NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನಿವೃತ್ತ ನೌಕರರ ಧರಣಿ ಸ್ಥಳಕ್ಕೆ ಎಂಡಿ ಭೇಟಿ – ಬೇಡಿಕೆ ಈಡೇರಿಕೆಗೆ ಶ್ರಮಿಸುವ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಆಗಿರುವ 2020ರ ವೇತನ ಪರಿಷ್ಕರಣೆ ಸೌಲಭ್ಯ 2020 ಜನವರಿ 1ರಿಂದ 2023 ಮಾರ್ಚ್‌ನಿಂದೀಚೆಗೆ ನಿವೃತ್ತರಾದವರಿಗೆ ಸಿಕ್ಕಿಲ್ಲದಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವ ಗಮನಕ್ಕೆ ತಂದು ವೇತನ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್‌ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಇಂದು (ಅ.19-ಗುರುವಾರ) ನಗರದ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿದ ಅವರಿಗೆ ನಿವೃತ್ತ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು, ನಿಮ್ಮ ಬೇಡಿಕಗಳ ಬಗ್ಗೆ ಸಿಎಂ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರಲಾಗುವುದು. ಜತೆಗೆ ಕಾನೂನು ಬದ್ದವಾಗಿ ನಿಮಗೆ ಸಿಗಬೇಕಿರುವ ಸೌಲಭ್ಯವನ್ನು ಕೊಡಿಸುವ ಬಗ್ಗೆ ನಾವು ಕೂಡ ಶ್ರಮಿಸಲಿದ್ದೇವೆ. ಇದಕ್ಕೆ ನಿಗಮದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಧರಣಿ ನಿರತ ನಿವೃತ್ತ ನೌಕರರ ಬೇಡಿಕೆಗಳೇನು?: ಪ್ರಸ್ತುತ ಅಂದರೆ ಜನವರಿ 1-2020ರಿಂದ ಜಾರಿಯಾಗಬೇಕಿದ್ದ ಪರಿಷ್ಕೃತ ವೇತನವು  ಕೋವಿಡ್‌ -19 ಮತ್ತಿತರ ಕಾರಣಗಳಿಂದ ವಿಳಂಬವಾಗಿದ್ದರಿಂದ ಅಂತಿಮವಾಗಿ 17-ಮಾರ್ಚ್‌2023ರಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದರು. ಅದು 31 ಡಿಸೆಂಬರ್‌ 2019ರಲ್ಲಿ ನೌಕರರು ಪಡೆಯುತ್ತಿದ್ದ ವೇತನದ ಆಧಾರದ ಮೇಲೆ ಹೆಚ್ಚಳ ಮಾಡಲಾಗಿದೆ ಎಂದೂ ಕೂಡ ಆದೇಶ ಹೊರಡಿಸಿದ್ದಾರೆ.

ಅಂದರೆ ಈ ವೇತನ ಹೆಚ್ಚಳವು ಜನವರಿ 1-2020ರಿಂದ ಜಾರಿಗೆ ಬಂದಿದೆ. ಅದರಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಮಾರ್ಚ್‌ 2023ರಿಂದ ಪರಿಷ್ಕೃತ ವೇತನ ಜಾರಿಯಾಗಿದ್ದು ಇದರ ಸೌಲಭ್ಯವನ್ನು ಈಗಾಗಲೇ ಆ ಎಲ್ಲ ನೌಕರರು ಪಡೆಯುತ್ತಿದ್ದಾರೆ.

ಇನ್ನು ಸರ್ಕಾರದ ಈ ಆದೇಶದಂತೆ 2020ರಿಂದ 2023ರವರೆಗೆ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ನೂರಾರು ನೌಕರರು ಮತ್ತು ಅಧಿಕಾರಿಗಳು ವೇತನ ಪರಿಷ್ಕರಣೆಯ ಹಿಂಬಾಕಿ ಹಣವನ್ನು ಪಡೆಯಲು ಅರ್ಹರಿದ್ದು, ಈ ಬಗ್ಗೆ ನಾಲ್ಕೂ ನಿಗಮಗಳ ನೌಕರರಿಗಾಗಿ ರಚಿಸಲಾಗಿರುವ ಏಕ ಸದಸ್ಯ ಸಮಿತಿಯು ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರದ ಸೂಕ್ತ ಅನುದಾನದೊಂದಿಗೆ ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಇನ್ನೂ ತೀರ್ಮಾನ ತೆಗೆದುಕೊಳ್ಳದಿರುವುದು ನೋವಿನ ಸಂಗತಿಯಾಗಿದೆ.

ಪರಿಷ್ಕೃತ ವೇತನ ಜಾರಿಯಾಗಿ ಈ ಅಕ್ಟೋಬರ್‌ ತಿಂಗಳಿಗೆ 7ತಿಂಗಳು ಕಳೆಯುತ್ತಿದ್ದರೂ ಸಹ ಪರಿಷ್ಕೃತ ವೇತನದ ಹಿಂಬಾಕಿ ಮೊತ್ತವನ್ನು ನಿವೃತ್ತ ನೌಕರರಿಗೆ ಮತ್ತು ಇತರ ಸಿಬ್ಬಂದಿಗೆ ಪಾವತಿ ಮಾಡುವ ಬಗ್ಗೆ ನಿಗಮಗಳ ಆಡಳಿತ ಮಂಡಳಿಯಾಗಲೀ ಅಥವಾ ಏಕ ಸದಸ್ಯ ಸಮಿತಿಯಾಗಲೀ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಈ ಹಿಂದೆ 2016ರಲ್ಲಿ ವೇತನ ಹೆಚ್ಚಳದ ಸಂದರ್ಭದಲ್ಲಿ ನಿಗಮದಿಂದ ಹೊರಡಿಸಿದಂತೆ ಈ ಬಾರಿಯೂ ಅಂದರೆ 2020ರಲ್ಲೂ ನಿವೃತ್ತರಿಗೆ ಹಿಂಬಾಕಿಯನ್ನು ಪಾವತಿಸಬೇಕು. ಕಾರಣ ಈವರೆಗೂ ನಿಗಮಗಳಲ್ಲಿ ಹಿಂಬಾಕಿ ಪಾವತಿಸದ ಇತಿಗಹಾಸವಿಲ್ಲ. ಆದರೆ ಕೋವಿಡ್‌ -19ಅನ್ನು ಮುನ್ನೆಲೆಗೆ ತಂದು ನಿವೃತ್ತರಾದ ನಮ್ಮಗಳ ಹೊಟ್ಟೆ ಮೇಲೆ ಹೊಡೆಯಲು ಹೊರಟಿರುವುದು ಸರಿಯಲ್ಲ ಎಂದು ಮನವಿ ಮಾಡಿದರು.

ಇನ್ನು ಇದೀಗ ಶಕ್ತಿ ಯೋಜನೆ ಸರ್ಕಾರದಿಂದ ಜಾರಿಯಾಗಿದ್ದು ನಿಗಮಗಳ ವಾಹನಗಳಲ್ಲಿ ಜನದಟ್ಟಣೆಯೂ ಶೇ.60ರಿಂದ 89ಕ್ಕೆ ಏರಿಕೆಯಾಗಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡಿದ್ದು, ಕೋವಿಡ್‌ -19 ನೆಪವೊಡ್ಡದೇ ನೌಕರರಿಗೆ ಬರಬೇಕಾಗಿರುವ ನ್ಯಾಯಯುತವಾದ ವೇತನ ಹೆಚ್ಚಳದ ಹಿಂಬಾಕಿ, ಗ್ರಾಚ್ಯುಟಿ ಮೊತ್ತ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೂಡಲೇ ಆದೇಶ ಮಾಡುವ ಮೂಲಕ ಕಲ್ಪಿಸಿಕೊಡಬೇಕು.

ಪ್ರಮುಖವಾಗಿ ಸಾರಿಗೆ ನಿಗಮಗಳಲ್ಲಿ ಪ್ರಸ್ತುತ ಶಕ್ತಿಯೋಜನೆಯಿಂದ ಆರ್ಥಿಕವಾಗಿ ಶಕ್ತಿ ಇದ್ದರೂ ನಿಗಮದಲ್ಲೇ ಇರುವ ಕೆಲವರು ಮುಖ್ಯಮಂತ್ರಿಗಳಿಗೆ ಮತ್ತು ಸಾರಿಗೆ ಸಚಿವರಿಗೆ ಸರಿಯಾದ ಮಾಹಿತಿ ಕೊಡದೆ ಈ ನಮಗೆ ಬರಬೇಕಿರುವ ಸೌಲಭ್ಯಗಳಿಗೆ ಪಂಗನಾಮ ಹಾಕುವ ದುರಾಲೋಚನೆಗಳನ್ನು ಮಾಡುತ್ತಿದ್ದಾರೆ ಎಂಬ ಅನುಮಾನವಿದೆ. ಹೀಗಾಗಿ ತಾವು ಈ ಬಗ್ಗೆ ಸೂಕ್ತ ಗಮನಹರಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಧರಣಿ ನಿರತರು ಎಂಡಿ ಅವರಿಗೆ ಮನವಿ ಮಾಡಿದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ