CRIMENEWSನಮ್ಮರಾಜ್ಯ

KSRTC ಸಾಗರ: ಅಧಿಕಾರಿಗಳ ಕಿರುಕುಳಕ್ಕೆ ನೊಂದು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ವಿಜಯಪಥ ಸಮಗ್ರ ಸುದ್ದಿ

ಸಾಗರ: ಅಧಿಕಾರಿಗಳ ಕಿರುಕುಳದಿಂದ ಮನನೊಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಾಗರ ಘಟಕದ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

KSRTC ಶಿವಮೊಗ್ಗ ವಿಭಾಗದ ಸಾರಗ ಘಟಕ ಚಾಲಕ ನಾಗಪ್ಪ (58) ಎಂಬುವರೆ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡವರು. ನಾಗಪ್ಪ ಇದೇ ಜ.5ರಂದು ಮನೆಯ ಹೊರಗಡೆ ತೊಲೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಗ ಪತ್ನಿ ಮತ್ತು ಮಕ್ಕಳು ಗಮನಿಸಿ ಓಡಿಹೋಗಿ ನೇಣಿನ ಕುಣಿಕೆಯಿಂದ ಇಳಿಸಿ ಸಾಗರ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆಗೆ ಸೇರಿಸಿದ್ದರು ಆದರೆ, ಚಿಕಿತ್ಸೆ ಫಲಕಾರಿಯಾಗಿದೆ  ಮೃತಪಟ್ಟಿದ್ದಾರೆ.

ಈ ಸಂಬಂಧ ನಾಗಪ್ಪ ಅವರ ಮಗ ರಾಕೇಶ್ ಎಂಬುವರು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಮ್ಮ ತಂದೆ ಸಾವಿಗೆ ಘಟಕದ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ವಿವರಿಸಿದ್ದಾರೆ.

ಪ್ರಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದ ಚಾಲಕ ನಾಗಪ್ಪ ಅವವರಿಗೆ ಡಿಪೋ ವ್ಯವಸ್ಥಾಪಕ ಶ್ರೀಶೈಲ ಬಿರಾದಾರ ಅವರು ಕಳೆದ ಎರಡು ತಿಂಗಳಿನಿಂದ ಡ್ಯೂಟಿಕೊಡದೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಪ್ರಾಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದರೂ ಕೂಡ ಈ ರೀತಿ ಕಿರುಕುಳ ನೀಡುತ್ತಿದ್ದರಿಂದ ಮಾನಸಿಕವಾಗಿ ಮನನೊಂದು ಕಳೆದ ಎರಡು ತಿಂಗಳಿನಿಂದಲೂ ಮನೆಯಲ್ಲೇ ಇದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಡಿಎಂ ಆವರೇ ನೇರಹೊಣೆ ಎಂದು ಕುಟುಂಬವರು ಆರೋಪಿಸಿದ್ದಾರೆ.

ಮೃತ ಚಾಲಕ ನಾಗಪ್ಪ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ದೂರು ನೀಡಿದ ಮೃತ ನಾಗಪ್ಪ ಅವರ ಪುತ್ರ ರಾಕೇಶ್‌: ನನ್ನ ತಂದೆಯವರು ಸಾಗರ ಡಿಪೋನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಈ ನಡುವೆ ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು. ನಾನು ಮತ್ತು ನನ್ನ ತಾಯಿ ಏಕೆ ಡ್ಯೂಟಿಗೆ ಹೋಗುತ್ತಿಲ್ಲವಲ್ಲ ಎಂದು ಕೇಳಿದ್ದಕ್ಕೆ ನನಗೆ ಮ್ಯಾನೇಜರ್ ಡ್ಯೂಟಿಗೆ ಹೋಗುವಂತೆ ಹೇಳುತ್ತಿಲ್ಲ ಎಂದು ಹೇಳುತ್ತಿದ್ದರು.

ಇದೆ ವಿಚಾರವಾಗಿ ನನ್ನ ತಂದೆಯವರು ಸರಿಯಾಗಿ ಊಟ ತಿಂಡಿ ಮಾಡದೆ ಇದ್ದು ರಾತ್ರಿ ವೇಳೆಯಲ್ಲಿ ಸರಿಯಾಗಿ ನಿದ್ರೆಯನ್ನು ಮಾಡುತ್ತಿರಲಿಲ್ಲ ಇದರಿಂದ ನಮ್ಮ ತಂದೆಯವರು ಜನವರಿ 5ರಂದು ನನ್ನ ತಮ್ಮ ಮತ್ತು ತಂಗಿ ಮನೆಯಲ್ಲಿ ಇಲ್ಲದೆ ವೇಳೆಯಲ್ಲಿ ರಾತ್ರಿ ಸುಮಾರು 7.30ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯುವ ಉದ್ದೇಶದಿಂದ ಮನೆಯ ಹೊರಗಡೆ ಮರದ ತೊಲೆಗೆ ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದರು.

ಅಷ್ಟರಲ್ಲಿ ನಾನು ಮತ್ತು ನನ್ನ ತಾಯಿ ಮನೆಗೆ ಬಂದಿದ್ದು ಅಲ್ಲಿ ನನ್ನ ತಂದೆಯವರು ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದನ್ನು ನೋಡಿ ಅಕ್ಕ ಪಕ್ಕದವರನ್ನು ಕರೆದು ನಮ್ಮ ತಂದೆಯನ್ನು ನೇಣಿನ ಕುಣಿಕೆಯಿಂದ ಕೆಳಗೆ ಇಳಿಸಿ ಚಿಕಿತ್ಸೆಗೆಂದು ಅಂಬುಲೆನ್ಸ್ ವಾಹನದಲ್ಲಿ ಸಾಗರದ ಆಸತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆವು. ನಂತರ ನನ್ನ ತಂದೆಯನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಸೂಪರ್ ಸ್ಪಷಾಲಿಟಿ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದವು.

ಬಳಿಕ ಜ.7ರಂದು ಮಧ್ಯಾಹ್ನ ಮ್ಯಾಕ್ಸ್ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಿಕೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಸಂಜೆ ಸುಮಾರು 5.30ರಲ್ಲಿ ನನ್ನ ತಂದೆಯವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನನ್ನ ಸಂದೆಯವರು ಕರ್ತವ್ಯಕ್ಕೆ ಹೋಗದೆ ಇದ್ದುದರಿಂದ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಇನ್ನಾವುದೋ ಕಾರಣಕ್ಕೂ ಅತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅದ್ದರಿಂದ ತಾವು ಕಾನೂನು ರೀತಿ ಕ್ರಮ ಜರುಗಿಸಿ, ಅಂತ್ಯಕ್ರಿಯೆ ಮಾಡಲು ಅವಕಶ ಮಾಡಿಕೊಡಬೇಕು ಎಂದು ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣ: ಈ ನೌಕರ ಆತ್ಮಹತ್ಯೆಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣ ಎಂದು ನೌಕರರು ಆರೋಪಿಸಿದ್ದಾರೆ. ನೌಕರರು ಒತ್ತಡದಲ್ಲಿ ಕೆಲಸಮಾಡುತ್ತಿದ್ದು, ನಮಗೆ ಹಲವು ರೀತಿಯ ಸೇವಾ ಸಮಸ್ಯೆಗಳು ಇವೆ. ಅದನ್ನು ಬಗೆಹರಿಸಬೇಕಾದ ಅಧಿಕಾರಿಗಳು ಲಂಚಕ್ಕೆ ಅಪಅಪಿಸುತ್ತಿರುತ್ತಾರೆ. ಇದರ ನಡುವೆ ನಮ್ಮ ಸಂಸಾರ ಮತ್ತು ಮಕ್ಕಳ ಓದು, ವಯಸ್ಸಾದ ಅಪ್ಪ-ಅಮ್ಮಂದಿರ ಆರೋಗ್ಯ ವೆಚ್ಚವೆಲ್ಲವನ್ನು ಭರಿಸಬೇಕು.

ಕೊಡುತ್ತಿರುವ ವೇತನ ಸಂಸಾರ ಸಾಗಿಸುವುದಕ್ಕೆ ಕಷ್ಟವಾಗುತ್ತಿದೆ. ಇದರ ನಡುವೆ ಲಂಚ ಕೊಟ್ಟು ಉಳಿದವುಗಳಿಗೆ ಹಣಹೊಂದಿಸಬೇಕು ಎಂದರೆ ಹೇಗೆ ಸಾಧ್ಯ? ಇದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿರುವ ನೌಕರರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ನೌಕರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯ, ಕಿರುಕುಳದಿಂದ ಮಾನಸಿಕ ಹಿಂಸೆ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸರ್ಕಾರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಮತ್ತೆ 2024 ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಮಾಡದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುತ್ತಿರುವುದು ಕೂಡ ಇಂಥ ದುರಂತಕ್ಕೆ ಕಾರಣವಾಗಿವೆ ಎಂದು ಸಹೋದ್ಯೋಗಿಗಳು ಆರೋಪಿಸಿದ್ದಾರೆ.

Megha
the authorMegha

Leave a Reply

error: Content is protected !!