NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಎಂಡಿ ಅನ್ಬುಕುಮಾರ್‌ ವರ್ಗಾವಣೆ: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌ KSRTC ನೂತನ ಸಾರಥಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ನಡೆದಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶಿಸಿದೆ.

ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಐಎಎಂ ಸ್ಪೆಷಲ್ ಆಫೀಸರ್ ಆಗಿದ್ದಂತ ಅಮಲಾನ್ ಅದಿತ್ಯ ಬಿಸ್ವಾಸ್ ಅವರನ್ನು ಪಿಡಬ್ಲ್ಯುಡಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಿದೆ.‌ ಇನ್ನು ನವೀನ್ ರಾಜ್ ಸಿಂಗ್ ಅವರನ್ನು ಯವನಿಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರೆ, ವಿ ಅನ್ಬುಕುಮಾರ್ ಅವರನ್ನು ಕೆಎಸ್ಆರ್ಟಿಸಿ ಎಂಡಿ ಸ್ಥಾನದಿಂದ ವರ್ಗಾವಣೆ ಮಾಡಿ ಹೌಸಿಂಗ್ ಡಿಪಾರ್ಟಮೆಂಟ್ ಸೆಕ್ರೆಟರಿ ಹಾಗೂ ವೆಟರ್ನರಿ ಸೈನ್ಸ್ ಆಂಡ್ ಫಿಷರಿಂಗ್ ಇಲಾಖೆಯ ಸೆಕ್ರೆಟರಿಯಾಗಿ ನೇಮಕ ಮಾಡಲಾಗಿದೆ.

ಸಮೀರ್ ಶುಕ್ಲ ಅವರನ್ನು ಎಂಎಸ್ಎಂಇ ಮತ್ತು ಮೈನಿಂಗ್ ಕಾರ್ಯದರ್ಶಿ ಹುದ್ದೆಗೆ ನೇಮಸಿದ್ದರೆ, ರಂದೀಪ್ ಚೌದರಿ ಅವರನ್ನು ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ, ಸೆಕ್ರೆಟರಿ ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಮತ್ತು ಸ್ಟಾಟಿಟಿಕ್ಸ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಐಎಎಸ್ ಅಧಿಕಾರಿ ರಂದೀಪ್ ಡಿ. ಅವರನ್ನು ಯವನಿಕದ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ ಎಸ್ಟಿ ವೆಲ್‌ಫೇರ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪೊಮ್ಮಲ ಸುನೀಲ್ ಕುಮಾರ್ ಅವರನ್ನು ಕಂದಾಯ ಇಲಾಖೆಯ ಕಮೀಷನರ್ ಹುದ್ದೆಯಿಂದ ನೋಂದಣಿ ಮತ್ತು ಮುದ್ರಣಾಂಕ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಲಾಗಿದೆ.

ವಿ.ಅನ್ಬುಕುಮಾರ್‌ ಅವರಿಂದ ತೆರವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ  ಪ್ರಭಾರ ವ್ಯವಸ್ಥಾಪಕ ನಿರ್ದೇಶಕಕರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಎರಡು ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಬಳಿಕ ವರ್ಗಾವಣೆಯನ್ನು ರದ್ದು ಮಾಡಿ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಸರ್ಕಾರ ಆದೇಶ ಹೊರಡಿಸಿತ್ತು.

Advertisement

ಆದರೆ ಈ ಬಾರಿ ಅನ್ಬುಕುಮಾರ್‌ ಅವರನ್ನು ಹೌಸಿಂಗ್ ಡಿಪಾರ್ಟಮೆಂಟ್ ಸೆಕ್ರೆಟರಿ ಹಾಗೂ ವೆಟರ್ನರಿ ಸೈನ್ಸ್ ಆಂಡ್ ಫಿಷರಿಂಗ್ ಇಲಾಖೆಯ ಸೆಕ್ರೆಟರಿಯಾಗಿ ನೇಮಕಮಾಡಿ ವರ್ಗಾವಣೆ ಮಾಡಿದೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!