KSRTC:2 ಕೇಂದ್ರ ಕಚೇರಿ ಮುಂದೆ ಜಮಾಯಿಸಿದ 100ಕ್ಕೂ ಹೆಚ್ಚು ನೌಕರರ ಕುಟುಂಬ ಮಹಿಳಾ ಸದಸ್ಯರು- ಎಂಡಿ ಭೇಟಿಗೆ ಪಟ್ಟು
ಬೆಂಗಳೂರು: ಸಾರಿಗೆ ನಿಗಮಗಳಲ್ಲಿ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ವಿನಾಕಾರಣ ಆರೋಪ ಹೊರಿಸಿ ಕೆಲಸದಿಂದ ವಜಾ ಮಾಡಿರುವ ನೌಕರರನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇಂದು (ಫೆ.26) ರಾಜ್ಯದ ವಿವಿಧ ಜಿಲ್ಲೆಗಳಿಂದ ವಜಾಗೊಂಡ ಸಾರಿಗೆ ನೌಕರರ ಕುಟುಂಬ ನೂರಾರು ಮಂದಿ ಮಹಿಳಾ ಸದ್ಯರು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಮುಂದೆ ಜಮಾಯಿಸಿದ್ದಾರೆ.
ಈ ವೇಳೆ ನಿಗಮದ ಸಿಬ್ಬಂದಿ ಮತ್ತು ಜಾಗ್ರತಾ ವಿಭಾಗದ ನಿರ್ದೇಶಕರು ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಜಮಾಯಿಸಿದ್ದ ನೌಕರರ ಕುಟುಂಬದ ಸದಸ್ಯರನ್ನು ತಮ್ಮ ಕಚೇರಿಗೆ ಕರೆದು ಅವರು ಅಹವಾಲನ್ನು ಆಲಿಸಿ ಬಳಿಕ ಮನವಿ ಪತ್ರ ಸ್ವೀಕರಿ ಇದನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
ಆದರೆ, ನಮಗೆ ಈ ಬಗ್ಗೆ ಸ್ಪಷ್ಟನೆ ಬೇಕು ಎಂಡಿ ಅವರನ್ನೇ ಕರೆಸಿ ಎಂದು ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ ಎಂಡಿ ಅವರು ಕಚೇರಿಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದ್ದು, ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರು ಸ್ಥಳಕ್ಕೆ ಆಗಮನಿಸಿ ಮನವಿ ಪತ್ರ ಸ್ವೀಕರಿಸುವುದಾಗಿ ತಿಳಿಸಿದ್ದಾರೆ ಎನ್ನಾಗಿದೆ.
ಇನ್ನು ರಾಜ್ಯದ ಶಿವಮೊಗ್ಗ, ಸಾಗರ ಮೈಸೂರು, ಕೋಲಾರ, ರಾಮನಗರ, ಮಂಡ್ಯ, ಹಾಸನ, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಲ್ಲೆಗಳಿಂದ ನೂರಾರು ಮಂದಿ ನೌಕರರು ಕುಟುಂಬದ ಮಹಿಳೆಯರು, ವಯಸ್ಸಾದ ಅಮ್ಮಂದಿರು ತಮ್ಮ ಮಕ್ಕಳ ಭವಿಷ್ಯ ಹಾಳುಡುತ್ತಿರುವುದು ಸರಿಯಲ್ಲ, ನಮಗೆ ನ್ಯಾಯಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ಅಲ್ಲದೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಕರು ಬರುವವರೆಗೂ ನಾವು ಸಂಜೆ 5 ಗಂಟೆಯಾದರೂ ಸರಿಯೇ ಈ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಇನ್ನು ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೆ ಹೋದರೆ ಮಾರ್ಚ್ 4ರಿಂದ ಉಪಾಸ ಸತ್ಯಾಗ್ರಹ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.