NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಅಷ್ಟೊಂದು ವೇತನ ಹೆಚ್ಚಳವಾದರೆ ಎಲ್ಲಿ ಇಟ್ಟುಕೊಳ್ಳುತ್ತೀರಿ ಎಂದಿದ್ದು ಈಗ ಇತಿಹಾಸ…!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಹೈ ಕೋರ್ಟ್‌ನಲ್ಲಿ 2023ರ ಮಾರ್ಚ್‌ನಲ್ಲಿ ಅರ್ಜಿ ಹಾಕಿದ ವಕೀಲರ ನಡೆಯನ್ನು ಅಂದು ಟೀಕಿಸಿದ್ದ ವ್ಯಕ್ತಿ ಬಳಿಕ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

ಆದರೆ ಅಂದು ಸರ್ಕಾರ ಶೆ.13ರಷ್ಟು ಹೆಚ್ಚಳ ಮಾಡಿತ್ತು. ಒಳ ಮಾತುಕತೆ ಬಳಿಕ ಶೆ.15ಕ್ಕೆ ಏರಿಕೆಯಾಯಿತು. ಆ ವೇಳೆ ಇದೇ ನಾಯಕ ಇಲ್ಲ ಶೇ.25ರಷ್ಟು ಕೊಡಲೇ ಬೇಕು ಎಂದು ಹಠ ಹಿಡಿದರು. ಆದರೆ ಸರ್ಕಾರ ಬಗ್ಗಲ್ಲಿಲ್ಲ ಎಂದು ಹೇಳಿ ಶೇ.15ರಷ್ಟು ಹೆಚ್ಚಳವಾಗಿರುವುದು ಸರ್ಕಾರದ ಏಕಪಕ್ಷೀಯ ನಿರ್ಧಾರ ಇದನ್ನು ನಾವು ಒಪ್ಪುವುದಿಲ್ಲ ಎಂದು ಹೊರಬಂದು ಬಹಿರಂಗ ಮಾಡಿದರು.

ಆ ಬಳಿಕ ಸಿಎಂ ಅವರನ್ನು ಸನ್ಮಾನಿಸಿ ನೀವು ನೌಕರರಿಗೆ ಒಳ್ಳೆಯದನ್ನು ಮಾಡಿದ್ದೀರಿ ಎಂದು ಹೇಳಿ ಸಂತಸಪಟ್ಟರು. ಆದರೆ ಈ ಎಲ್ಲ ಬೆಳವಣಿಗೆಯ ಬಗ್ಗೆ ನೌಕರರನ್ನು ಒಂದೂ ಮಾತು ಕೇಳಲಿಲ್ಲ. ಅಂದರೆ ನಾವು ಏನು ನಿರ್ಧಾರ ಮಾಡುತ್ತೇವೆಯೋ ಅದನ್ನು ನೌಕರರು ಒಪ್ಪಿಕೊಳ್ಳಬೇಕು ಎಂಬುವುದ ಇವರ ನಡೆ? ಗೊತ್ತಿಲ್ಲ.

ಇನ್ನು 2023ರ ಮಾರ್ಚ್‌ನಲ್ಲಿ ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರು ಶೇ.45ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ನಿರ್ದೇಶನ ನೀಡಿ ಎಂದು ಕೋರ್ಟ್‌ ಮೊರೆ ಹೋದಾಗ ಅವರನ್ನು ಕೀಳಾಗಿ ನೋಡಿದರು. ಅಂದರೆ ನೌಕರರ ಪರ ಒಳ್ಳೆ ಮನಸ್ಸಸಿನಿಂದ ಧ್ವನಿ ಎತ್ತಿದ ವ್ಯಕ್ತಿಗಳು ಇವರ ದೃಷ್ಟಿಯಲ್ಲಿ ಏನು?

ಈಗಲೂ ಅಷ್ಟೇ 2020ರ ಜನವರಿಯಿಂದ ಆಗಿರುವ ವೇತನ ಹೆಚ್ಚಳದ ಹಿಂಬಾಕಿ ಕೊಡುವ ಬಗ್ಗೆ ಅಂದಿನ ಸರ್ಕಾರದಲ್ಲೇ ಸ್ಪಷ್ಟಪಡಿಸಿ ನೌಕರರಿಗೆ ಕೊಡಿಸಬಹುದಿತ್ತು. ಆದರೆ ಅದನ್ನು ಮಾಡಲಿಲ್ಲ. ಬಳಿಕ ನಾಮ್‌ ಕೇ ವಾಸ್ತೆ ಎಂಬಂತೆ ಹತ್ತಾರು ಮನವಿ ಪತ್ರಗಳನ್ನು ಈ ಬಗ್ಗೆ ಕೊಟ್ಟಿದ್ದಾರೆ ಆದರೆ, ಈವರೆಗೂ ಅದು ಜಾರಿಗೆ ಬರುವ ಬಗ್ಗೆ ನೋಡಿಕೊಂಡಿಲ್ಲ.

ಅಂದರೆ ಇದರ ಅರ್ಥವೇನು? ನಾನು ಹೊಡೆದಂಗೆ ಮಾಡುತ್ತೇನೆ ನೀನು ಅತ್ತಂಗೆ ಮಾಡು ಎಂಬುವುದಾ? ಇಲ್ಲ ಎಂದಾದರೆ, ನೌಕರರ ಪರ ನಾವಿದ್ದೇವೆ ಎಂದು ಹೇಳುತ್ತಿರುವುದೇ ನಿಜವಾದರೆ ಒಂದು ಬೃಹತ್‌ ಹೋರಾಟಕ್ಕೆ ಕರೆಕೊಟ್ಟು ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸಬಹುದಲ್ಲ ಏಕೆ ಹಾಗೆ ಮಾಡುತ್ತಿಲ್ಲ.

ನೌಕರರು ನಿಮ್ಮ ಜತೆ ನಿಲ್ಲುವುದಿಲ್ಲ ಎಂಬ ಭಯವಾ ಅಥವಾ ಅವರಿಗೆ ಎಲ್ಲ ಸೌಲಭ್ಯ ಕೊಡಿಸಿದರೆ ನಮ್ಮನ್ನು ಕೀಳಾಗಿ ಕಾಣುತ್ತಾರೆ ಎಂಬ ಇಲ್ಲದ ಆಲೋಚನೆಯಾ? ಯಾವುದೇ ವ್ಯಕ್ತಿ ಸಹಾಯ ಮಾಡಿದರೆ ಅದನ್ನು ಆತ ಸಾಯುವವರೆಗೂ ನೆನೆಸಿಕೊಳ್ಳುತ್ತಿರುತ್ತಾನೆ. ಅದರಂತೆ ನೌಕರರು ಕೂಡ ತಮಗೆ ಹೋರಾಡಿ ಸೌಲಭ್ಯ ಕೊಡಿಸುವ ವ್ಯಕ್ತಿಗಳೂ ಸಂಘಟನೆಗಳನ್ನು ಎಂದು ಮರೆಯುವುದಿಲ್ಲ. ಆ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕು ಅಷ್ಟೆ.

ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತನಾಡಬೇಕೆ ಹೊರತು ನಾವಲ್ಲ ಎಂಬುದನ್ನು ನೆನೆಪಿನಲ್ಲಿ ಇಟ್ಟುಕೊಳ್ಳಬೇಕಿದೆ. ನೀವು ಕಳೆದ 4 ದಶಕಗಳಿಂದ ಒಳ್ಳೆ ಕೆಲಸ ಮಾಡಿದ್ದರೆ ಅಂದು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದ ಸಾರಿಗೆ ನೌಕರರು ಮತ್ತು ಅಧಿಕಾರಿಗಳು ಇಂದು ಅವರಿಗಿಂತ ಶೇ.35ರಿಂದ ಶೇ.39ರಷ್ಟು ಕಡಿಮೆ ವೇತನ ಪಡೆಯುವ ಪರಿಸ್ಥಿತಿ ಬರುತ್ತಿರಲಿಲ್ಲ.

ನೀವುಗಳು ಕಳೆದ 4ದಶಕಗಳಿಂದ ನೌಕರರ ಬಗ್ಗೆ ತೋರಿದ ಉದಾಸೀನತೆಯಿಂದ ನಮಗೂ ಸಾರಿಗೆ ನೌಕರರಂತೆ ವೇತನಕೊಡಿ ಎಂದು ಕೇಳುತ್ತಿದ್ದ ಸರ್ಕಾರಿ ನೌಕರರ ಬದಲಿಗೆ ಇಂದು ನಮಗೂ ಸರ್ಕಾರಿ ನೌಕರರಂತೆ ವೇತನ ಕೊಡಿ ಎಂದು ಸಾರಿಗೆ ನೌಕರರು ಕೇಳುವ ಪರಿಸ್ಥಿತಿ ಬಂದಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

4 ದಶಕ ಸಂಘಟನೆಯ ವಿರುದ್ಧ ಇಂದು ನೌಕರರು ಮಾತನಾಡುತ್ತಿದ್ದಾರೆ ಎಂದರೆ ಅವರಿಗೆ ಎಷ್ಟು ನೋವಾಗಿರಬೇಡ. ಇದಕ್ಕೆ ಯಾವುದೋ ಹೊಸ ಸಂಘಟನೆ ಕಾರಣವಾ? ಖಂಡಿತ ಇಲ್ಲ. ನೀವುಗಳು ನೌಕರರ ಬಗ್ಗೆ ತೋರಿದ ಉದಾಸೀನತೆಯೇ ಕಾರಣ. ನೌಕರರಿಗೆ ಕಾಲ ಕಾಲಕ್ಕೆ ಕಾನೂನಾತ್ಮಕವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀವು ಕೊಡಿಸಿದ್ದರೆ ಬೇರೆ ಸಂಘಟನೆ ಹುಟ್ಟಿನ ಅವಶ್ಯಕತೆ ಇರಲಿಲ್ಲ ಅಲ್ವಾ?

ಈಗಲೂ ನೀವು ನೌಕರರಿಗೆ ದೊರಬೇಕಿರುವ ಸೌಲಭ್ಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಬೇಡದ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಸುತ್ತೀರ ಎಂದರೆ ನಿಮಗೆ ಅಸ್ಥಿತ್ವದ ಭಯ ಕಾಡುತ್ತಿದೆ ಎಂದರ್ಥವಲ್ಲವೇ? ಇನ್ನಾದರೂ ನೌಕರರ ಬಗ್ಗೆ ಕಾಳಜಿ ವಹಿಸಿ ಹೋರಟ ಮಾಡಿ ಇಲ್ಲ 4 ದಶಕದ ಸಂಘಟನೆ ಇತಿಹಾಸ ಸೇರಿಕೊಳ್ಳುದರಲ್ಲಿ ರೆಡನೇ ಮಾತಿಲ್ಲ.. ಯೋಚಿಸಿ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ