ಬೆಂಗಳೂರು: ಪ್ರಸ್ತುತ KSRTC ತನ್ನ ಸರಕು ಸಾಗಾಣಿಕೆಗಳನ್ನು ಬಸ್‌ಗಳಲ್ಲೇ ಸಾಗಣೆ ಮಾಡುತ್ತದೆ. ಹೀಗಾಗಿ ಇನ್ನು ಮುಂದೆ ಪಾರ್ಸಲ್ ಮೂಲಕ ಸರಕು ಸಾಗಣೆ ಮಾಡುತ್ತಿರುವುದನ್ನು ನಿಲ್ಲಿಸಿ ಭವಿಷ್ಯದಲ್ಲಿ ಲಾರಿಗಳ ಮೂಲಕ ಅದೂ KSRTC ಲಾರಿಗಳ ಮೂಲಕ ಸರಕು ಸಾಗಣೆ ಮಾಡುವುದಕ್ಕೆ ಮುಂದಾಗಿ.
ಈ ಸರಗು ಸಾಗಣೆ ವ್ಯವಹಾರದ ಮೇಲೆ ಕಣ್ಣಿಟ್ಟು ಲಾರಿಗಳನ್ನು ಖರೀದಿಸಲು ಮುಂದಾಗಿದೆ. ಇದಿಷ್ಟೇ ಅಲ್ಲದೆ ಶೀಘ್ರದಲ್ಲೇ ಲಾರಿಗಳ ಸೇವೆ ಒದಗಿಸಲಾಗುವುದು ಎಂಬ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರಬಿದ್ದಿದೆ.
ಈ ಮೂಲಕ ಸರಕು ಸಾಗಾಣಿಕೆಗಾಗಿಯೇ ಪ್ರತ್ಯೇಕ ವಾಹನಗಳ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ತನ್ನ ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿದೆ.
ಇನ್ನು ಪ್ರಸ್ತುತ KSRTC ತನ್ನ ಸರಕು ಸಾಗಾಣಿಕೆಗಳನ್ನು ಬಸ್‌ಗಳಲ್ಲೇ ಪಾರ್ಸೆಲ್ ಮೂಲಕ ಸಾಗಣೆ ಮಾಡುತ್ತದೆ. ಈಗಲೂ ಕೂಡ ಆ ಪಾರ್ಸೆಲ್‌ಗಳಿಗೆ ಬಾಡಿಗೆಯನ್ನು ತೆಗೆದುಕೊಳ್ಳುತ್ತಿದೆ. ಆದರೆ ದೊಡ್ಡಮಟ್ಟದಲ್ಲಿ ಸರಕು ಸಾಗಣೆ ಮಾಡಲಾಗುತ್ತಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲೇ ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಮುಂದಾಗುತ್ತಿದೆ.
ನಿಗಮದಿಂದ ಸರಕು ಲಾರಿಗಳನ್ನು ರಸ್ತೆಗಿಳಿಸಲಾಗುತ್ತದೆ ಎಂದು ತಿಳಿಸಿದ್ದು, ಇದಕ್ಕೆ ಚಾಲಕರನ್ನು ನಿಗಮದಿಂದ ನೇರ ನೇಮಕಾತಿ ಮಾಡಿಕೊಳ್ಳುತ್ತದೆಯೋ ಇಲ್ಲ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕೊ ಎಂಬ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
ಈ ನಡುವೆ ಈಗಗಾಲೇ ಬಸ್‌ಗಳಲ್ಲಿ ಚಾಲಕ ಮತ್ತು ನಿರ್ವಾಹಕರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಕ್ಷೀಣಿಸುತ್ತಿದ್ದು, ನಿವೃತ್ತಾರದ ನೌಕರರ ಸ್ಥಾನಕ್ಕೆ ಖಾಸಗಿಯಾಗಿ ಚಾಲನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಕ್ಕೆ ಮುಂದಾಗಿದೆ. ಆದರೆ ಅಂದು ಕೊಂಡಷ್ಟರ ಮಟ್ಟಿಗೆ ಈ ಗುತ್ತಿಗೆ ಆಧಾರದ ಮೇಲೆ ನೇಮಕವಾಗುತ್ತಿಲ್ಲ ಎಂದು ಕೂಡ ಹೇಳಲಾಗುತ್ತಿದೆ.
ಇತ್ತ ಲಾರಿಗಳನ್ನು ನಿಗಮದಿಂದ ಲಾರಿಗಳನ್ನು ರಸ್ತೆಗಳಿಸುವುದು ಸರಿಯಾದ ನಿರ್ಧಾರವೇ ಆಗಿದ್ದರೂ ಕೂಡ ಆ ಲಾರಿಗಳ ಚಾಲಕರನ್ನು ಹೇಗೆ ನೇಮಿಸಿಕೊಳ್ಳಬೇಕು ಎಂಬ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಬೇಕಿದೆ.