KSRTC ಚಾಲಕ ನಿರ್ವಾಹಕರ ಮೇಲೆ ಮನಸ್ಸೋ ಇಚ್ಛೆ ಕಿಡಿಗೇಡಿಗಳಿಂದ ಹಲ್ಲೆ- ಒದ್ದು ಒಳಗಾಕಲು ಮಹಿಳಾ ಪ್ರಯಾಣಿಕರ ಆಗ್ರಹ
ರಾಮನಗರ: ಜಿಲ್ಲೆಯ ರಾಮನಗರ ತಾಲೂಕು ಕೂಟಗಲ್ ಹೋಬಳಿ ಲಕ್ಷ್ಮೀಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರ ಮೇಲೆ ಕಿಡಿಗೇಡಿಗಳು ಮನಸ್ಸೋಯಿಚ್ಛೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದು ಕಾರಣ ಏನು ಎಂದು ತಿಳಿದು ಬಂದಿಲ್ಲ. ಆದರೆ ಡ್ಯೂಟಿ ಮೇಲಿರುವ ಚಾಲನಾ ಸಿಬ್ಬಂದಿಗಳ ಮೇಲೆ ಮಾಡಿರುವುದು ಕಾನೂನಿನಡಿ ಭಾರು ಅಪರಾಧವಾಗಿದೆ.
ಹೀಗಾಗಿ ಸಂಸ್ಥೆಯ ಆಡಳಿತ ವರ್ಗ ಹಾಗೂ ಸರ್ಕಾರ ಯಾರು ಹಲ್ಲೆ ಮಾಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಚಾಲಕರಿಗೆ ನ್ಯಾಯ ಕೊಡಿಸಬೇಕು ಎಂದು ಸಮಸ್ತ ಸಾರಿಗೆ ನೌಕರರು ಆಗ್ರಹಿಸಿದ್ದಾರೆ.
ಇನ್ನು ಕಳೆದ ಶುಕ್ರವಾರ ರಾತ್ರಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಬೈಕ್‌ನಲ್ಲಿ ಹೋಗಿ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಹೀಗೆಯೇ ಪದೇಪದೆ ಸಾರಿಗೆ ನಿಗಮಗಳ ನೌಕರರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ಈ ಬಗ್ಗೆ ಸಾರಿಗೆ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ನಿಯಮವನ್ನು ರೂಪಿಸಬೇಕು ಜತೆಗೆ ಚಾಲಕ ಮತ್ತು ನಿರ್ವಾಹಕರ ರಕ್ಷಣೆಗೆ ತಕ್ಷಣ ಮೇಲಧಿಕಾರಿಗಳು ದಾವಿಸಬೇಕಿದೆ. ಈ ರೀತಿ ಆದಾಗ ಹಲ್ಲೆ ಪ್ರಕರಣಗಳು ಕಡಿಮೆ ಆಗಬಹುದು ಎಂದು ನೌಕರರು ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕರ ಆಕ್ರೋಶ: ಇಂದು ನಡೆದಿರುವ ಹಲ್ಲೆ ವಿಚಾರವಾಗಿ ಮಹಿಳಾ ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದು, ಕಂಡಕ್ಟರ್, ಡ್ರೈವರ್ ಮೇಲೆ ಹಲ್ಲೆ ಮಾಡಿದವರನ್ನು ಗಲ್ಲು ಶಿಕ್ಷೆಗೆ ಗುರಿಮಾಡಬೇಕು. KSRTC ಡ್ರೈವರ್ ಮತ್ತು ಕಂಡಕ್ಟರ್ಗಳು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾರೆ. ಅವರ ಮೇಲೆ ಹಲ್ಲೆ ಮಾಡಿದರೆ ಹೇಗೆ? ಅವರ ಕುಟುಂಬ ಏನು ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ಇನ್ನು ಕಂಡಕ್ಟರ್, ಡ್ರೈವರ್ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ತುಂಬಾ ಬೇಜಾರು ಆಯಿತು. ಅವರು ಕೆಲಸಕ್ಕೆ ಬರುವುದು ಹೊಟ್ಟೆ ಪಾಡಿಗಾಗಿ ಎಂದು ಹೇಳುವುದಕ್ಕಿಂತ ಜನರ ಸೇವೆಗಾಗಿ. ಹೀಗಿದ್ದರೂ ಅವರ ಮೇಲೆ ಹಲ್ಲೆ ಮಾಡಿದರೆ ಹೇಗೆ? ತುಂಬಾ ರಿಸ್ಕ್ ತಗೊಂಡು ಕೆಲಸ ಮಾಡುತ್ತಾರೆ. ಹಲ್ಲೆ ಮಾಡಿದವರನ್ನು ಒದ್ದು ಒಳಗೆ ಹಾಕಬೇಕು ಎಂದು ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೇಸ್ ಮಾಡುವುದು ಮುಖ್ಯವಲ್ಲ, ಶಿಕ್ಷೆ ಆಗಬೇಕು ಎಂದ ಸಚಿವ ರಾಮಲಿಂಗಾರೆಡ್ಡಿ: ಈ ರೀತಿಯ ಹಲ್ಲೆ ಪ್ರಕರಣ ವಿಚಾರವಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ ಡ್ರೈವರ್, ಚಾಲಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕೇಸ್ ಮಾಡುವುದು ಮುಖ್ಯವಲ್ಲ, ಶಿಕ್ಷೆ ಆಗುವ ರೀತಿಯಲ್ಲಿ ಮಾಡಬೇಕು. ಜೈಲಿಗೆ ಹೋಗುವ ರೀತಿ ಮಾಡಬೇಕು, ಆಗ ಇವರಿಗೆ ಬುದ್ಧಿ ಬರುತ್ತದೆ ಎಂದು ಹೇಳಿದ್ದರು.
Related












