
ಬೆಂಗಳೂರು: ಸತ್ಯವಾಗಿಯೂ ನನ್ನ 21 ವರ್ಷದ ಅನುಭವದಲ್ಲಿ ಕೆಎಸ್ಆರ್ಟಿಸಿ ಅಂತಹ ನಿಯಮಗಳು ಯಾವ ಸಂವಿಧಾನದಲ್ಲೂ ಇಲ್ಲ. ಅಂತಹ ಕಠಿಣ ಕಾನೂನುಗಳು ನಮ್ಮ ಕೆಎಸ್ಆರ್ಟಿಸಿ ಆಡಳಿತ ವ್ಯವಸ್ಥೆಯಲ್ಲಿ ಇವೆ ಎಂದು ನೊಂದ ಸಂಸ್ಥೆಯ ನೌಕರರು ಭಾರಿ ಖಿನ್ನತೆಯಿಂದ ಹೇಳಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಕೊಲೆ ಆರೋಪಿಗಳಿಗೂ ಸಹ ಇಂತಹ ಕಠಿಣ ಕಾನೂನುಗಳು ನಮ್ಮ ಸಂವಿಧಾನದ ಅಡಿಯಲ್ಲಿ ಇಲ್ಲ, ಅವರಿಗೂ ಸಹ ಗೌರವವಿದೆ. ಆದರೆ ನಮ್ಮ ಕೆಎಸ್ಆರ್ಟಿಸಿ ಆಡಳಿತ ವ್ಯವಸ್ಥೆಯಲ್ಲಿ ನೌಕರರನ್ನು ಭೂಮಿ ಮಟ್ಟಕ್ಕೆ ತುಳಿಯುವಂತಹ ಕಠಿಣ ಕಾನೂನುಗಳಿವೆ.
ಇನ್ನು ಅಧಿಕಾರಿ ವರ್ಗದವರು ಏನೇ ತಪ್ಪು ಮಾಡಿದರು ಅವರಿಗೆ ರಾಜಕಾರಣಿಗಳು ಸೇರಿದಂತೆ ಯಾರದೋ ಕೃಪಾಕಟಾಕ್ಷ ಇದ್ದೇ ಇರುತ್ತದೆ. ಆದರೆ, ಸಂಸ್ಥೆಗೆ ಆದಾಯದ ಮೂಲವಾಗಿರುವ ಚಾಲಕರು- ನಿರ್ವಾಹಕರಿಗೆ ಬೆನ್ನುಲುಬಾಗಿ ನಿಲ್ಲಬೇಕಾದ ಅಧಿಕಾರಿಗಳೇ ಕಾಲ್ಕಸಕ್ಕಿಂತಲೂ ಕೀಳಾಗಿ ನಡೆಸಿಕೊಂಡರೆ ನಾವು ಯಾರ ಬಳಿ ಹೋಗಬೇಕು?
ಇನ್ನು ಡ್ಯೂಟಿ ಮೇಲೆ ಚಾಲಕ ನಿರ್ವಾಹಕರಿಗೆ ಏನಾದರೂ ಆದರೆ ಯಾರು ಹೊಣೆ ಇರುತ್ತಾರೆ, ಆ ದೇವರನ್ನು ಬಿಟ್ಟರೆ. ಬೇರೆ ಯಾರು ಸಹಾಯಕ ಬರುವುದಿಲ್ಲ. ಅದರಲ್ಲೂ ಆಡಳಿತ ಅಧಿಕಾರಿಗಳು ಬಳಸುವ ಭಾಷೆ ನಮ್ಮನ್ನು ನೋಡುವ ದೃಷ್ಟಿಕೋನ ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷೀಕರಿಸತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಸಹ ಈ ಕೆಎಸ್ಆರ್ಟಿಸಿನಲ್ಲಿ ತುಕ್ಕು ಹಿಡಿದಿರುವಂತಹ ಕಠಿಣ ಕಾನೂನುಗಳು ಜೀವಂತವಾಗಿ ನೌಕರರ ಸುಡುತ್ತಿರುವುದು ಮಾತ್ರ ವ್ಯವಸ್ಥೆಯನ್ನು ಅಣಕಿಸುತ್ತಿದೆ. ಇಂಥ ವ್ಯವಸ್ಥೆಯನ್ನು ನಾವು ಇಲ್ಲಿ ಕಾಣಬಹುದಾಗಿದೆ.
ಕರ್ತವ್ಯದಲ್ಲಿ ಅನಿರೀಕ್ಷಿತವಾಗಿ ಘಟಿಸುವ ಘಟನೆಗಳಿಗೆ ಚಾಲಕ ನಿರ್ವಾಹಕರೇ ಕಾರಣರೆಂಬಂತೆ ಬಿಂಬಿಸಿ ನಮ್ಮ ಮೇಲೆ ಇಲ್ಲ ಸಲ್ಲದ ಕಾನೂನುಗಳನ್ನು ಹೇಳಿ ಇಂಕ್ರಿಮೆಂಟ್ ಅಥವಾ ಇತರೆ ಇನ್ಯಾವುದೇ ಸೌಲಭ್ಯಗಳನ್ನು ಕೊಡದೆ ಬದಲಿಗೆ ಶಿಕ್ಷೆಗಳನ್ನು ವಿಧಿಸುತ್ತಾರೆ.
ಮಾನವ ಸಂಪನ್ಮೂಲಗಳಿಂದ ನಡೆಯಬಹುದಾದಂತಹ ಈ ಕೆಲಸಕ್ಕೆ ನಾವು ಸಹ ಸಂಬಂಧಿಕರು ಅಣ್ಣತಮ್ಮಂದಿರ ಸಾಮಾಜಿಕ ಸಂಬಂಧವನ್ನು ನಾವು ಹೊಂದಿರುತ್ತೇವೆ. ಹೀಗೇನೇ ಜೀವನ ನಡೆಸುವ ಸಂದರ್ಭದಲ್ಲಿ ಕಷ್ಟ ಸುಖಗಳಿಗೆ ಹೋಗಲೇಬೇಕಾಗುತ್ತದೆ. ಸಾವು ನೋವುಗಳಲ್ಲಿ ಭಾಗವಹಿಸಬೇಕಾಗುತ್ತದೆ. ಇಂತಹ ಸಂದರ್ಭಗಳಿಗೂ ನಮಗೆ ಅನ್ವಯಿಸಬಹುದಾದಂತ ರಜೆ ಪಡೆಯಲು ಕೂಡ ನಾವು ಅಶಕ್ತರಾಗಿದ್ದು ಅಧಿಕಾರಿಗಳ ಕಾಲಿಗೆ ಬಿದ್ದು ಕಾಡಿಬೇಡಿ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅದನ್ನು ನಾವು ಮಾಡಿಲ್ಲ ಎಂದರೆ ಅಧಿಕಾರಿಗಳು ಗೈರು ಹಾಜರಿ ಎಂಬ ಪ್ರಕರಣವನ್ನು ದಾಖಲಿಸಿ ಇಲ್ಲಸಲ್ಲದ ನೋವುಗಳನ್ನು ಕೊಡುತ್ತಾರೆ. ಹೃದಯ ಸಂಬಂಧಿ ಇತರೆ ಕಾಯಿಲೆಗಳಿಗೆ ಖುದ್ದು ನಾವೇ ನಿರ್ವಹಿಸಬೇಕಾದಂತಹ ಕೆಲವು ಸಮಸ್ಯೆಗಳಿಗ ನಿವಾರಣೆಗಾಗಿ ನಾವು ರಜೆ ಕೇಳಿದರೆ ಇಲ್ಲಸಲ್ಲದ ನೆಪವನ್ನು ಹೇಳಿ ಕಾನೂನುಗಳನ್ನು ಮುಂದೆ ತಂದು ನಮಗೆ ಗೈರು ಹಾಜರಿ ವರದಿ ನೀಡುತ್ತಾರೆ.
ಇನ್ನು ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲಾತಿ ವೈದ್ಯಕೀಯ ದೃಢೀಕರಣ ಪತ್ರಗಳನ್ನು ಕೊಟ್ಟರೂ ಸಹ “ನೀವು ನೀಡಿದ ಉತ್ತರವು ಸಮಂಜಸವಾಗಿರುವುದಿಲ್ಲವೆಂದು ದಂಡವನ್ನು ಹಾಕುವ ಜತೆಗೆ ಇಂಕ್ರಿಮೆಂಟುಗಳನ್ನು ತೆಗೆಯುತ್ತಾರೆ. ಯಾವ ವಕೀಲಿ ಗಿರಿ ಓದಿರ್ತಕಂತ ಮಹಾನೀಯ ಸಿ ಅಂಡ್ ಆರ್ ರೂಲ್ಸ್ ಗಳನ್ನು ಮಾಡಿರುತ್ತಾರೋ ಆ ದೇವರಿಗೆ ಬಲ್ಲ…
ಅದರಲ್ಲೂ ಕೇಂದ್ರ ಕಚೇರಿ ಮತ್ತು ವಿಭಾಗಿಯ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗದವರಂತೂ ಸಹ ನಮ್ಮ ಚಾಲಕ ನಿರ್ವಾಹಕರನ್ನು ಕಾಲಡಿಯ ಕಸಕಿಂತಲೂ ಕೀಳಾಗಿ ನೋಡುತ್ತಾರೆ. ಅದರಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗದವರಂತೂ ಮುಕ್ಕಾಲು ಭಾಗ ಅನುಕಂಪದ ಆಧಾರದಲ್ಲಿ ಕೆಲಸ ಪಡೆದಿರುವಂತಹ ನಮ್ಮ ಸಹೋದರ ಮಿತ್ರರಾಗಿದ್ದು ಅವರ ನಡೆ ನುಡಿಗಳನ್ನು ಗಮನಿಸಿದರೆ ಖಂಡಿತವಾಗಿಯೂ ಬಹಳ ನೋವಾಗುತ್ತದೆ.
ನಾನಂತೂ ಕುದ್ದು ನೋಡಿ ಅನುಭವಿಸಿದ್ದೇನೆ. ಯಾವ ಶತ್ರುಗಳಿಗೂ ಸಹ ಇಂತಹ ದುಸ್ಥಿತಿ ಬರಬಾರದು! ಇದರ ಬಗ್ಗೆ ಒಂದು ದೊಡ್ಡ ಕಥೆಯನ್ನೇ ನಾನು ಬರೆಯಲು ಸಿದ್ಧನಿದ್ದೇನೆ..ಅಷ್ಟೊಂದು ನೋವನ್ನ ಅನುಭವಿಸಿದ್ದೇನೆ ಈ ಸಂಸ್ಥೆಗೆ ಸೇರಿದ ನಂತರ ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ಕರ್ತವ್ಯ ನಿರ್ವಹಿಸಿಕೊಂಡು ಮುಂದುವರಿಯುತ್ತಿದ್ದೇನೆ ನನ್ನ ಸಹೋದ್ಯೋಗಿ ಬಂಧುಗಳೇ ಇದಕ್ಕೆ ಕಾಲವೇ ಉತ್ತರಿಸಬೇಕು ಎಂದು ನೌಕರರೊಬ್ಬರು ನೊಂದು ಬರೆದಿದ್ದಾರೆ.
ನಿಜ ಅಣ್ಣ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಈ ನಮ್ಮ ಸಾರಿಗೆ ಇಲಾಖೆ ಅಧಿಕಾರಿಗಳು ಕೊಡುವ ಹಿಂಸೆಗೆ ಅದೆಷ್ಟೋ ಕಾರ್ಮಿಕರು ಕೆಲಸವನ್ನೇ ಕಳೆದುಕೊಂಡಿದ್ದಾರೆ ಆಫೀಸ್ ನಲ್ಲಿ ಕುಳಿತು ಕೆಲಸ ಮಾಡುವವರಿಗೆ ಒಂದು ಕಾನೂನು ರಸ್ತೆಯಲ್ಲಿ ಶ್ರಮ ಪಟ್ಟು ಸಾರ್ವಜನಿಕರ ಜೊತೆ ಕೆಲಸ ಮಾಡುವವರಿಗೆ ಒಂದು ಕಾನೂನು ಇನ್ನು ಯಾವುದೋ ಒಂದು ಸಣ್ಣ ತಪ್ಪು ಸಿಕ್ಕರೂ ಮುಗಿಯಿತು ಆ ನಮ್ಮ ಕಾರ್ಮಿಕ ಇನ್ಯಾವತ್ತೂ ಜೀವನದಲ್ಲಿ ಈ ಇಲಾಖೆಗೆ ಕೆಲಸಕ್ಕೆ ಬಂದಿರಬಾರದು ಆ ರೀತಿ ನಡೆದುಕೊಳ್ಳುತ್ತಾರೆ ದರ್ಪದ ಮಾತುಗಳು ದೌರ್ಜನ್ಯ ಏಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಲ್ಲಿ ನೋಡಿದರೂ ಬರೀ ಲಂಚ ನಮ್ಮ ಹಕ್ಕಿನ ರಜೆ ಪಡೆಯಬೇಕೆಂದರು ಲಂಚ ಕೊಡಲೇ ಬೇಕು ಯಾರು ಸತ್ತರು ಕೊನೆಗೆ ತಂದೆ ತಾಯಿ ಹೆಂಡತಿ ಮಕ್ಕಳು ಸತ್ತರು ಇನ್ನು ಕೆಲಸಮಾಡು ಎನ್ನುತ್ತಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಸಾರ್ ನಾನು ಸಾಯಬೇಕು ಎಂದು ಹೊರಟಿರುವೆ ಎಂದರೆ ಇದು ಒಂದು ಟ್ರಿಪ್ ಡ್ಯೂಟಿ ಮಾಡಿ ಬಂದು ಸಾಯಿ ಎಂದು ಹೇಳುವಷ್ಟು ಕಠಿಣ ಮನಸ್ಥಿತಿ ಈ ನಮ್ಮ ಅಧಿಕಾರಿಗಳಿಗೆ ಯಾವಾಗ ಇದೆಲ್ಲ ಬದಲಾಗುವುದೋ ನಾ ಹರಿಯೇ
ದಯವಿಟ್ಟು ಈ ಸಂಸ್ಥೆ ಯಲ್ಲಿ ಇರುವ ಕಾನೂನು ಕೈ ಪಿಡಿ ಯನ್ನು ಪ್ರತಿಯೊಬ್ಬ ನೌಕರರಿಗೂ ಕೊಡುವುದು ಬಹಳ ಉತ್ತಮವಾದ ಕೆಲಸ ಏಕೆಂದರೆ ಇವರುಗಳು ಇವರ ಅನುಕೂಲಕೇ ಮಾಡಿರುವ ಕಾನೂನುಗಳು ಸಂಪೂರ್ಣ ವಾಗಿ ತಿಳಿಯದೆ ಕಷ್ಟ ಪಟ್ಟು ದುಡಿದು ಇವರ ಬಾಯಿಗೆ ಹಾಕಿ ಖಾಲಿ ಕೈ ನಲ್ಲಿ ಮನೆಗೆಹೋಗೋ ಪರಿಸ್ಥಿತಿ ನಮ್ಮದಾಗಿದೆ. ಅಧಿಕಾರಿ ವರ್ಗದ ಶೋಷಣೆ ಬದಲಿಸುವುದಕೆ ನಮಗೂ ಕೂಡ ಕೆಲವು ನೇರವಾದ ರೈಟ್ಸ್ ಕೊಡಬೇಕು.
ಇದಕ್ಕೇನಾದ್ರೂ ಪರಿಹಾರ ಹುಡುಕೊ ಕೆಲಸ ಮಾಡಿ. ಮುಂದಿನ ದಿನ ಇನ್ನು ಕಠಿಣ ಪರಿಸ್ಥಿತಿ ಬರಬಹುದು. ಎಲ್ಲಾ ಸಾರಿಗೆ ನೌಕರರು ಕುಡ್ಲೆ ಎಚ್ಚೆತ್ತುಕೊಳ್ಳಿ. ಕೆಟ್ಟ ಕೆಟ್ಟ ಹವ್ಯಾಸ ಬಿಟ್ಟು ಒಳ್ಳೆೊಳೇ ತತ್ವ ಜ್ಞಾನ ಒಳ್ಳೆ ಸಮಾಜ ಸುಧಾರಕರ ಗಮನಕ್ಕೆ ತಂದು ನಿಮ್ಮ ನಿಮ್ಮ ಪರಿಸ್ಥಿತಿ ತಿಳಿಸಿ ಶುಭ ದಿನ.
ನಿಜ ಅಧಿಕಾರಿ ವರ್ಗ ಹಾಗೂ ಚಾಲಕ ನಿರ್ವಾಹಕರು ಎಲ್ಲಾ ವರ್ಗದ ಜನರಿಗೆ ಏಕರೂಪ ಕಾನೂನು ಜಾರಿ ಮಾಡಿ
ಒಂದು ತಪ್ಪಿಗೆ ಒಂದೇ ಶಿಕ್ಷೆ ವಿಧಿಸಿ
ನೋಡಿ, ಇಲ್ಲಿ ತಮ್ಮ ನೋವುಗಳನ್ನು ಹಂಚಿಕೊಂಡಿರುವ ಸಾರಿಗೆ ನೌಕರರ ಗೋಳುಗಳು ಖಂಡಿತ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿ ಹಿಡಿದ ಹಾಗೆ ಇದೆ, ಇದರಲ್ಲಿ ಯಾವದೇ ಉಥ್ಪ್ರಕ್ಷೆ ಇಲ್ಲ. ಈಗಿನ ಕಚೇರಿ ಸಿಬ್ಬಂದಿ ಹಾಗು ಅಧಿಕಾರಿಗಳು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಚಾಲನಾಸಿಬ್ಬಂದಿಯನ್ನು ತಮ್ಮದೇ ಸಂಸ್ಥೆಯ ನೌಕರರೆಂದು ಮನದಟ್ಟು ಮಾಡಿಕೊಂಡು ಅವರಿಗೆ ಗೌರವ ಕೊಡೋದನ್ನ ಕಲಿಬೇಕು. ಮೊದಲಿಂದಲೂ ನೂರಕ್ಕೊಬ್ಬರು ಇಂತಹ ಅಧಿಕಾರಿಗಳು ಇದ್ದರು ಈಗಲೂ ಇದ್ದಾರೆ, ಆದರೆ ಇವರ ಸಂಖ್ಯೆ ಜಾಸ್ತಿ ಆಗಬೇಕು. ಹಾಗಾದರೆ ಮಾತ್ರ ನೌಕರರು ಸಂತೋಷದಿಂದ ಕಾರ್ಯ ನಿರ್ವಹಿಸಲು ಸಾಧ್ಯ, ಈ ಬಗ್ಗೆ ಆಡಳಿತ ಮಂಡಳಿ ಹಾಗು ಸಚಿವರು ಗಮನ ಹರಿಸಬೇಕು
ಮಿತ್ರರೇ.
ಇದಕ್ಕೆಲ್ಲ ಕಾರಣ ಬೇರೆಯದೇ ಇದೇ..ಅನ್ಯಾಕೋಮಿನವರು ಅಧಿಕಾರಿಗಳು ಆದರೆ ಅಲ್ಲಿ ಇರೋ ಇನ್ನೊಂದು ಕೋಮಿನ ಅಧಿಕಾರಿಗಳ ವರ್ತನೆ ಹೀನಾಯವಾಗಿ ಇರುತ್ತದೆ ಅದೇ ಕೆಟ್ಟಕಾಲ ಅಂಥ ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ…ಉತ್ತಮ ಆಡಳಿತ ಕೊಡೋ ಸ್ವಭಾವ ಯಾರಲ್ಲೂ ಇರೋದಿಲ್ಲ…ದೇಶದ ಜಾತಿ ಒಂದೇ ಕೋಮಿನದ್ದು ಹಗ್ಬೇಕು.ದಬ್ಬಾಳಿಕೆ ನಿಲ್ಲುತ್ತದೆ..ಎಲ್ಲಿ ವರೆಗೆ ಸಹನೆ ಅನ್ನೋ ಆಯುಧನ ಬಿಸಾಡಿ…ಇಲ್ಲ ಆದ್ರೆ ನಿಯಂತ್ರಣಕ್ಕೆ ತರಲು ಸಾಧ್ಯ ಇಲ್ಲ.
ನೀವು ಹೇಳಿದ್ದು 100 ಕ್ಕೆ 200ರಷ್ಟು ಸತ್ಯವಾಗಿದೆ ಸರ್ ಕಾಡಿನಲ್ಲಿ ಬೇಟೆಯಾಡುವ ಪ್ರಾಣಿಗಳಿಂದ ಸಸ್ಯಹಾರಿ ಪ್ರಾಣಿಗಳು ಹೇಗೆ ಬದುಕುತ್ತವೆಯೋ ದೇವರ ರಕ್ಷೆ ಎಲ್ಲಿಯವರೆಗೆ ಈ ಪ್ರಾಣಿಗಳ ಮೇಲೆ ಇರುತ್ತದೆಯೋ ಹಾಗೆ ನಮ್ಮ ಚಾಲಕ ಚಾಲಕ ಕಂ ನಿರ್ವಾಹಕ ನಿರ್ವಾಹಕ ತಾಂತ್ರಿಕ ಸಿಬ್ಬಂದಿಗಳ ಮೇಲೆ ಆ ದೇವರ ರಕ್ಷೆ ಎಲ್ಲಿಯ ತನಕ ಇರುತ್ತದೆಯೋ ಅಲ್ಲಿಯವರೆಗೆ ದೇವರ ಮೇಲೆ ನಂಬಿಕೆ ಭರವಸೆಯನ್ನು ಇಟ್ಟು ಸಾರಿಗೆ ಸಂಸ್ಥೆಯಲ್ಲಿ ಸಾರ್ವಜನಿಕರ ಸೇವೆಯನ್ನು ಮಾಡೋಣ ಸರ್ ಅಧಿಕಾರಿಗಳಿಗೂ ಆ ದೇವರು ಸದ್ದು ಬುದ್ಧಿಯನ್ನು ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ 🙏🙏🙏