NEWSನಮ್ಮಜಿಲ್ಲೆನಮ್ಮರಾಜ್ಯ

KSRTC – ಕೆಲಸ ಮಾಡೋದಾದರೆ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಧಿಕಾರಿಗಳ ವಿರುದ್ಧ ವಕೀಲ ಶಿವರಾಜು ಕಿಡಿ

ವಿಜಯಪಥ ಸಮಗ್ರ ಸುದ್ದಿ

ಹೋರಾಟ ಮಾಡಿ ಶಿಕ್ಷೆ ಅನುಭವಿಸುವುದು ನೌಕರರು ಅದರ ಫಲ ಪಡೆಯೋರು ನೀವಾ? ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಕೀಲರು

ಬೆಂಗಳೂರು: ರಾಮನಗರ ವಿಭಾಗದ ಮಾಗಡಿ ಘಟಕದಲ್ಲಿ ಡೀಸೆಲ್‌ಗೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ಕೇಳಿದರೆ ಕೊಡುವುದಕ್ಕೆ ಸರಿಯಾಗಿ ಸ್ಪಂದಿಸುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ಕಾನೂನು ಮೂಲಕವೆ ಕೊಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿರುವ ಅವರು, ಚನ್ನಪಟ್ಟಣ ಬಸ್‌ನಿಲ್ದಾಣದಲ್ಲಿ ಶೌಚಾಲಯ ಅವ್ಯವಸ್ಥೆ ಬಗ್ಗೆ ಗಮನ ಸೆಳೆದೆವು. ಈ ಬಗ್ಗೆ ಡಿಟಿಒ ಅವರಿಗೆ ಮಾಹಿತಿ ನೀಡಿ ಕ್ರಮಜರುಗಿಸಲು ಮನವಿ ಮಾಡಿದರೂ ಏನು ಕ್ರಮ ತೆಗೆದುಕೊಂಡಿಲ್ಲ. ಇನ್ನು ಪಾರ್ಕಿಂಗ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆಯೂ ದಾಖಲೆ ಕಲೆಯಾಕಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಅಧಿಕಾರಿಗಳು ತಮ್ಮ ಜವಾಬ್ದಾರಿಯುತ ಕೆಲಸ ಮಾಡುವುದನ್ನು ಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಿದ್ದಾರೆ. ಅಂದರೆ ನೀವು ಸರ್ಕಾರಿ ಕೆಲಸ ಬಿಟ್ಟು ಬೇರೆ ಕೆಲಸ ಮಾಡಲು ಬಂದಿದ್ದೀರಾ ಎಂದು ಪ್ರಶ್ನಿಸಿ, ಏನು ಮಾಡಲು ಬಂದಿದ್ದೀರಾ ಎಂಬುದನ್ನು ಸ್ಪಷ್ಟವಾಗಿ ಹೇಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ನಿಮ್ಮ ಅಕ್ರಮವನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರ ಬಳಿ ದಾಖಲೆ ಸಹಿತ ಕೊಟ್ಟು ಕಾನೂನು ಹೋರಾಟ ಮಾಡುತ್ತೇವೆ.

KSRTC ಬೆಂಗಳೂರು ಕೇಂದ್ರೀಯ ವಿಭಾಗದ 5 ಮತ್ತು 6ನೇ ಡಿಪೋದಲ್ಲಿ ಇರುವ ಗುಜರಿಗೆ ಹಾಕಬೇಕಾದ ಬಸ್‌ಗಳನ್ನು ರಸ್ತೆ ಮೇಲೆ ಓಡಾಡಿಸುತ್ತಿರುವುದರ ಬಗ್ಗೆಯೂ ಮಾಹಿತಿ ಕೇಳಿದ್ದೇವೆ. ಆದರೆ, ಆ ಬಗ್ಗೆ ಮಾಹಿತಿ ಕೊಡುವುದಕ್ಕೆ ಅಧಿಕಾರಿಗಳು ತಯಾರಿಲ್ಲ. ಹೀಗಾಗಿ ಇವರ ವಿರುದ್ಧವು ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ರಾಮನಗರದಲ್ಲಿ ಕಳೆದ ಎಂಟು ವರ್ಷದಿಂದ ಒಂದೇ ಕಡೆ ಬೇರು ಬಿಟ್ಟುಕೊಂಡು ಕುಳಿತಿರುವ ನಿಮ್ಮ (ಅಧಿಕಾರಿಗಳ)) ದರ್ಪ ಹೆಚ್ಚಾಗಿದೆ. ನೀವು ಮಾಡಿರುವ ಕೆಲಸ ಸಾಕು ಈಗ ಎತ್ತಂಗಡಿ ಮಾಡಿಸುವ ಮುನ್ನ ಎಚ್ಚೆತ್ತುಕೊಂಡು ನೀವೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಿ ಇಲ್ಲ ಕಾನೂನಿನ ಮೂಲಕವೆ ನಿಮಗೆ ಏನು ಮಾಡುತ್ತೇವೆ ಎಂಬುದನ್ನು ಕಾದು ನೋಡಿ ಎಂದು ಕಿಡಿಕಾರಿದ್ದಾರೆ.

ಸಾರಿಗೆ ನೌಕರರಿಗೆ ವೇತನ ನೀಡುವುದಕ್ಕೂ ತಾರತಮ್ಯತೆ ಎಸಗಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಜಾಣ ಮೌನ ವಹಿಸುತ್ತಿದ್ದಾರೆ. ಆದರೆ, ವೇತನ ಹೆಚ್ಚಳವಾದರೆ ಬರಿ ನೌಕರರಿಗಷ್ಟೇ ಆಗುತ್ತದೆಯೆ, ನಿಮಗೆ ಆಗುವುದಿಲ್ಲವೇ? ನೌಕರರಿಗಷ್ಟೇ ವಜಾ, ಅಮಾನತು, ವರ್ಗಾವಣೆ, ಪೊಲೀಸ್‌ ಕೇಸ್‌ ದಾಖಲಿಸಿ ಹಿಂಸೆ ನೀಡುತ್ತಿದ್ದೀರ. ಅವರ ಹೋರಾಟದ ಫಲವನ್ನು ಮಾತ್ರ ನೀವು ಅನುಭವಿಸುತ್ತಿದ್ದೀರಾ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಜಾಡಿಸಿದ್ದಾರೆ.

ಇನ್ನು ಸಂಸ್ಥೆಯಲ್ಲಿ ಎಟಿಐ, ಎಟಿಎಸ್‌, ಡಿಟಿಒ, ಡಿಸಿಗಳ ಅವಶ್ಯಕತೆ ಇಲ್ಲ. ಇವರ ಬದಲಿಗೆ  ಮೂರು ವಿಭಾಗಕ್ಕೆ ಒಬ್ಬ  ಕೆಎಎಸ್‌ ಅಧಿಕಾರಿ ( ಕಿರಿಯಶ್ರೇಣಿ) ಯನ್ನು ನೇಮಕ ಮಾಡಿ ಅವರ ಅಧೀನದಲ್ಲಿ ಕೆಲಸ ಮಾಡಲು ಡಿಎಂ ಮತ್ತು ಟಿಐ   ಅವರನ್ನು ನೇಮಕ ಮಾಡಿಕೊಂಡರೆ ಸಾಕು.  ಈ ಅಕ್ರಮ ಮತ್ತು ಸಂಸ್ಥೆಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಬಹುದು ಎಂದು ಈ ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇವೆ ಎಂದಿರುವ ಅವರು, ನೀವೆಲ್ಲ ಸೇರಿಕೊಂಡು ನೌಕರರಿಗೆ ಕಿರುಕುಳ ಕೊಡೋದು ಮುಂದುವರಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳು ಮೊದಲು ಗುಜರಾತಿಗೆ ಹೋಗಿ ನೋಡಿಕೊಂಡು ಬನ್ನಿ ನೌಕರರಿಗೆ ಅಧಿಕಾರಿಗಳು ಹೇಗೆ ಸಹಕರಿಸುತ್ತಾರೆ, ಯಾವ ರೀತಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಇನ್ನು ಶೇ.10ರಷ್ಟು ವೇತನ ಹೆಚ್ಚಳ ಮಾಡಿದರೆ ನಿಮಗೆ ಸಂಬಳ ಹೆಚ್ಚಾಗುತ್ತದೆ. 1 ಲಕ್ಷ ರೂ. 1.5ಲಕ್ಷ ರೂ.ಗಳನ್ನು ತೆಗೆದುಕೊಳ್ಳುವ ನಿಮಗೆ 10 ಸಾವಿರದಿಂದ 15 ಸಾವಿರ ರೂ.ಗಳ ವರೆಗೆ ವೇತನ ಹೆಚ್ಚಾಗುತ್ತದೆ. ಆದರೆ 15 ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳುವ ನೌಕರರಿಗೆ 1500 ರೂ. ಹೆಚ್ಚಾಗುತ್ತದೆ. ಇದರಿಂದ ನೌಕರರು ಜೀವನ ನಡೆಸಲು ಸಾಧ್ಯವೇ? ಈ ಬಗ್ಗೆ ಏಕೆ ನೀವು ಮಾತನಾಡುತ್ತಿಲ್ಲ.

ನೌಕರರು ಮಾತ್ರ ಹೋರಾಟ ಮಾಡಬೇಕು ಅವರು ಶಿಕ್ಷೆ ಅನುಭವಿಸಬೇಕು, ಸರ್ಕಾರ ಮತ್ತು ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಬೇಕು. ಆದರೆ ವೇತನ ಹೆಚ್ಚಳದ ಲಾಭವನ್ನು ಮಾತ್ರ ನೀವು ಪಡೆಯಬೇಕಾ? ಇದಾ ನಿಮ್ಮ ಸಂಸ್ಕೃತಿ ಎಂದು ಜಾಡಿಸಿರುವ ವಕೀಲ ಶಿವರಾಜು ಅವರು ನಿಮ್ಮ ಅಕ್ರಮವನ್ನು ಕಳೆದ 6 ತಿಂಗಳಿನಿಂದಲೂ ತೆಗೆದು ಇಟ್ಟಿದ್ದೀವಿ. ನಿಮಗೆ ಎಲ್ಲಿ ಪಾಠಕಲಿಸಬೇಕೊ ಅಲ್ಲೇ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ