CrimeNEWSನಮ್ಮರಾಜ್ಯ

ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅನೇಕ ಗುತ್ತಿದಾರರು, ಅಧಿಕಾರಿಗಳ ಜೀವದ ಜತೆ ಆಟವಾಡಿದ್ದ ಹಿಂದಿನ “40% ಕಮಿಷನ್‌ ಸರ್ಕಾರ”ದ ಚಾಳಿಯನ್ನೇ ಕಾಂಗ್ರೆಸ್‌ ಸರ್ಕಾರವೂ ಮೈಗೂಡಿಸಿಕೊಂಡಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್ (52) ಆತ್ಮಹತ್ಯೆ ಸಂಬಂಧ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ರೂ. ಮೊತ್ತದ ಅವ್ಯವಹಾರಕ್ಕೆ ಸಂಬಂಧಿಸಿ ಬೆಂಗಳೂರು ಕಚೇರಿ ಅಧೀಕ್ಷಕ ಪಿ.ಚಂದ್ರಶೇಖರ್‌ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಇನ್ನು ಡೆತ್‌‌ನೋಟ್‌ನಲ್ಲಿ ಚಂದ್ರಶೇಖರನ್‌ ಅವರು ನಮೂದಿಸಿರುವ ಮಂತ್ರಿ ಬಿ. ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ಕಿತ್ತುಹಾಕಬೇಕು. ಉನ್ನತ ಮಟ್ಟದ ತನಿಖೆ ನಡೆಸಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ಮಂತ್ರಿ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಧಿಕಾರಿಯ ಆತ್ಮಹತ್ಯೆ ಪ್ರಕರಣ ರಾಜ್ಯ ಸರ್ಕಾರವು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ದಾಖಲೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಳುತ್ತಿದ್ದರು. ಇದೀಗ ದಾಖಲೆಯ ಸ್ವರೂಪವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಡೆತ್‌ನೋಟ್‌ ಇದೆ.

ನಿಗಮದ 85 ಕೋಟಿ ರೂ.ಗಳನ್ನು ಅನ್ಯಾಯ ಮತ್ತು ನಿಯಮಬಾಹಿರವಾಗಿ ಲೂಟಿ ಮಾಡಿರುವ ಬಗ್ಗೆಯೂ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಚಿವರು ಮೌಖಿಕವಾಗಿ ಆದೇಶ ನೀಡಿದ್ದರೆಂದು ಉಲ್ಲೇಖಿಸಿದ್ದಾರೆ. ಇದೇನು ಕೇವಲ ಬಾಯಿ ಮಾತಿನಲ್ಲೇ ನಡೆಸುವ ಸರ್ಕಾರವಾಗಿದೆಯೇ ಎಂದು ಪ್ರಶ್ನಿಸಿದರು.

ಇನ್ನು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡುವುದಾಗಿ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವೂ ಕಮಿಷನ್‌ ಭ್ರಷ್ಟಾಚಾರದ ಹಾದಿ ಹಿಡಿದಿರುವುದು ವಿಪರ್ಯಾಸ ಎಂದು ಜಗದೀಶ್‌ ವಿ. ಸದಂ ಬೇಸರ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿಕೆಗೆ ಜೆಡಿಎಸ್ ನಾಯಕರಿಂದ ಅದ್ದೂರಿ ಸ್ವಾಗತ ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ - ಜೂ.17ರಿಂದ ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ KSRTC: ಬಾನಂದೂರು - ಶ್ರೀಕ್ಷೇತ್ರ ಆದಿ ಚುಂಚನಗರಿ ನಡುವಿನ ಬಸ್‌ ಸಂಚಾರಕ್ಕೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಚಾಲನೆ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಸಂಬಂಧ ಕರೆದಿದ್ದ ಎಂಡಿಗಳ ಸಭೆ ಮುಂದೂಡಿಕೆ KSRTC- 3ನಿಗಮಗಳ 15 ಡಿಸಿಗಳ ವರ್ಗಾವಣೆ ಮಾಡಿ ಆದೇಶ: ಸಿಪಿಎಂ KSRTC: ಅಪಘಾತದಿಂದ ಮೃತಪಟ್ಟ ನಾಲ್ವರು ನೌಕರರ ಕುಟುಂಬಕ್ಕೆ ತಲಾ 1ಕೋಟಿ ರೂ. ಚೆಕ್‌ ವಿತರಣೆ KSRTC: ನಾಳೆಯಿಂದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜನ್ಮಸ್ಥಳ ಬಾನಂದೂರು- ಆದಿ ಚುಂಚನಗಿರಿಗೆ ನೇರ ಬಸ್ ಸೌಕರ್ಯ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಎಂಡಿಗಳ ಸಭೆ