KSRTC ಶಿವಮೊಗ್ಗ: ಮುದುಕಿ ಹಲ್ಲಿನಂತೆ ಅಲ್ಲಾಡುವ ಬಸ್ಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿರುವ ಆರ್ಟಿಒ ಅಧಿಕಾರಿಗಳು- ಲಂಚ ಎಷ್ಟು ತೆಗೆದುಕೊಂಡರೋ?
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಬಸ್ ಸಂಖ್ಯೆ KA-57, F-1319 ಮತ್ತು KA -57, F-490 ಈ ವಾಹನಗಳು ಹಾಳಾಗಿದ್ದು, ಪ್ರಯಾಣಿಕರ ಓಡಾಟಕ್ಕೆ ಯೋಗ್ಯವಾಗಿಲ್ಲ. ಆದರೂ ಕೂಡ ಶಿವಮೊಗ್ಗ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ (RTO) ಗಳಲ್ಲಿ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲಾಗುತ್ತಿದೆ. ಅಂದರೆ ಈ RTO ಅಧಿಕಾರಿಗಳು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.

KSRTC ಶಿವಮೊಗ್ಗ ವಿಭಾಗದಲ್ಲಿ ಈ ಎರಡು ಬಸ್ಗಳು ಮಾತ್ರವಲ್ಲ ಇವುಗಳು ಸೇರಿದಂತೆ ಇನ್ನೂ ಅನೇಕ ಬಸ್ಗಳನ್ನು ಸಮಪರ್ಕವಾಗಿ ದುರಸ್ತಿ ಮಾಡಿಲ್ಲ. ಕಾಟಾಚಾರಕ್ಕೆ ಎಂಬಂತೆ ಮಾಡಿದ್ದು, ಈಗ ಸಾರ್ವಜನಿಕ ಪ್ರಯಾಣಿಕರಿಗೆ ಈ ಯೋಗ್ಯವಲ್ಲದ ಬಸ್ಗಳಿಗೆ RTO ಅಧಿಕಾರಿಗಳು ಫಿಟ್ನೆಸ್ ಸರ್ಟಿಫಿಕೇಟ್ಗಳನ್ನು ಕೊಡುತ್ತಿದ್ದಾರೆ.
ಇನ್ನು ಈ ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳೇ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿರುವುದರಿಂದ KSRTCಯ ನಾಲಾಯಕ್ ಅಧಿಕಾರಿಗಳು ಈ ಬಸ್ಗಳನ್ನು ಸಾರ್ವಜನಿಕರ ಪ್ರಯಾಣಕ್ಕೆ ಯೋಗ್ಯವಾಗಿದೆ ಎಂದು ಮಾರ್ಗ ಆಚರಣೆಗೆ ಕಳುಹಿಸುತ್ತಿದ್ದಾರೆ.
ಈ ಬಸ್ಗಳಿಗೆ ಹೊರ ಭಾಗದಲ್ಲಿ ಕಾಟಾಚಾರಕ್ಕೆ ಬಣ್ಣ ಬಳಿದು KSRTC ಅಧಿಕಾರಿಗಳು ಆರ್ಟಿಒ ಕಚೇರಿಗೆ ಕಳಿಸುತ್ತಾರೆ. ಆರ್ಟಿಒ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಈ ಬಸ್ಗಳಿಗೆ FC ಮಾಡಿ ಕೊಡುತ್ತಿದ್ದಾರೆ. ಅಂದರೆ ಇದನ್ನು ಗಮನಿಸಿದರೆ RTO ಅಧಿಕಾರಿಗಳು ಲಂಚಕ್ಕೆ ಕೈ ಚಾಚಿ ಇಂಥ ಕೆಲಸ ಮಾಡುತ್ತಿದ್ದಾರೆಯೆ ಎಂಬ ಅನುಮಾನ ಮೂಡುತ್ತಿದೆ.
ಇನ್ನು ನೋಡಿ ವಿಡಿಯೋ ಕೋಡ ಇದೆ. ಈ ಬಸ್ಗಳ ಒಳಗೆ ಯಾವುದೇ ಮೀಟರ್ಸ್ ವರ್ಕ್ ಆಗುವುದಿಲ್ಲ ಇಂಜಿನ್ ಬಾನೆಟ್ಗಳು ಉದುರಿ ಹೋಗುವಂತೆ ಕಾಣುತ್ತಿವೆ. ವಾಹನದ ತುಂಬಾ ಗಲೀಜು ಇದೆ. ಬಸ್ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಕುಳಿತು ಕೊಳ್ಳುವ ಆಸನಗಳಿಗೆ ರೀವಿಟ್ಗಳನ್ನು ಹೊಡೆದಿದ್ದಾರೆ ಇದರ ಮೇಲೆ ಹೇಗೆ ತಾನೇ ಹಣ ಕೊಟ್ಟು ಕುಳಿತು ಪ್ರಯಾಣ ಮಾಡಲು ಸಾಧ್ಯ?
ಇನ್ನು ಬಸ್ನ ಮುಂದಿನ ಗ್ಲಾಸ್ ಒಡೆದಿದ್ದರೂ ಸಹ ಹಾಗೆಯೇ ಚಾಲಕರು ಚಾಲನೆ ಮಾಡಬೇಕು. ಹ್ಯಾಂಡ್ ರೆಸ್ಟ್ಗಳು ಇಲ್ಲ. ಸೈಡ್ ಗಾಜುಗಳು ಕ್ಲೀನ್ ಇಲ್ಲದಿದ್ದರೂ ಸಹ, ಗೇರ್ ಲಿವರ್ಗೆ ನಾಬ್ ಇಲ್ಲದಿದ್ದರೂ ಸಹ ಯಾವ ರೀತಿಯಲ್ಲಿ RTO ಅಧಿಕಾರಿಗಳು ಇಂತಹ ವಾಹನಗಳಿಗೆ FC ಮಾಡಿ ಕಳುಹಿಸಿ ಕೊಟ್ಟಿದ್ದಾರೆ ಎಂಬುವುದು ಯಕ್ಷಪ್ರಶ್ನೆ ಆಗಿದೆ.
ಈ ಅಧಿಕಾರಿಗಳು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೆ ಆರ್ಟಿಸಿ ಕಚೇರಿಯಲ್ಲೇ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಾಗಿದೆ ನೀನು ಬಸ್ ತೆಗೆದುಕೊಂಡು ಹೋಗು ಎಂದು ಡಿಪೋ ವ್ಯವಸ್ಥಾಪಕರು ಚಾಲನಾ ಸಿಬ್ಬಂದಿಗಳಿಗೆ ಅವಾಜ್ ಬೇರೆ ಹಾಕುತ್ತಾರೆ. ಬಸ್ ಅಪಘಾತಕ್ಕೀಡಾದರೆ ಬಸ್ ಕಂಡಿಷನ್ಆಗಿಯೇ ಇತ್ತು ಇದು ಚಾಲಕನ ಅಜಾಗರುಕತೆಯಿಂದ ನಡೆದಿರುವ ಅಪಘಾತ ಎಂದು ಚಾಲನಕನ ತಲೆಗೆ ಕಟ್ಟಿ ಈ ನಾಲಾಯಕ್ ಆಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.
ಹೀಗಾಗಿ ಇದನ್ನು ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಸಾರಿಗೆ ಸಚಿವರು ಗಮನಿಸಿ ಇಂಥ ಬಸ್ಗಳನ್ನು ಆರ್ಟಿಒ ಕಚೇರಿಗೆ ಕಳುಹಿಸುವ ಹಾಗೂ ಆರ್ಟಿಒ ಕಚೇರಿಯಲ್ಲಿ ಇಂಥ ಬಸ್ಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
Related












