Breaking NewsNEWSನಮ್ಮರಾಜ್ಯ

KSRTC: ನೌಕರರಿಗೆ ಆಗುತ್ತಿರುವ ವೇತನ ತಾರತಮ್ಯ ಸರಿಪಡಿಸಲು ಮುಂದಾದ ನಾಲ್ಕೂ ನಿಗಮಗಳ ಎಂಡಿಗಳು – ನೌಕರರ ಮೊಗದಲ್ಲಿ ಸಂತಸ

ವಜಾಗೊಂಡವರು ನೊಂದುಕೊಳ್ಳುವುದು ಬೇಡ, 3-4 ವಾರವಷ್ಟೇ ಸಮಯ ಕೊಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಪ್ರಸ್ತುತ ಇರುವ ವ್ಯವಸ್ಥಾಪಕ ನಿರ್ದೇಶಕರು ನೌಕರರಿಗೆ ಆಗುತ್ತಿರುವ ತಾರತಮ್ಯತೆ, ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಆದರೆ, ಅವರ ನಿಲುವುಗಳನ್ನು ಕೆಲ ಭ್ರಷ್ಟ ಅಧಿಕಾರಿಗಳು ಸಹಿಸಿಕೊಳ್ಳಲು ಆಗದೆ ನಿಗಮದಲ್ಲಿರುವ ಕೆಲ ನಿಯಮಗಳು ಅಡ್ಡಿಯಾಗುತ್ತವೆ ಎಂಬ ಸಬೂಬು ಹೇಳಿ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಇಲ್ಲ ಯಾವ ನಿಯಮಗಳು ಒಳ್ಳೆಯದನ್ನು ಮಾಡುವುದಕ್ಕೇ ರೂಪಿತವಾಗಿರುವುದು, ವೇತನ ತಾರತಮ್ಯತೆ ನಿವಾರಣೆ ಆಗಲೇ ಬೇಕು ಎಂಬುದನ್ನು ಬೆಂಬಲಿಸಲು ಪ್ರತಿಯೊಬ್ಬ ಅಧಿಕಾರಿಯೂ ಮುಂದಾಗ ಬೇಕು ಎಂದು ಸಲಹೆ ನೀಡಿದರೆ ಆ ಸಲಹೆ ನೀಡಿದ ಅಧಿಕಾರಿಯನ್ನೇ ರಜೆ ಮೇಲೆ ಕಳಿಸುವ ಪ್ರಯತ್ನವನ್ನು ಮಾಡಿತ್ತಿದ್ದಾರೆ ಕೆಲ ಅಧಿಕಾರಿಗಳು ಎಂಬ ಮಾತುಗಳು ನೌಕರರ ಮೊಗಶಾಲೆಯಲ್ಲಿ ಹರಿದಾಡುತ್ತಿವೆ.

ಇನ್ನು ಬಿಎಂಟಿಸಿ ಎಂಡಿ ಜಿ.ಸತ್ಯವತಿ ಅವರು ಅಧಿಕಾರಿಗಳಿಂದ ವೇತನ ತಾರತಮ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು,  ನೌಕರರಿಗೆ ಏಕೆ ಈ ರೀತಿ ಅನ್ಯಾಯವಾಗುತ್ತಿದೆ ಎಂದು  ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳು ನಮ್ಮ ನಿಗಮದಲ್ಲಿ ಹಿಂದಿನಿಂದಲೂ ಹೀಗೆ ಇರುವುದು ಅನ್ಯಾಯವೇನು ಆಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಎಂಡಿ ಸತ್ಯವತಿ ಅವರು ನೌಕರರಿಗೆ ಸರಿ ಸಮಾನ ವೇತನ ನೀಡಬೇಕು. ಅಂದರೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂಬುವುದು ಕಾನೂನ ಬದ್ಧವಾಗಿದೆ. ಆದರೆ, ಈ ರೀತಿ ತಾರತಮ್ಯತೆ ಎಸಗುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಸಾರಿಗೆಯ ನೌಕರರಿಗೆ 2020ರ ಜವರಿಯಿಂದ ಆಗಬೇಕಿರುವ ಅಗ್ರಿಮೆಂಟ್‌ ಮೂಲಕವೇ ವೇತನ ಹೆಚ್ಚಳ ಮಾಡುವುದಾದರೆ ಶೇ.25 ರಷ್ಟು ಹೆಚ್ಚಳ ಮಾಡಬೇಕು. ಕಾರಣ ನೌಕರರು ಸಂಸ್ಥೆಯ ಅಡಿಪಾಯ, ಅವರನ್ನು ಖುಷಿಯಾಗಿ ಇಟ್ಟಷ್ಟು ಸಂಸ್ಥೆಗೆ ಲಾಭ ಹೆಚ್ಚಾಗಲಿ ಎಂದು ಅಭಿಪ್ರಾಯಪಟ್ಟಿದ್ದು, ಅದು ಆಗಲ್ಲ ಅನ್ನೋದಾದರೆ ಆ ಎಲ್ಲವನ್ನು ಬಿಟ್ಟು ವೇತನ ಆಯೋಗದಂತೆ ವೇತನ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂಬ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಕೂಡ ಸತ್ಯವತಿ ಅವರು ಒತ್ತಾಯ ಮಾಡಿರುವುದನ್ನು ಬೆಂಬಲಿಸಿದ್ದು, ಅವರು ಹೇಳಿದಂತೆ ಆದರೆ ನೌಕರರು ಸಮಾಜದಲ್ಲಿ ತಕ್ಕಮಟ್ಟಿಗಾದರೂ ಜೀವನ ಸಾಗಿಸುವುದಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ.

ಇವರಷ್ಟೇ ಅಲ್ಲದೆ, ಕೆಕೆಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎನ್‌. ಭರತ್‌ ಅವರು ಕೂಡ ಈ ಹೇಳಿಕೆಯನ್ನೇ ಬೆಂಬಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಇದನ್ನು ಸಹಿಸಿಕೊಳ್ಳಲು ಆಗದ ಕೆಲ ಅಧಿಕಾರಿಗಳು ಮತ್ತು ನೌಕರರ ಹಿತ ಕಾಯುತ್ತೇವೆ ಎಂದು ಸಂಘಟನೆ ಮಾಡಿಕೊಂಡಿರುವ ಕೆಲ ಸಂಘಟನೆಗಳ ಮುಖಂಡರು ಇದು ಸಾಧ್ಯವಿಲ್ಲ ಹೀಗಾದರೆ ಸಂಸ್ಥೆಗಳು ಲಾಸ್‌ನಲ್ಲಿ ನಡೆಯಲಿವೆ, ಅಲ್ಲದೆ ಈ ರೀತಿ ಸರಿ ಸಮಾನ ವೇತನ ಕೊಟ್ಟರೆ ನೌಕರರನ್ನು ನಿಯಂತ್ರಿಸಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.

ಅದು ಏನಾದರೂ ಸರಿಯೆ ನೌಕರರಿಗೆ ಒಳ್ಳೆ ವೇತನಕೊಡಬೇಕು, ನಿಗಮಗಳಲ್ಲಿ ಇರುವಂತೆ ವೇತನ ಬಡ್ತಿ ಇತರ ಸೌಲಭ್ಯಗಳನ್ನು ನೀಡಬೇಕು ಎಂಬ ಒತ್ತಾಯವನ್ನು ಸರ್ಕಾರಕ್ಕೆ ಮತ್ತು ಸಾರಿಗೆ ಸಚಿವರಿಗೆ ಈ ನಾಲ್ಕೂ ನಿಗಮಗಳ ಎಂಡಿಗಳು ಮಾಡುತ್ತಿದ್ದಾರೆ. ಹೀಗಾಗಿ ಆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈ ತಿಂಗಳ ಕೊನೆಯ ವರೆಗೆ ಕಾಲವಕಾಶ ಕೊಡಿ ಎಂದು ಸಚಿವ ಶ್ರೀರಾಮುಲು ಅವರು ಎಂಡಿಗಳನ್ನು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆ ಪ್ರಸ್ತುತ ನಾಲ್ಕೂ ನಿಗಮಗಳಲ್ಲಿ ಇರುವ ಎಂಡಿಗಳು ನೌಕರರಿಗೆ ವೇತನ ತಾರತಮ್ಯತೆ, ಕಿರುಕುಳಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿರುವುದು ನೌಕರರ ಮೊಗದಲ್ಲಿ ಸಂತಸ ಹೆಚ್ಚಿಸುತ್ತಿದೆ.

ಇನ್ನು ನೌಕರರು ವೇತನ ಸಾಲುತ್ತಿಲ್ಲ, ನಮ್ಮನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂಬ ಭಯವನ್ನು ಬಿಟ್ಟು ಇನ್ನು ಕೆಲವೇ ಕೆಲವು ದಿನಗಳು ಇಲ್ಲ ತಿಂಗಳುಗಳನ್ನಷ್ಟೇ ಕಾಯಿರಿ ಎಲ್ಲವು ಸರಿಹೋಗುತ್ತದೆ ಎಂಬ ಭರವಸೆಯನ್ನು ಈ ಅಧಿಕಾರಿಗಳು ನೌಕರರ ಸಂಘಟನೆಗಳ ಮುಖಂಡರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ