ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ನವೆಮಬರ್ 20ರಂದು ಸಿಎಂ ಜತೆ ಅಂತಿಮಾ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆಯ ಜಂಟಿ ಕ್ರಿಯಾಸಮಿತಿ ಪದಾಧಿಕಾರಿಗಳಿಗೆ ಸುಳ್ಳು ಭರವಸೆ ನೀಡಿದರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ?
ಇಲ್ಲ ಸಾರಿಗೆ ಸಚಿವರು ಆ ರೀತಿ ಹೇಳದಿದ್ದರೂ ನಮಗೆ ಇದೇ ನ.20ರಂದು ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಈ ಬಗ್ಗೆ ಕೊನೆಯ ನಿರ್ಧಾರ ಮಾಡಲಾಗುವುದು ಎಂದು ಹೇಳಿರುವುದಾಗಿ ನೌಕರರನ್ನು ಯಾಮಾರಿಸಿದರ ಜಂಟಿ ಸಮಿತಿ ಪದಾಧಿಕಾರಿಗಳು ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು! ಈರೀತಿಯ ಗೊಂದಲದಲ್ಲಿ 1.25 ಲಕ್ಷ ಸಾರಿಗೆ ನೌಕರರು ಸಿಲುಕಿಕೊಂಡಿದ್ದಾರೆ. ಅದಕ್ಕೆ ಕಾರಣ ನಿನ್ನೆ ಅಂದರೆ ನ.20ರಂದು ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸಭೆಯನ್ನು ಸಾರಿಗೆ ನಿಗಮಗಳ ನೌಕರರಿಗೆ ಸಂಬಂಧಪಟ್ಟಂತೆ ಮಾಡಿಲ್ಲ. ಹೀಗಿರುವಾಗ ಮತ್ತೆ ದಿಢೀರನೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ಮತ್ತೆ ಅದೇ ಹಳೇ ಮನವಿ ಪತ್ರಕ್ಕೆ ದಿನಾಂಕವನ್ನು ಮಾತ್ರ ಬದಲಿಸಿ ಅವರಿಗೆ ಸಲ್ಲಿಸಿ ಫೋಟೋಗಳಿಗೆ ಫೋಸ್‌ಕೊಟ್ಟು ಮತ್ತೇ ಅದೇ ಹಳೆಯ ಭರವಸೆ ನೀಡಿದ್ದಾರೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮತ್ತೊಮ್ಮೆ ಹೇಳುತ್ತಿದ್ದಾರೆ.
ಇದನ್ನು ಗಮನಿಸಿದರೆ ಇಲ್ಲಿ ಜಂಟಿ ಕ್ರಿಯಾ ಸಮಿತಿ ಇರಬಹುದು ಅಥವಾ ಇನ್ಯಾವುದೋ ಸಂಘಟನೆ ಇರಬಹುದು. ಇವುಗಳು ನೌಕರರ ಸಮಸ್ಯೆ ಪರಿಹರಿಸುವುದಕ್ಕಿಂತ ತಮ್ಮ ಸ್ವಾರ್ಥಕ್ಕಾಗಿ ಪದೇಪದೇ ಸಾರಿಗೆ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ 32 ಹಲ್ಲುಗಳನ್ನು ಕಿಸಿದುಕೊಂಡು ಫೋಟೋಗೆ ಫೋಸ್ ನೀಡಿ ತೆಪ್ಪಗಾಗುವುದರಲ್ಲೇ ಈಗಾಗಲೇ ನಾಲ್ಕೂ ವರ್ಷಗಳನ್ನು ಕಳೆದಿವೆ ಎಂಬುವುದು ಗೊತ್ತಾಗುತ್ತಿಲ್ಲ.
ಇನ್ನು 2020ರ ವೇತನ ಪರಿಷ್ಕರಣೆಯ ಹಿಂಬಾಕಿಯನ್ನೇ 4 ವರ್ಷ ಕಳೆಯುತ್ತ ಬಂದರು ಇನ್ನೂ ಕೊಡಿಸಲು ಆಗದ ಇವರು, 2024ರ ವೇತನ ಪರಿಷ್ಕರಣೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಹೀಗಿರುವಾಗ 2024ರ ವೇತನ ಪರಿಷ್ಕರಣೆ ಹೋರಾಟದ ಹಾದಿ ಯಾವ ದಿಕ್ಕಿನಲ್ಲಿ ಕೊಂಡೊಯ್ಯಲಿದ್ದಾರೆ ಎಂಬುವುದೇ ಯಕ್ಷಪ್ರಶ್ನೆಯಾಗಿದೆ.
ಇನ್ನೂ 2020ರ ವೇತನ ಪರಿಷ್ಕರಣೆಯ ಹಿಂಬಾಕಿಯೇ ಕೈ ಸೇರುತ್ತದೋ ಇಲ್ಲವೋ ಎಂಬ ಗೊಂದಲ ಒಂದುಕಡೆಯಾದರೆ ಮತ್ತೊಂದುಕಡೆ 2024ರ ವೇತನ ಮರಿಷ್ಕರಣೆ ಯಾವಾಗ ಮಾಡಿಸುತ್ತಾರೋ ಎಂಬ ಚಿಂತೆಯಲ್ಲಿ ನೌಕರರು ನಿತ್ಯ ಮುಳುಗೇಳುತ್ತಿದ್ದಾರೆ.
ಈ ಸಂಘಟನೆಗಳು ಮಾತ್ರ ಆ ಮಂತ್ರಿ ಭೇಟಿ ಮಾಡಿದ್ದೆವು ಾವರು ಈ ಭರವಸೆಕೊಟ್ಟರು. ಇತ್ತ ಎಂಡಿ ಭೇಟಿ ಮಾಡಿದ್ದೇವು ಅವರು ಇನ್ನೇನು ನಾಳೆಯೇ ಆಗಿಬಿಡುತ್ತದೆ ಎಂದು ಹೇಳಿದ್ದಾರೆ ಎಂಬ ಹುಸಿ ಮಾತಿನಿಂದ ನೌಕರರ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡಿಕೊಂಡೆ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿವೆಯೇ ಸಾರಿಗೆ ನೌಕರರ ಪರ ಎಂದು ಹೇಳಿಕೊಳ್ಳುವ ಸಂಘಟನೆಗಳು?
ಇನ್ನು ಜಂಟಿ ಕ್ರಿಯಾ ಸಮಿತಿ ವಿಚಾರಕ್ಕೆ ಬಂದರೆ ನ.17ರಂದು ಸಾರಿಗೆ ಮಂತ್ರಿಗಳನ್ನು ಭೇಟಿ ಮಾಡಿ ಬಂದ ಬಳಿಕ ನೌಕರರಿಗೆ ನ.20ರಂದೆ ವೇತನ ಹಿಂಬಾಕಿ ಬಗ್ಗೆ ಅಂತಿಮಾ ತೀರ್ಮಾನವಾಗುತ್ತದೆ. ನೋಡಿ ನಾವು ಯಾವ ರೀತಿ ಮಾಡಿಸುತ್ತಿದ್ದೇವೆ ಎಂದು ಕೆಲ ಪದಾಧಿಕಾರಿಗಳು ನೌಕರರಿಗೆ ಖುಷಿಯಿಂದಲೇ ಅಂದು ವಿಷಯ ತೀಲಿಸಿದ್ದರಂತೆ ಆದರೆ ನ.20ರಂದು ಈ ಬಗ್ಗೆ ಯಾವುದೇ ವಿಚಾರವಿಲ್ಲ. ಬದಲಿಗೆ ಎಂಡಿ ಭೇಟಿ ಮಾಡಿದ್ದನ್ನು ಹೇಳಿಕೊಂಡರು.
ಅಂದರೆ ನ.20ರಂದು ಸಾರಿಗೆ ನಿಗಮಗಳ ನೌಕರರಿಗೆ ಸಂಬಂಧಪಟ್ಟಂತೆ ಸರ್ಕಾರ ಮತ್ತು ಸಾರಿಗೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ಇದನ್ನು ಗಮನಿಸಿದರೆ ಇಲ್ಲಿ ಸಾರಿಗೆ ಮಂತ್ರಿ ಮತ್ತು ಎಂಡಿ ಇಬ್ಬರೂ ಸಾರಿಗೆ ನೌಕರರ ಪರ ಸಂಘಟನೆಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೋ? ಇಲ್ಲ ಸಂಘಟನೆಗಳು ನೌಕರರನ್ನು ಯಾಮಾರಿಸಲು ಈ ರೀತಿ ಹೇಳಿಕೆ ಕೊಡುತ್ತಿವೆಯೋ ? ಗೊತ್ತಾಗುತ್ತಿಲ್ಲ. ಒಟ್ಟಾರೆ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ಲೆಕ್ಕಾಚಾರಲ್ಲಿ ಸಾರಿಗೆ ಮಂತ್ರಿ, ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರು ನಡೆದುಕೊಳ್ಳುತ್ತಿದ್ದಾರೆ ಎಂಬುವುದಲ್ಲಿ ಯಾವುದೇ ಸಂಶಯವಿಲ್ಲ ಎಂಬುವುದು ಮಾತ್ರ ಸ್ಪಷ್ಟ.
ಇದನ್ನೂ ಓದಿ: KSRTC: ನೌಕರರ 38 ತಿಂಗಳ ವೇತನ ಹಿಂಬಾಕಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನ.20ರವರೆಗೆ ಸಮಯ ಕೇಳಿದ ಸಚಿವ ರಾಮಲಿಂಗಾರೆಡ್ಡಿ