NEWSದೇಶ-ವಿದೇಶನಮ್ಮಜಿಲ್ಲೆ

KSRTC ಅಧಿಕಾರಿಗಳ ಕಳ್ಳಾಟ: ಕರ್ನಾಟಕ – ಆಂಧ್ರ ನಡುವೆ ಸಂಸ್ಥೆ ಬಸ್‌ಗಳ ಬದಲಿಗೆ ಖಾಸಗಿ ಬಸ್‌ಗಳ ದರ್ಬಾರ್‌!

ತುಂಬುತ್ತಿದೆ ಅಧಿಕಾರಿಗಳ ಜೇಬು l ಬರಿದಾಗುತ್ತಿದೆ ಸಂಸ್ಥೆಯ ಖಜಾನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರಿನಿಂದ ಆಂಧ್ರಪ್ರದೇಶದ ಕಡಪಾ ಹಾಗೂ ತಿರುಪತಿ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ವಿರಳವಾಗಿರುವುದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆಂಧ್ರ ಪ್ರದೇಶದ ಕಡಪಾದಲ್ಲಿ ಹಾಗೂ ತಿರುಪತಿಯಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಶ್ರೀಕ್ಷೇತ್ರ ರಾಯಚೂತಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಲು ಜನರಿಗೆ ಕಡಪಾ ಅಥವಾ ತಿರುಪತಿ ಬಸ್ ಅವಶ್ಯಕತೆ ಇದೆ. ಜನರ ಅನುಕೂಲಕ್ಕೆ ತಕ್ಕಂತೆ KSRTC ಬಸ್‌ಗಳನ್ನು ಬಿಡದಿರುವುದರಿಂದ ಕಡಪಾ, ತಿರುಪತಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಸಾರ್ವಜನಿಕರಿಗೆ ನಿತ್ಯ ಸಮಸ್ಯೆಯಾಗಿದೆ.

ಹೀಗಾಗಿ ಪ್ರತಿನಿತ್ಯ ಪರದಾಡುತ್ತಿರುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅವಶ್ಯಕತೆಗೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಹಾಗೂ ಗಡಿಯಿಂದಾಚೆಗೆ ತೆರಳುವ ಕನ್ನಡಿಗರಿಗೆ ಉತ್ತಮ ಸೇವೆ ಒದಗಿಸಲು ಸರ್ಕಾರ ಬಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖಾಸಗಿ ಬಸ್‌ಗಳ ದರ್ಬರ್‌: ಕೋಲಾರ ಜಿಲ್ಲೆಯಿಂದ ಆಂಧ್ರದ ಮದನಪಲ್ಲಿ ಪುಂಗನೂರು, ರಾಯಚೂತಿ, ಚಂಬಕೂರು ರಾಮಸಮುದ್ರಂ ನಡುವೆ ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ಮಾರ್ಗಗಳನ್ನು ನಿಲ್ಲಿಸುವಲ್ಲಿ ಮದನಪಲ್ಲಿಯ ವೈಎಸ್‌ಆರ್‌ಸಿಪಿ ಶಾಸಕ ಮಹಮದ್ ನವಾಜ್ ಬಾಷಾ ಅವರು ಯಶಸ್ವಿಯಾಗಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಮೇಲೆ ಸ್ಥಳೀಯ ಶಾಸಕರು, ಪ್ರಭಾವಿ ರಾಜಕಾರಣಿಗಳ ಮೂಲಕ ಒತ್ತಡ ಹೇರಿ ಮದನಪಲ್ಲಿ ಶಾಸಕ ಮಹಮದ್ ನವಾಜ್ ಬಾಷಾ ಮಾಲೀಕತ್ವದ ಬಸ್‌ಗಳ ಓಡಾಟವನ್ನು ಈ ಭಾಗದಲ್ಲಿ ಹೆಚ್ಚಿಸಿದ್ದು, KSRTC ಬಸ್‌ಗಳ ಓಡಾಟಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಈ ಮಾರ್ಗಗಳಲ್ಲಿ ನಿತ್ಯ ಓಡಾಡುವ ಸಾರ್ವಜನಿಕರು ಹೆಚ್ಚಿನ ದರಕೊಟ್ಟು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಖಾಸಗಿ ಬಸ್‌ ಮಾಲೀಕರ ಜತೆ ಕೈಜೋಡಿಸಿದ KSRTC ಅಧಿಕಾರಿಗಳು: ಕರ್ನಾಟಕ ಮತ್ತು ಆಂಧ್ರದ ಗಡಿಯಿಂದ, ಬೆಂಗಳೂರಿ-ಚಿಂತಾಮಣಿ – ಮದನಪಲ್ಲಿ – ರಾಯಚೋತಿ -ಕಡಪ ಮತ್ತು ಬೆಂಗಳೂರು – ಚಿಂತಾಮಣಿ ಮೂಲಕ ಮದನಪಲ್ಲಿಗೆ, ಬೆಂಗಳೂರು – ಯಲಹಂಕ – ಚಿಂತಾಮಣಿ- ಮದನಪಲ್ಲಿ ಪೈಲರ್ ತಿರುಪತಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡಬೇಕು.

ಆದರೆ, KSRTC ಬಸ್‌ಗಳು ತೀರಾ ಕಡಿಮೆ ಬಿಟ್ಟಿದ್ದು, ಅದೂ ಕೂಡ ನಿಯಮಿತ ಸೇವೆಗೆ ನಿತ್ಯ ಮತ್ತು ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಭಾರಿ ಬೇಡಿಕೆ ಇದೆ. ಆದರೆ, ಕೋಲರಾದ ವಿಭಾಗದ ಅಧಿಕಾರಿಗಳು ಖಾಸಗಿ ಬಸ್‌ ಮಾಲೀಕರ ಜತೆ ಕೈ ಜೋಡಿಸಿ KSRTC ಬಸ್‌ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಓಡಾಡುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಸಂಸ್ಥೆಗೆ ಅಧಿಕಾರಿಗಳು ಮಾಡುತ್ತಿರುವ ಮೋಸವಾಗಿದೆ.

ಇನ್ನದಾರು ಎಚ್ಚೆತ್ತುಕೊಂಡು KSRTC ಕೋಲಾರ ವಿಭಾಘದ ಅಧಿಕಾರಿಗಳು ಪ್ರತಿ ಅರ್ಧಗಂಟೆಗೆ ಒಂದು ksrtc ಬಸ್‌ಗಳ ಸೇವೆಯನ್ನು ಪ್ರತಿದಿನ ಮತ್ತು ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ಮುಂಜಾನೆ 5ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ ಸಂಸ್ಥೆಯ ಬಸ್‌ಗಳನ್ನು ಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಖಾಸಗಿ ಬಸ್ ಬಸ್‌ಗಳ ಧನದಾಹಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಇತ್ತ KSRTC ಬಸ್‌ಗಳು ಕಡಿಮೆ ಬಿಟ್ಟಿರುವುದರಿಂದ ಸಂಸ್ಥೆಗೆ ಬರಬೇಕಿರುವ ಆದಾಯದಲ್ಲೂ ಕುಂಟಿತವಾಗುತ್ತಿದೆ. ಹೆಚ್ಚು ಆದಾಯ ಬರುವ ಈ ಮಾರ್ಗಗಳನ್ನು ಖಾಸಗಿ ಬಸ್‌ ಮಾಲೀಕರಿಗೆ ಪರೋಕ್ಷವಾಗಿ ನಿಗಮದ ಅಧಿಕಾರಿಗಳು ಮಾರಿಕೊಂಡಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಸಾರಿಗೆ ಸಚಿವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಚಿಕ್ಕಬಳಾಪುರ ವಿಭಾಗ ಚಿಂತಾಮಣಿ ಮದನಪಲ್ಲಿ ಕಡಪ ಮಾರ್ಗವಾಗಿ ಮತ್ತು ಕರ್ನಾಟಕ ಮತ್ತು ಆಂಧ್ರ ಗಡಿಗಳಿಂದ ಅಂತರರಾಜ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬಸ್ ನಿರ್ವಾಹಕರಿಗೆ ಕಡಿವಾಣವಾಕಬೇಕಿದೆ. ಜತೆಗೆ KSRTC ಬಸ್‌ಗಳು ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗಿದ್ದು ನಂ.1 ಆದಾಯದವನ್ನು ಅಂತರರಾಜ್ಯ ಮಾರ್ಗಗಳು ಕೊಡುತ್ತಿರುವುದರಿಂದ ಈ ಬಗ್ಗೆ ಸಾರಿಗೆ ಸಚಿವರು ಮತ್ತು ಎಂಡಿ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್: 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ಘೋಷಣೆ ಅ.6ರಂದು ನಿವೃತ್ತ ನೌಕರರ ಸಭೆ: BMTC & KSRTC ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTC ತುಮಕೂರು: ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ... ಕರ್ನಾಟಕ - ಆಂಧ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಹೆಚ್ಚಿಸಿ: ಎರಡೂ ನಿಗಮಗಳ ಎಂಡಿಗಳಿಗೆ ಪ್ರಯಾಣಿಕರ ಒತ್ತಾಯ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ KSRTC ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಅನುಷ್ಠಾನ ಶೀಘ್ರ ಜಾರಿಗೊಳಿಸಿ: ಕೇಂದ್ರದ ರಾಜ್ಯ ಕಾರ್ಮಿಕ ಸಚಿವರಿಗೆ ಸಂಸದ... ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ! BMTC ಚಾಲನಾ ಸಿಬ್ಬಂದಿಗಳಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು: ಲಿಖಿತವಾಗಿ ಎಂಡಿಗೆ ಮನವಿ ಸಲ್ಲಿಸಿದ ನೌಕರ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತ ಕೆಂಪಣ್ಣ ಆಯೋಗದ ವರದಿ ತಕ್ಷಣ ಬಹಿರಂಗ ಪಡಿಸಿ, ಸದನದಲ್ಲಿ ಮಂಡಿಸಿ: ಎಎಪಿ ಒತ್...