Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: KSRTC ಬಸ್ ಚಾಲಕರಿಗೆ ಡಬಲ್ ಡ್ಯೂಟಿ ಹೊರೆಯಿಂದ ಮುಕ್ತಿ ಸಿಕ್ಕಿದೆ. ಈ ಕುರಿತಂತೆ ಸಂಸ್ಥೆ ಆದೇಶ ಹೊರಡಿಸಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ. ಆದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕರಿಗೆ ಡಬಲ್ ಡ್ಯೂಟಿ ಹೊರೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ!!

ಹೌದು! ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಾತ್ರಿ ಮತ್ತು ದೂರದ ಪ್ರಯಾಣಕ್ಕೆ ಓಡಿಸುವ ಚಾಲಕರು ಪ್ರಯಾಣದ ಬಳಿಕ ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಸತತ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಳಿಗಿಂತ ಅಧಿಕ ಮತ್ತು ರಾತ್ರಿ ಪಾಳಿಯಲ್ಲಿ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕರಿಂದ ಐದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ಸೂಚನೆ ನೀಡಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇದಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಡಬಲ್ ಡ್ಯೂಟಿ ಮತ್ತು ರಾತ್ರಿ ವೇಳೆ ವಿಶ್ರಾಂತಿ ನೀಡದಿರುವುದರಿಂದ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಮಿತಿಯು ಕೆಎಸ್‌ಆರ್‌ಟಿಸಿಗೆ ವರದಿ ಸಲ್ಲಿಸಿತ್ತು.

ಆದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದ ದೇವದುರ್ಗ ಘಟಕದಲ್ಲಿ ಚಾಲಕರಿಗೆ ಡಬಲ್ ಡ್ಯೂಟಿ ಹೊರೆಯಿಂದ ಮುಕ್ತಿ ಸಿಕ್ಕಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಕೂಡ ರಾತ್ರಿ ಪಾಳೆಯಲ್ಲಿ ಕನಿಷ್ಠ 1050 ಕಿಮೀಗಿಂತಲೂ ಹೆಚ್ಚು ಕಿಲೋಮಿಟರ್ ಇರುತ್ತದೆ.

ಇನ್ನು ಕೆಲವು ವೇಳೆ 1100 ಕಿಮೀ ಇರುತ್ತದೆ. ಈ ಮೊದಲು ರಾತ್ರಿ ಪಾಳೆಯಲ್ಲಿ ಇಬ್ಬರು ಚಾಲಕರು ಒಬ್ಬರು ನಿರ್ವಾಹಕರನ್ನು ಕೊಡುತ್ತಿದ್ದರು. ಈಗ ಅಂದರೆ ಸುಮಾರು ಒಂದು ವರ್ಷದಿಂದಲೂ ಒಬ್ಬ ಚಾಲಕ ಒಬ್ಬ ಚಾಲಕ ಕಂ ನಿರ್ವಾಹಕರನ್ನು ರೊಟ್ ರೊಟೇಶನ್‌ನಲ್ಲಿ ಕೊಡುತ್ತಿದ್ದಾರೆ.

ಎರಡು ಮೂರು ಸಲ ರಾತ್ರಿ ಪಾಳೆಯಲ್ಲಿ ಅನಾಹುತ ಆದರೂ ಕೂಡ ಅಧಿಕಾರಿಗಳ ನಿರ್ಲಕ್ಷತನದಿಂದ ದೇವದುರ್ಗ ಘಟಕದಲ್ಲಿ ರಾತ್ರಿ ಪಾಳೆಯಲ್ಲಿ ಒಬ್ಬ ಚಾಲಕ, ಒಬ್ಬ ಚಾಲಕ ಕಂ ನಿರ್ವಾಹಕರನ್ನು ನೇಮಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಸಂಘಟನೆಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಈ ಪದ್ಧತಿಯನ್ನು ದೇವದುರ್ಗ ಘಟಕದ ವ್ಯವಸ್ಥಾಪಕರು ಮುಂದುವರಿಸುತ್ತಿದ್ದಾರೆ. ರಾಯಚೂರು ವಿಭಾಗದಿಂದ ರಾಯಚೂರು ಟು ಬೆಂಗಳೂರು ಹಾಗೂ ದೇವದುರ್ಗ ಟು ಬೆಂಗಳೂರು ಹಾಗೂ ದೇವದುರ್ಗ ಟು ಪುನಾ ಎಲ್ಲ ರಾತ್ರಿ ಪಾಳೆಯನ್ನು ಇದೇ ವ್ಯವಸ್ಥೆಯಡಿಯಲ್ಲೇ ನಡೆಯುತ್ತಿದೆ.

ಹೀಗಾಗಿ  ಇದರ ಬಗ್ಗೆ ಸೂಕ್ತ ಅಧಿಕಾರಿಗಳು ಗಮನ ಹರಿಸಿ ಈ ಮೊದಲು ಇದಂತೆ ಇಬ್ಬರು ಚಾಲಕರು ಒಬ್ಬ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ಘಟಕದ ನೊಂದ ಚಾಲನಾ ಸಿಬ್ಬಂದಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ