಆದರೆ ಕರ್ತವ್ಯ ಹೇಗೆ ನಿರ್ವಹಿಸುವುದು ಎಂದು ನಿರ್ವಾಹಕರೊಬ್ಬರು ತಮಗಾದ ಆರ್ಥಿಕ ನಷ್ಟವನ್ನು ಹೇಳಿಕೊಂಡಿದ್ದಾರೆ.