Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಇನ್ನೂ 3 ಕಿಮೀ ಇರುವಾಗಲೇ ಸ್ಟೇಜ್‌ ಕ್ಲೋಸ್‌ ಮಾಡಿ ಕಂಡಕ್ಟರ್‌ಗೆ ಮೆಮೋ ಕೊಟ್ಟ ತನಿಖಾಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ತನಿಖಾಧಿಕಾರಿಗಳು ನಿರ್ವಾಹಕರು ಮಾಡದ ತಪ್ಪಿಗೂ ಮೆಮೋ ಕೊಡುವುದು ದಂಡ ವಿಧಿಸುವುದು ಮಾಡುತ್ತಾರೆ ಎಂದರೆ ಇಂಥ ಅಧಿಕಾರಿಗಳ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಮೂಡದೆ ಇರದು.

ಭಾನುವಾರ ಫೆ.4ರಂದು ಹೊಸೂರು -ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಕೆಎ 42 ಎಫ್‌ -1640 ಆನೇಕಲ್‌ ಘಟಕ ರಾಮನಗರ ವಿಭಾಗದ ಬಸ್‌ಗೆ ಹತ್ತಿದ ತನಿಖಾಧಿಕಾರಿಗಳು ತಮಗೆ ಇಷ್ಟ ಬಂದರೀತಿಯಲ್ಲಿ ಸಂಸ್ಥೆಯ ನಿಯಮ ಮೀರಿ ನಡೆದುಕೊಂಡಿದ್ದು, ಈ ಬಗ್ಗೆ ನಿರ್ವಾಹಕರು ಕೇಳುತ್ತಿದ್ದರೂ ಸಮಂಜಸವಾದ ಉತ್ತರ ನೀಡದೆ ಉದ್ಧಟತನದಿಂದ ವರ್ತಿಸಿದ್ದಾರೆ.

ಹೊಸೂರಿನಿಂದ ಇದೇ ಬಸ್‌ನಲ್ಲಿ ಪ್ರಯಾಣ ಬೆಳೆಸಿದ ಇಬ್ಬರು ಮಹಿಳೆಯರು ಅತ್ತಿಬೆಲೆ ನಿಲ್ದಾಣದ ವರೆಗೂ ಅಂದರೆ ತಲಾ 10 ರೂ.ಗಳಂತೆ ಟಿಕೆಟ್‌ ಪಡೆದುಕೊಂಡಿದ್ದಾರೆ. ಆ ಬಳಿಕ ಅಂದರೆ ಅತ್ತಿಬೆಲೆಯಿಂದ ಬೆಂಗಳೂರಿಗೆ ಬರುವುದಕ್ಕೆ ಈ ಇಬ್ಬರು ಮಹಿಳೆಯರಿಗೆ ತಲಾ 50 ರೂ. ಮೌಲ್ಯದ ಎರಡು ಉಚಿತ ಟಿಕೆಟ್‌ಗಳನ್ನು ವಿತರಸಿಬೇಕು.

ನಿಗಮದ ನಿಯಮದ ಪ್ರಕಾರ 10 ಕಿಮೀ ಅಂತರ್‌ ರಾಜ್ಯದೊಳಗೆ ಕಾರ್ಯಾಚರಿಸುವ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಅಂದರೆ ಹೊಸೂರಿನಿಂದ ಅತ್ತಿಬೆಲೆ ವರೆಗೆ ಹಣ ಪಡೆದು ಟಿಕೆಟ್‌ ಕೊಡಬೇಕು. ಬಳಿಕ ಅತ್ತಿಬೆಲೆಯಿಂದ ಬೆಂಗಳೂರಿಗೆ ಇದೇ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಮಾಡಿಕೊಡಲಾಗಿದೆ.

ಅದರಂತೆ ನಿರ್ವಾಹಕ ಶ್ರೀನಿವಾಸ್‌ ಅವರು ಹೊಸೂರಿನಿಂದ ಅತ್ತಿಬೆಲೆ ವರೆಗೆ ತಲಾ 10 ರೂ.ಗಳ ಎರಡು ಟಿಕೆಟ್‌ ನೀಡಿ ಹಣ ಪಡೆದಿದ್ದಾರೆ. ಆ ಬಳಿಕ ಅತ್ತಿಬೆಲೆಯಿಂದ ಬೆಂಗಳೂರಿಗೆ ಪ್ರಯಾಣ ದರ 50 ರೂ.ಗಳ ಎರಡು ಉಚಿತ ಟಿಕೆಟ್‌ ವಿತರಿಸಬೇಕು. ಆದರೆ, ನಿರ್ವಹಾಕರು ಟಿಕೆಟ್‌ ವಿತರಿಸುವುದಕ್ಕೂ ಮುನ್ನವೇ ತನಿಖಾಧಿಕಾರಿಗಳಾದ ಸತೀಶ್‌ ಕುಮಾರ್‌ ಮತ್ತು ಶಿವಣ್ಣ ಅವರು ಮಾರ್ಗ ಮಧ್ಯೆ ಬಸ್‌ ಹತ್ತಿ ಇಟಿಎಂ ಯಂತ್ರ ಕಸಿದುಕೊಂಡು ಹೆಬ್ಬಗೋಡಿ ಎಲೆಕ್ಟ್ರಾನಿಕ್‌ ಸಿಟಿ ಸ್ಟೇಜ್‌ಗೆ ಇನ್ನೂ 3 ಕಿಮೀ ದೂರ ಇರುವಾಗಲೇ ಈ ತನಿಕಾಧಿಕಾರಿಗಳು ಸ್ಟೇಜ್‌ ಕ್ಲೋಸ್‌ ಮಾಡಿದ್ದಾರೆ.

ಆ ಬಳಿಕ ಈ ಇಬ್ಬರು ಮಹಿಳೆಯರಿಗೆ ಹೊಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದು ಇವರಿಗೆ ತಲಾ 60 ರೂ.ಗಳಂತೆ 120 ರೂ.ಗಳ ಟಿಕೆಟ್‌ ನೀಡಿಲ್ಲ ಎಂದು ಮೆಮೋ ಕೊಟ್ಟಿದ್ದಾರೆ. ಆದರೆ, ಮಹಿಳೆಯರಿಗೆ ಅತ್ತಿಬೆಲೆ ವರೆಗೆ ಟಿಕೆಟ್‌ ಕೊಟ್ಟಿದ್ದು ಆ ಹಣವನ್ನು ಪಡೆದಿದ್ದಾರೆ.

ಇನ್ನು ಅತ್ತಿಬೆಲೆಯಿಂದ ಬೆಂಗಳೂರಿಗೆ ಉಚಿತವಾಗಿ 50 ರೂ. ಮೌಲ್ಯದ ಟಿಕೆಟ್‌ ವಿತರಿಸಬೇಕಿತ್ತು ಅದಕ್ಕೆ ತನಿಖಾಧಿಕಾರಿಗಳು ಅವಕಾಶ ನೀಡದೆ ಇಟಿಎಂ ಯಂತ್ರ ಕಸಿದುಕೊಂಡು ಊದ್ಧಟತನದಿಂದ ನಡೆದುಕೊಳ್ಳುವ ಮೂಲಕ ಈ ಅಧಿಕಾರಿಗಳು ಸಂಸ್ಥೆಯ ನಿಯಮವನ್ನೇ ಮೀರಿ ವರ್ತಿಸಿದ್ದಾರೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ.

ಇಲ್ಲಿ ಅಮಾಯಕ ನಿರ್ವಾಹಕರನ್ನು ಏಕೆ ಈರೀತಿ ಟಾರ್ಗೆಟ್‌ ಮಾಡುತ್ತಿದ್ದಾರೋ ಗೊತ್ತಿಲ್ಲ. ಮಾಡದ ತಪ್ಪಿಗೆ ನಿರ್ವಾಹಕರಿಗೆ ಮೆಮೋ ಕೊಡುವ ಮತ್ತು ದಂಡ ವಿಧಿಸುವ ಅಧಿಕಾರವನ್ನು ಕೊಟ್ಟವರು ಯಾರು? ಇಂಥ ಅಧಿಕಾರಿಗಳ ನಡೆಯನ್ನು ಕೇಳುವವರಿಲ್ಲವೇ? ಏಕೆ ಈ ರೀತಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಾರೆ?

ಒಂದು ವೇಳೆ ಈ ರೀತಿಯ ತನಿಖಾಧಿಕಾರಿಗಳ ನಡೆಯನ್ನು ಪ್ರಶ್ನಿಸಿದರೆ ಅಂಥ ನಿರ್ವಾಹಕರನ್ನು ಅಮಾನತು ಮಾಡುತ್ತಾರೆ. ಅದಕ್ಕೆ ಕಾರಣ ನೀಡುವುದು ನೀವು ಮೇಲಧಿಕಾರಿಗಳ ಜತೆ ಅಸಭ್ಯ ವರ್ತನೆ ತೋರಿದ್ದೀರಿ ಎಂದು. ಪ್ರಶ್ನಿಸದಿದ್ದರೆ ಅಮಾಯಕರು ಮಾಡದ ತಪ್ಪಿಗೆ ಬಲಿಯಾಗುತ್ತಾರೆ. ಇದಕ್ಕೆ ಮೇಲಧಿಕಾರಿಗಳು ಗಮನನೀಡಿ ಕಡಿವಾಣ ಹಾಕಬೇಕು ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.

ಇನ್ನು ಶೀನಿವಾಸ್‌ ಅವರಿಗೆ ಶೀಘ್ರದಲ್ಲೇ ಮುಂಬಡ್ತಿ ಸಿಗುವ ಅವಕಾಶವಿದೆ. ಹೀಗಾಗಿ ಈ ರೀತಿ ಟಾರ್ಗೆಟ್‌ ಮಾಡಲಾಗಿತ್ತಿದೆಯೇ ಎಂಬ ಅನುಮಾನವೂ ಕೂಡ ಘಟಕದ ನೌಕರರಲ್ಲಿ ಮೂಡಿದೆ. ಒಟ್ಟಾರೆ ನಿರ್ವಹಾಕರು ಮಾಡದ ತಪ್ಪಿಗೆ ಇಂಥ ಅಧಿಕಾರಿಗಳಿಂದ ಶಿಕ್ಷೆ ಅನುಭವಿಸುವುದು ಮಾತ್ರ ತಪ್ಪಿಲ್ಲ. ಏಕೆಂದರೆ ಈ ಅಧಿಕಾರಿಗಳು ಕೊಟ್ಟ ಮೆಮೋದ ಆಧಾರದ ಮೇಲೆಯೆ ಮೇಲಧಿಕಾರಿಗಳು ಕ್ರಮ ಜರುಗಿಸುವುದು.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ