KSRTC ಹಾಸನ: ಬಸ್ ನಿಲುಗಡೆ ವಿಚಾರಕ್ಕೆ ಕರ್ತವ್ಯ ನಿರತ ನಿರ್ವಾಹಕನ ಮೇಲೆ ಪುಂಡರಿಂದ ಹಲ್ಲೆ


ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ಅರಕಲಗೂಡು ಘಟಕದ ಅರಕಲಗೂಡು ಮತ್ತು ಗೊರೂರು ಪಕ್ಕದ ಗ್ರಾಮದಲ್ಲಿ ಬಸ್ಸಿನ ನಿಲುಗಡೆ ವಿಚಾರಕ್ಕೆ ಕರ್ತವ್ಯ ನಿರತ ನಿರ್ವಾಹಕನ ಮೇಲೆ ಗ್ರಾಮದ ಗ್ರಾಮಸ್ಥರು ಹಲ್ಲೆ ಮಾಡಿದ್ದು ಅಲ್ಲದೆ ಬಾಯಿ ಬಂದಂತೆ ಮಾತನಾಡಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು, ಡಿಸಿಯನ್ನೇ ಸ್ಥಳಕ್ಕೆ ಕರೆಸುತ್ತೇವೆ ಎಂಬ ದಬ್ಬಾಳಿಕೆಯನ್ನು ತೋರಿದ್ದಾರೆ. ಈ ರೀತಿ ಇಂಥ ಪುಂಡರು KSRTC ಸಾರಿಗೆ ನೌಕರರಾದ ಚಾಲಕ – ನಿರ್ವಾಹಕರ ಮೇಲೆ ಹಲ್ಲೆ ಮಾಡಿದರೆ ಕರ್ತವ್ಯ ಮಾಡಲು ಸಾಧ್ಯವೇ?
ಇಂಥ ಕಿಡಿಗೇಡಿಗಳೀಗೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿ ಪಾಠಕಲಿಸಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಅದನ್ನು ಕಂಡು ಕಾಣದಂತೆ ವರ್ತಿಸಿದರೆ ಮುಂದೆ ಚಾಲನಾ ಸಿಬ್ಬಂದಿಗಳು ಡ್ಯೂಟಿ ಮಾಡುವುದಕ್ಕೇ ಕಷ್ಟವಾಗಲಿದೆ. ಹಾಗಾಗಿ ಕೂಡಲೇ ಈ ಬಗ್ಗೆ ಮೇಲಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಚಾಲನಾ ಸಿಬ್ಬಂದಿಗಳು ನಮ್ಮ ಕೆಳ ಹಂತದ ಉದ್ಯೋಗಿಗಳು ಅವರಿಗೆ ತೊಂದರೆ ಆದರೆ ಇಡೀ ಸಂಸ್ಥೆಗೆ ಸಮಸ್ಯೆಯಾದಂತೆ ಎಂಬ ನಿಲುವನ್ನು ತಾಳಬೇಕು. ಆದರೆ ಏಕೋ ಗೊತ್ತಿಲ್ಲ ನೌಕರರ ವಿಷಯ ಬಂದಾಗ ಮೌನವಾಗುತ್ತಾರೆ. ಸದೇ ನೌಕರರ ವಿರುದ್ಧ ಯಾವುದಾದರೊಂದು ಆರೋಪ ಕೇಳಿ ಬಂದ ಕೂಡಲೇ ಅವರಿಗೆ ನೋಟಿಸ್ ಜಾರಿ ಮಾಡಿ ಕೂಡಲೇ ಅಮಾನತು ಮಾಡುತ್ತಾರೆ.
ಇದೇ ಶೀಘ್ರಗತಿಯ ಕ್ರಮವನ್ನು ನೌಕರರಿಗೆ ತೊಂದರೆ ಕೊಡುವ ಪುಂಡರ ವಿರುದ್ಧ ತೆಗೆದುಕೊಂಡಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲ ಆದರೆ ಈ ಬಗ್ಗೆ ಮಾತ್ರ ನಮ್ಮ ಕೈಯಲ್ಲಿ ಏನು ಇಲ್ಲ ಎಂಬಂತೆ ವರ್ತಿಸುತ್ತಾರೆ ಅಧಿಕಾರಿಗಳು ಈ ಪರಿಣಾಮ ನಿತ್ಯ ಒಂದಲ್ಲ ಒಂದುಕಡೆ ನೌಕರರು ಹಲ್ಲೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಇನ್ನು ಮುಂದಾದರೂ ಹಲ್ಲೆ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು.
ಇಂಥ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ಸಂದೇಶಗಳನ್ನು ಸಂಸ್ಥೆಯಿಂದ ಪುಂಡರಿಗೆ ಕಳುಹಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಸ್ತ ನೌಕರರು ಒತ್ತಾಯ ಮಾಡಿದ್ದಾರೆ.

Related
