ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಒಂದೆ, ಅದು ನಮಗೆ ವೇತನ ಆಯೋಗದ ಮಾದರಿಯಲ್ಲಿ ವೇತನ ಕೊಡಬೇಕು ಎಂಬುವುದು. ಅದಕ್ಕೆ ಕಟಿಬದ್ಧವಾಗಿ ನಿಂತಿರುವುದು ನೌಕರರ ಕೂಟ ಮಾತ್ರ.
ಆದರೆ, ಈಗ ಆ ನೌಕರರ ಕೂಟದ ಪದಾಧಿಕಾರಿಗಳನ್ನು ಕಳೆದ 4 ದಶಕಕ್ಕೂ ಹೆಚ್ಚು ಕಾಲದಿಂದ ನೌಕರರ ತುಳಿದುಕೊಂಡೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಬಂದಿರುವ ಮತ್ತು ಬರುತ್ತಿರುವ ಸಂಘಟನೆಯ ಮುಖ್ಯಸ್ಥರು ಇತ್ತೀಚೆಗೆ ಗೌಪ್ಯ ಸಭೆ ಕರೆದು ಸುಮಾರು 4 ಗಂಟೆಗಳು ಚರ್ಚಿಸಿದ್ದಾರೆ.
ಈ ವೇಳೆ ಕೂಟದ ಪದಾಧಿಕಾರಿಗಳು, ನೌಕರರನ್ನು ಈವರೆಗೆ ವಂಚಿಸಿರುವುದು ಸಾಕು. ಇನ್ನುಮೇಲಾದರು ಅವರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಪೂರೈಸುವುದಕ್ಕೆ ಮುಂದಾಗಿ. ಕಾರಣ ಸರ್ಕಾರವು ಪೂರೈಸುವುದಕ್ಕೆ ಬದ್ದವಿದೆ. ಹೀಗಾಗಿ ಸರ್ಕಾರವೇ ನೌಕರರಿಗೆ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡುವ ಬಗ್ಗೆ ಲಿಖಿತ ಭರವಸೆಯನ್ನು ನೀಡಿದೆ.
ಹೀಗಾಗಿ ಸರ್ಕಾರ ಕೂಡ ನೌಕರರ ಬೇಡಿಕೆಗೆ ಸ್ಪಂದಿಸಿದೆ. ಆದರೆ ನೀವು ಏಕೆ ವೇತನ ಆಯೋಗ ಮಾದರಿಯನ್ನು ಅಳವಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೀರಿ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೆ ಇದು ಸಾಧ್ಯವೇ ಇಲ್ಲ. ನಾವು ಹೇಳಿದಂತೆ ಅಗ್ರಿಮೆಂಟ್ ಮಾತ್ರ ಮಾಡಬೇಕು. ಕಾರಣ ನೌಕರರು ಈಗ ಇರುವಂತೆಯೇ ಇರಬೇಕು. ಅವರಿಗೆ ಎಲ್ಲ ಸೌಲಭ್ಯಗಳು ಸಿಕ್ಕರೆ ಸಂಘಟನೆಗಳನ್ನು ಬಿಟ್ಟು ಬಿಡುತ್ತಾರೆ. ಹೀಗಾಗಿ ಅವರು ಈಗ ಇರುವಂತೆಯೇ ಇರಬೇಕು ಎಂದು ವಾದಿಸಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಈಗಾಗಲೇ ನೌಕರರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಇತ್ತೀಚೆಗೆ ಹುಟ್ಟಿಕೊಂಡಿರುವ ಹೊಸ ಸಂಘಟನೆಯೊಂದರ ಪದಾಧಿಕಾರಿಗಳಿಗೂ ಮೈಂಡ್‌ವಾಷ್‌ಮಾಡಿ ಅವರು ಕೂಡ ಅಗ್ರಿಮೆಂಟ್‌ಗೆ ಒಪ್ಪಿಗೆ ನೀಡುತ್ತಿದ್ದಾರೆ. ಈ ಹೊಸ ಸಂಘಟನೆಯ ಪದಾಧಿಕಾರಿಗಳು ಹೇಳುತ್ತಿರುವುದು ವೇತನ ಆಯೋಗ ಅಳವಡಿಸುವುದು ತುಂಬ ಕಷ್ಟ. ಹೀಗಾಗಿ ಅಗ್ರಿಮೆಂಟ್ ಆದರೆ ನೌಕರರಿಗೆ ವೇತನ ಹೆಚ್ಚಳವಾಗಲಿದೆ ಎಂದು.
ಆದರೆ, ನೌಕರರು ಈ ಹಿಂದಿನಿಂದಲೂ ಶೇ.30ರಿಂದ ಶೇ.40ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಮತ್ತೆ ಈಗ ಅಗ್ರಿಮೆಂಟ್ 18 ರಿಂದ 25% ಆದರೂ ನೌಕರರಿಗೆ ಮತ್ತೆ ಅನ್ಯಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೂ ಸರಿಯೇ ನಮಗೆ ಅಗ್ರಿಮೆಂಟೇ ಬೇಕು ಎಂದು ಪಟ್ಟು ಹಿಡಿದಿದೆ ನೌಕರರ ವಂಚಿಸಿಕೊಂಡೇ ಬರುತ್ತಿರುವ ಸಂಘಟನೆ.
ಇನ್ನು ಮೂರು ದಿನದ ಹಿಂದೆ ನಡೆದ ಗೌಪ್ಯ ಸಭೆಯಲ್ಲಿ ನೌಕರರ ಕೂಟದ ಪದಾಧಿಕಾರಿಗಳನ್ನು ಮೈಂಡ್‌ವಾಷ್ ಮಾಡುವ ಯತ್ನ ನಡೆದಿದೆ. ಅದರೆ ಅವರು ಮೊದಲು ನಮ್ಮ ನೌಕರರು ಹಸಿದಿದ್ದಾರೆ, ಅವರಿಗೆ ಹೊಟ್ಟೆತುಂಬ ಮೂರೊತ್ತು ಇಲ್ಲದಿದ್ದರೂ ಕನಿಷ್ಠ ಪಕ್ಷ ಒಂದೊತ್ತಿನ ಊಟವನ್ನಾದರೂ ಕೊಡಬೇಕಲ್ಲವೇ ಎಂದು ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಕೂಟದ ಪದಾಧಿಕಾರಿಗಳು ವೇತನ ಆಯೋಗ ಮಾದರಿಯೇ ಬೇಕು ಎಂದು ಹೇಳಿದ್ದಾರೆ. ಆದರೆ ಗೌಪ್ಯ ಸಭೆಕರೆದಿದ್ದ ಆ ಸಂಘಟನೆಯ ಮುಖ್ಯಸ್ಥರು ಇದು ಸಾಧ್ಯವಿಲ್ಲ, ಇದನ್ನು ಕೈ ಬಿಟ್ಟು ನೀವು ಅಗ್ರಿಮೆಂಟ್ ಮಾಡಲು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಈ ಸಂಘಟನೆಗೆ ನೌಕರರಿಗೆ ಸರಿಸಮಾನ ವೇತನ ಕೊಡಿಸುವ ಇಚ್ಛಾಸಕ್ತಿ ಇಲ್ಲ ಎಂಬುವುದು ಇದರಿಂದ ತಿಳಿದು ಬರುತ್ತಿದೆ. ಬರಿ ನೌಕರರ ಸುಲಿಗೆ ಮಾಡಬೇಕು. ಅಗ್ರಿಮೆಂಟ್ ಮಾಡಿದರೆ ಸರ್ಕಾರದಿಂದಲೂ ಒಂದಷ್ಟು ಬಕ್ಸಿಸ್ ಸಿಗುತ್ತದೆ. ಜತೆಗೆ ನೌಕರರ ವೇತನದಿಂದ ತಿಂಗಳಿಗೆ 5ರಿಂದ 15ರೂ.ಗಳ ವರೆಗೆ ಹಣವು ಸಿಗುತ್ತದೆ. ಹೀಗಾಗಿ ನೌಕರರ ಬೇಡಿಕೆ ಈಡೇರಿಸಬೇಕು ಎಂಬ ಒತ್ತಾಯವನ್ನು ಬಹಿರಂಗವಾಗಿ ಮಾಡಬೇಕು. ಆದರೆ ಒಳೋಳಗೆ ಅವರನ್ನು ನಾವು ಹದ್ಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂಬ ಕೀಳು ಮನೋಭಾವನ್ನು ತಳೆದಿವೆ.
ಹೀಗಾಗಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಳೆದ 20 ವರ್ಷದಿಂದಲೂ ಕೊಡಿಸದೆ ಮುಂದೂಡಿಕೊಂಡೆ ಬರುವಂತೆ ಮಾಡಿವೆ ಈ ಮಹಾನ್ ಸಂಘಟನೆಗಳು. ಈಗಲೂ ಅದನ್ನೇ ಮಾಡುತ್ತಿವೆ. ಅದನ್ನು ಒಪ್ಪದ ನೌಕರರ ಕೂಟವನ್ನು ಹೇಗಾದರೂ ಮಾಡಿ ತಮ್ಮತ್ತ ಸೆಳೆದುಕೊಂಡರೆ ನೌಕರರನ್ನು ಗಿರಿಗಿಟ್ಟಲೇ ತಿರುಗಿಸಬಹುದು ಎಂಬ ಲೆಕ್ಕಾಚಾರದಲ್ಲೇ ಈಗಲೂ ಮುಳುಗಿರುವುದು ದುರಂತ..