ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದರಲ್ಲಿ ಬ್ರೇಕ್ ಲೈನರ್ ಕಳಚಿ ಹೊರಬರುತ್ತಿದೆ. ಅದನ್ನು ಚಾಲಕ ಹೇಗೆ ತಾನೇ ಚಾಲನೆ ಮಾಡಲು ಸಾಧ್ಯ. ಮಾರ್ಗ ಮಧ್ಯದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ?
ಇತ್ತ ಬಸ್‌ಗಳ ಸ್ಥಿತಿ ಸರಿಯಿಲ್ಲದಿರುವುದು ಗೊತ್ತಿದ್ದು, ಅದನ್ನು ತೆಗೆದುಕೊಂಡು ಹೋದರೆ ಅಪಾಯ ಸಂಭವಿಸಬಹುದು ಎಂಬ ಆತಂಕ, ಅತ್ತ ತೆಗೆದುಕೊಂಡು ಹೋಗದಿದ್ದರೆ ಎಲ್ಲಿ ಅಮಾನತು ಮಾಡುತ್ತಾರೋ ಎಂಬ ಭಯ. ಇದರ ನಡುವೆ ಜೀವವನ್ನು ಕೈಯಲ್ಲಿಡಿದುಕೊಂಡು ಸಾವಿರಾರು ನೌಕರರು ಇಂದು ದುರಸ್ತಿಯಾಗದ ಬಸ್‌ಗಳನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿಯನ್ನು ಅಧಿಕಾರಿಗಳು ನಿರ್ಮಾಣ ಮಾಡಿದ್ದಾರೆ.
ಅದಕ್ಕೆ ತಾಜಾ ನಿದರ್ಶನ ಎಂಬಂತೆ ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ 5ರ ಬಸ್ (KA, 57,F – 1658)ನ ಬ್ರೇಕ್ ಲೈನರ್ ಕಳಚಿ ಹೊರಬರುತ್ತಿದೆ ಆದರೂ ಅದನ್ನು ತೆಗೆದುಕೊಂಡು ಹೋಗಬೇಕು ಎಂದು ಘಟಕದ ಅಧಿಕಾರಿಗಳು ಚಾಲನಾ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.
ಇನ್ನು ವಿಧಿ ಇಲ್ಲದೆ ಆ ಬಸ್‌ಅನ್ನು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾದ್ದರಿಂದ ಅದನ್ನು ಚಾಲನಾ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ಅದೃಷ್ಟವಶಾತ್ ಬ್ರೇಕ್ ಲೈನರ್ ಕಳಚಿ ಹೊರಬರುತ್ತಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ.
ಚಾಲಕ ತನ್ನ ಸಮಯಪ್ರಜ್ಞೆ ಮೆರೆದು ಅದನ್ನು ಸರಿಯಾಗಿ ಜಾಗರೂಕತೆಯಿಂದ ಚಲಾಯಿಸಿದ್ದರಿಂದ ಯಾವುದೆ ಅನಾಹುತವು ಸಂಭವಿಸಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಅದನ್ನು ಚಾಲಕನ ಮೇಲೆ ಹಾಕಿ ಅಧಿಕಾರಿಗಳು ನಮಗೇನು ಗೊತ್ತಿಲ್ಲ ಎಂಬಂತೆ ಸುಮ್ಮನಾಗಿ ಬಿಡುತ್ತಿದ್ದರು.
ಹೌದು! ಈ ರೀತಿ ಬ್ರೇಕ್ ಲೈನರ್ ಕಳಚಿ ಹೊರಬರುತ್ತಿದೆ. ಚಾಲಕ ಹೇಗೆ ತಾನೇ ಅದನ್ನು ಚಾಲನೆ ಮಾಡಿಕೊಂಡು ಹೋಗಲು ಸಾಧ್ಯ ಹೇಳಿ. ಮಾರ್ಗ ಮಧ್ಯದಲ್ಲಿ ಆಗುವ ಅನಾಹುತಕ್ಕೆ ಯಾರು ಹೊಣೆಯಾಗುತ್ತಾರೆ. ಈ ರೀತಿ ಬೇಜವಾಬ್ದಾರಿ, ಕಳಪೆ ಗುಣಮಟ್ಟದ ರಿಪೇರಿ ಮಾಡಿ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುತ್ತಾ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಜರುಗಿಸಬೇಕು.
ಇನ್ನು ಡಿಪೋ ಮಟ್ಟದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದೆಷ್ಟೋ ಬಸ್‌ಗಳು ರಸ್ತೆಗಿಳಿಯುವ ಸ್ಥಿತಿಯಲ್ಲಿಲ್ಲ. ಆದರೂ ಅವುಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ. ಇತ್ತ ಈ ಬಸ್ ಸರಿಯಿಲ್ಲ ಇದನ್ನು ಸರಿ ಮಾಡಿಕೊಡಿ ಎಂದರೆ ಚಾಲನಾ ಸಿಬ್ಬಂದಿಗೆ ಘಟಕದಲ್ಲಿ ದಮ್ಕಿಹಾಕಿ ಕಳುಹಿಸುತ್ತಾರೆ ಅಧಿಕಾರಿಗಳು.
ಪ್ರಸ್ತುತ ರಶ್‌ಆಗಿಯೇ ಸಾರಿಗೆ ಬಸ್‌ಗಳು ಓಡಾಡುತ್ತಿವೆ. ಆದರೆ, ಬಸ್‌ಗಳ ಸ್ಥಿತಿಗಳು ಅಷ್ಟಾಗಿ ಸರಿಯಿಲ್ಲ ಎಂಬುದಕ್ಕೆ ಇದನ್ನು ನೋಡಿದರೆ ತಿಯದಿರದು. ಹೀಗಾಗಿ ಬಸ್‌ನಲ್ಲಿ ಓಡಾಡುವವರು ಎಚ್ಚರಿಕೆ ವಹಿಸುವ ಅಗತ್ಯವೂ ಇದೆ.
ಹೀಗಾಗಿ ಇನ್ನಾದರೂ ಘಟಕ ಮಟ್ಟದ ಅಧಿಕಾರಿಗಳು ಈರೀತಿ ಕೆಟ್ಟು ನಿಂತಿರುವ ಬಸ್‌ಗಳನ್ನು ರಿಪೇರಿ ಮಾಡಿ ಅವುಗಳನ್ನು ಚಾಲನಾ ಸಿಬ್ಬಂದಿಗೆ ಕೊಡಬೇಕು. ಒಂದು ವೇಳೆ ರಿಪೇರಿ ಮಾಡದಿದ್ದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾರಣ ಅಪಾಯ ಸಂಭವಿಸಿದರೆ ಅದರ ಹೊಣೆಯನ್ನು ಯಾರು ತೆಗೆದುಕೊಳ್ಳುವುದಿಲ್ಲ. ಚಾಲನಾ ಸಿಬ್ಬಂದಿಗಳ ಮೇಲೆಯೇ ಹೊರಿಸುತ್ತಾರೆ.