ಬೆಂಗಳೂರು: ಸಾರಿಗೆ ನಿಗಮಗಳಲ್ಲಿ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ವಿನಾಕಾರಣ ಆರೋಪ ಹೊರಿಸಿ ಕೆಲಸದಿಂದ ವಜಾ ಮಾಡಿರುವ ನೌಕರರನ್ನು ಈವರೆಗೂ ತೆಗೆದುಕೊಳ್ಳದಿರುವುದರ ವಿರುದ್ಧ ನೌಕರರು ಕುಟುಂಬದವರು ಸಿಡಿದೆದ್ದಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು (ಫೆ.26ರ ಸೋಮವಾರ) ಕೆಎಸ್‌ಅರ್‌ಟಿಸಿ ಬೆಂಗಳೂರು ಕೇಂದ್ರ ಕಚೇರಿ ಮುಂದೆ 100ಕ್ಕೂ ಹೆಚ್ಚು ನೌಕರರ ಕುಟುಂಬ ಸದಸ್ಯರು ಜಮಾಯಿಸಿದ್ದು ವಜಾಗೊಳಿಸಿರುವ ನೌಕರರನ್ನು ಮರಳಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನು ವಜಾಗೊಂಡ ನೌಕರರ ಕುಟುಂಬಸ್ಥರು ಅಲ್ಲದೇ ಹಾಲಿ ಕರ್ತವ್ಯದಲ್ಲಿರುವ ನೌಕರರ ಕುಟುಂಬಸ್ಥರು ಕೂಡ ಜಮಾಯಿಸಿದ್ದು, ಸರ್ಕಾರವೇ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು, ಈ ಮೂಲಕ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಾರಿಗೆ ನೌಕರರ ಕುಟುಂಬದವರು ಕೇಂದ್ರ ಕಚೇರಿ ಮುಂದೆ ಜಾಮಯಿಸುತ್ತಿದ್ದಂತೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಕೊಂಚ ಆತಂಕ ಮನೆಮಾಡಿತ್ತು. ಏಕೆ ಇಷ್ಟೊಂದು ಜನ ಇಲ್ಲಿ ಬಂದಿದ್ದಾರೆ ಎಂದು ಗಾಬರಿಯಿಂದ ಹಿರಿಯ ಅಧಿಕಾರಗಳಿಗೆ ತಡಬಡಾಯಿಸಿಕೊಂಡೆ ಭಯದಲ್ಲಿ ಫೊನ್ ಕರೆ ಮಾಡಿ ವಿಷಯ ತಿಳಿದ್ದರು.
ಕೇಂದ್ರ ಕಚೇರಿ ಮುಂದೆ ಜಮಾಯಿಸಿರುವ ಮಂದಿ ನೀವು ಬರುವ ಮಾರ್ಚ್ ತಿಂಗಳ 4ರೊಳಗೆ ವಜಾಗೊಳಿಸಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ಮತ್ತೆ ಚುನಾವಣೆ ಸಮಯದಲ್ಲಿ ತಮ್ಮ ಪ್ರನಾಳಿಕೆಯಲ್ಲಿ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ನೌಕರರಿಗೆ ಡಿಪೋ ಮಟ್ಟದಲ್ಲಿ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು.
ಇನ್ನು ಇವುಗಳ ಜತೆಗೆ ಮತ್ತೊಂದು ಪ್ರಮುಖವಾದ 2020ರಲ್ಲಿ ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೋಡಲೇ ಅದೂ ಕೂಡ ಒಂದೇ ಕಂತಿನಲ್ಲಿ ಪಾವತಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನಾವು ಹೋರಾಟ ಮಾಡಲು ಇಂದು ಇಲ್ಲಿಗೆ ಬಂದಿಲ್ಲ ಬೇಡಿಕೆಗಳನ್ನು ಈಡೇರಿಸಿ ಎಂದು ಕೇಳಲು ಬಂದಿದ್ದೇವೆ. ಚಿಕ್ಕಚಿಕ್ಕ ಮಕ್ಕಳು ಮತ್ತು ವಯಸ್ಸಾದ ಅಮ್ಮದಿರು ಕೂಡ ಇಂದು ಕೇಂದ್ರ ಕಚೇರಿ ಮುಂದೆ ಜಮಾಯಿಸಿದ್ದು ತಮ್ಮ ಮನೆಯ ಮನೆಯವರಿಗಾದ ಸಮಸ್ಯೆಗಳನ್ನು ನಿವಾರಿಸಿ ಎಂದು ಕೇಳುತ್ತಿದ್ದಾರೆ.