ಬೆಂಗಳೂರು: ಸಮಸ್ತ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರು ನಾವು ಬೇರೆಬೇರೆ ಎಂದು ಭೇದಭಾವ ಮಾಡದೆ ಒಗ್ಗಟ್ಟಿನಿಂದ ದೃಢನಿರ್ಧಾರ ತೆಗೆದುಕೊಳ್ಳುವತ್ತ ಮಹತ್ವದ ಹೆಜ್ಜೆ ಇಟ್ಟರೆ ಸರ್ಕಾರಕ್ಕೆ ಈಗಾಗಲೇ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ!
ಈ ಹಿಂದಿನಿಂದ ಅಂದರೆ ಕಳೆದ 4 ದಶಕಗಳಿಂದಲೂ ಈವರೆಗೂ ಅಧಿಕಾರಿ ವರ್ಗ ನಮಗೆ ವೇತನ ಹೆಚ್ಚಳ ಮಾಡಿ ಎಂದು ಸರ್ಕಾರಕ್ಕಾಗಲಿ ಅಥವಾ ಆಡಳಿತ ಮಂಡಳಿಗಳಿಗಾಗಲಿ ಮನವಿ ಸಲ್ಲಿಸಿರಲಿಲ್ಲ. ಹೀಗಾಗಿ ಸಾರಿಗೆ ಚಾಲನಾ ಸಿಬ್ಬಂದಿ ಈ ವೇತನ ಹೆಚ್ಚಳಕ್ಕಾಗಿ ಪ್ರತಿ 4ವರ್ಷಕ್ಕೊಮ್ಮೆ 3-4ದಿನಗಳು ಮುಷ್ಕರ ಮಾಡಿದ ಬಳಿಕ ಒಂದಷ್ಟು ವೇತನ ಹೆಚ್ಚಳವಾಗುತ್ತಿದೆ.
ಈ ವೇತನ ಹೆಚ್ಚಳ ಮಾಡುವುದಕ್ಕೂ ಮೊದಲು ಧರಣಿ ನಿರತ ನೂರಾರು ನೌಕರರನ್ನು ಅದರಲ್ಲೂ ಮುಷ್ಕರದ ಮುಂದಾಳತ್ವ ವಹಿಸಿಕೊಂಡವರನ್ನು ಅಮಾನತು, ವಜಾ, ವರ್ಗಾವಣೆ ಮಾಡಿ ಅವರಿಗೆ ನೋವು ಕೊಟ್ಟು, ಅವರ ವೇತನಕ್ಕೆ ಮತ್ತು ಮುಂಬಡ್ತಿಯನ್ನು ಕಸಿದುಕೊಂಡು ಮತ್ತೆ ಡ್ಯೂಟಿ ಕೊಡುವ ಚಾಳಿ ಇದೆ.
ಹೀಗಾಗಿ ಈ ರೀತಿ ವೇತನ ಪರಿಷ್ಕಣೆಗಾಗಿ ನೂರಾರು, ಸಾವಿರಾರು ನೌಕರರು ಬೀದಿಗೆ ಬರುವುದು ಬೇಡ ಎಂದು ಕಳೆದ 2021ರ ಏಪ್ರಿಲ್‌ನಲ್ಲಿ ನಿರಂತವಾಗಿ 14ದಿನಗಳ ಕಾಲ ಮುಷ್ಕರ ಭಾರಿ ದೊಡ್ಡಮಟ್ಟದಲ್ಲೇ ನಡೆಯಿತು. ಆ ವೇಳೆ ಕೆಲ ಸಂಘಟನೆಗಳ ಮುಖಂಡರೆ ಮುಷ್ಕರ ನಿರತ ನೌಕರರನ್ನು ಅಮಾನತು, ವಜಾ, ವರ್ಗಾವಣೆ ಜತೆಗೆ ಪೊಲೀಸ್ ಕೇಸ್‌ಗಳನ್ನು ಹಾಕಿಸಿ ಒಂದು ರೀತಿ ನೌಕರರ ವಿರುದ್ಧವೇ ಸೇಡು ತೀರಿಸಿಕೊಳ್ಳುವಂತೆ ವರ್ತಿಸಿದರು.
ಆ ವೇಳೆ ಇದೇ ನಾಲ್ಕೂ ನಿಗಮಗಳ ಅಧಿಕಾರಿಗಳು ಕೂಡ ತಮಗೆ ವೇತನ ಹೆಚ್ಚಳವಾಗುತ್ತಿರುವುದೇ ಇವರ ಹೋರಾಟದಿಂದ ಎಂದು ತಿಳಿದಿದ್ದರೂ ಆ ಕೆಲ ಮುಖಂಡರ ಮಾತನ್ನು ಕೇಳಿ ನೌಕರರನ್ನು ಬಲಿಪಶು ಮಾಡಿದರು. ಆ ಬಳಿಕ ಅಂದರೆ ಈಗ ಅಧಿಕಾರಿಗಳಿಗೂ ತಾವು ಮಾಡಿದ ತಪ್ಪಿನ ಅರಿವಾದಂತೆ ಕಾಣುತ್ತಿದೆ. ಹೀಗಾಗಿ ಪ್ರಸ್ತುತ ನಾವು ಅಂದರೆ ಅಧಿಕಾರಿಗಳು- ನೌಕರರು ಬೇರೆಬೇರೆ ಅಲ್ಲ ನಾವೆಲ್ಲ ಸಂಸ್ಥೆಯ ಸಹೋದ್ಯೋಗಿಗಳು ಎಂದು ಅರಿತಿದ್ದಾರೆ ಎನ್ನಬಹುದೇನೋ ಗೊತ್ತಿಲ್ಲ.
ಆದರೆ, ಈವರೆಗೂ ವೇತನ ಹೆಚ್ಚಳ ಸಂಬಂಧ ಯಾವುದೇ ಮನವಿಯನ್ನು ಕೊಡದಿದ್ದವರು ಈಗ ಮನವಿ ಪತ್ರವನ್ನು ಸಂಬಂಧಪಟ್ಟ ಸಾರಿಗೆ ಸಚಿವರಿಗೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ನಮಗೂ ಸರ್ಕಾರಿ ನೌಕರರ ಸರಿ ಸಮಾನ ವೇತನ ಅಂದರೆ 7ನೇ ವೇತನ ಆಯೋಗವನ್ನು ಅಳವಡಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ.
ಇದು ಸಾರಿಗೆ ನಿಗಮಗಳಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಂತಾಗಿದ್ದು, ಈವರೆಗೂ ನೌಕರರು ಮತ್ತು ನಾವು ಬೇರೆಬೇರೆ ಎಂದುಕೊಂಡಿದ್ದ ಅಧಿಕಾರಿಗಳು ಕೂಡ ನಾವೆಲ್ಲರೂ ಒಂದೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಅಧಿಕಾರಿಗಳನ್ನು ಬೇರೆ ರೀತಿ ನೋಡುತ್ತಿದ್ದ ನೌಕರರು ಕೂಡ ಇಂದು ಅವರು ನಮ್ಮ ಮೇಲಧಿಕಾರಿಗಳು ಅವರು ನಮ್ಮವರೆ ಎನ್ನುತ್ತಿದ್ದಾರೆ.
ಇನ್ನು ಈ ಎಲ್ಲದರ ನಡುವೆ ನೌಕರರು ಮತ್ತು ಅಧಿಕಾರಿಗಳ ಮಧ್ಯೆಯೇ ಭಾರಿ ಅಂದರೆ ದೊಡ್ಡ ಕಂದಕವನ್ನೇ ಸೃಷ್ಟಿಸಿ ಒಡೆದಾಳುತ್ತಿದ್ದ ಕೆಲ ಸಂಘಟನೆಗಳ ಮುಖಂಡರ ಮುಖವಾಡ ಈಗ ಕಳಚಿದ್ದು ಸಮಸ್ತ ಸಾರಿಗೆಯ 1.25 ಲಕ್ಷ ನೌಕರರು ಕಾಲಕಾಲಕ್ಕೆ ತಕ್ಕ ಸೌಲಭ್ಯಗಳನ್ನು ಪಡೆಯುವುದಕ್ಕೆ ಒಗ್ಗಟ್ಟಾಗಿದ್ದಾರೆ.
ಇನ್ನು ಈಗಲೂ ಸಾರಿಗೆಯ ಅಧಿಕಾರಿಗಳು- ನೌಕರರ ಸಲಹೆ ಕೇಳದೆ ಕೆಲ ಸಂಘಟನೆಗಳ ಮುಖಂಡರು ವೇತನ ಹೆಚ್ಚಳದ ಬೇಡಿಕೆಯನ್ನು ಸರ್ಕಾರ ಮುಂದೆ ಇಡುತ್ತಿದ್ದಾರೆ. ಅಲ್ಲದೆ ಒಂದು ರೀತಿ ಸರ್ವಾಧಿಕಾರಿ ಧೋರಣೆಯಲ್ಲಿ ನೌಕರರ ದೂರವಿಟ್ಟು ನಿರ್ಧಾರ ತೆಗೆದುಕೊಂಡು ಬಳಿಕ ನೌಕರರ ಬೆಂಬಲವಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುತ್ತಿದ್ದಾರೆ.
ಆದರೆ ಶೇ.99ರಷ್ಟು ನೌಕರರು ನೂರಕ್ಕೆ ನೂರರಷ್ಟು ಅಧಿಕಾರಿಗಳಿಗೆ ನಾಲ್ಕೂ ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್ ಬೇಡ ನಮಗೆ ಸರಿ ಸಮಾನ ವೇತನ ಆಗಬೇಕು ಆ ನಿಟ್ಟಿನಲ್ಲಿ ನಮ್ಮ ಪರವಾಗಿ ಹೋರಾಟ ಮಾಡುವುದಿದ್ದರೆ ಬನ್ನಿ ಇಲ್ಲ ಸುಮ್ಮನಿರಿ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ.
ಈ ಎಲ್ಲದರ ನಡುವೆ ನಾವು ಯಾವ ಸಂಘಟನೆಗಳನ್ನು ನೆಚ್ಚಿಕೊಂಡರು ಪ್ರಯೋಜನವಿಲ್ಲ ಅಧಿಕಾರಿಗಳು-ನೌಕರರು ಒಗ್ಗಟ್ಟಿನಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದು ಈಗಾಗಲೇ ನಿರ್ಧಾರಕ್ಕೆ ಬಂದಿದ್ದು ಈ ಸಂಬಂಧ ಹಲವಾರು ಸುತ್ತಿನ ಮಾತುಕತೆಗಳು ಆಗಿವೆ. ಅದರಂತೆ ಸರ್ಕಾರ ಕೂಡ ನೂರಕ್ಕೆ ಇನ್ನೂರರಷ್ಟು ಅಧಿಕಾರಿಗಳು -ನೌಕರರ ಬೇಡಿಕೆ ಈಡೇರಿಸುವತ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೆಸರೇಳಲಿಚ್ಛಿಸದ ಅಧಿಕಾರೊಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಮತ್ತೊಂದೆಡೆ ನಾವು ಬಸ್ ನಿಲ್ಲಿಸಿ ಮುಷ್ಕರ ಮಾಡುವುದಿಲ್ಲ ನಮ್ಮದೇನಿದ್ದರೂ ಶಾಂತಿಯುತ ಧರಣಿಗೆ ಬೆಂಬಲ ಎಂಬ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ಅಧಿಕಾರಿಗಳ ವರ್ಗ ಮುಂದಿಡುತ್ತಿದೆ. ಈಎಲ್ಲವನ್ನು ಗಮನಿಸುತ್ತಿರುವ ಸರ್ಕಾರ ನಿನ್ನೆ ಅಂದರೆ ಏ.5ರಂದು ನಡೆಯಬೇಕಿದ್ದ ಸಿಎಂ ಅಧ್ಯಕ್ಷತೆಯ ಸಭೆಯನ್ನೇ ಮುಂದೂಡಿದ್ದು ಭಾರಿ ಅಚ್ಚರಿಗೂ ಕಾರಣವಾಗಿದೆ. ಹೀಗಾಗಿ ಇನ್ನಾದರೂ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಉಳಿಗಾವಿಲ್ಲ…!
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...