Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 2,50,96,43,365 ಬದಲಿಗೆ ಕೇವಲ 1,25,48,21,000 ರೂ.ಗಳ ಬಿಡುಗಡೆ ಮಾಡಿದ  ಸರ್ಕಾರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಉಚಿತವಾಗಿ ಮಹಿಳೆಯರು ಬಸ್‌ನಲ್ಲಿ ಓಡಾಡಿ ಎಂದು ಓಡಾಡಿದ ಟಿಕೆಟ್‌ ಮೌಲ್ಯದ ಹಣ ಕೊಡುವುದಕ್ಕೆ ಹಿಂದೇಟು ಹಾಕುತ್ತಿರುವ ಸರ್ಕಾರ
  • ಹೇಳುವುದೊಂದು ಮಾಡುವುದಿನ್ನೊಂದು ನಾಚಿಕೆ ಆಗಬೇಕು ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ
  • ಅನುದಾನವನ್ನು ಕೊಡುವುದಿಲ್ಲ. ಹೋಗಲಿ ಓಡಾಡಿದ ಮಹಿಳೆಯರ ಟಿಕೆಟ್‌ ಮೌಲ್ಯದ ಹಣವನ್ನಾದರೂ ಸರಿಯಾಗಿ ಕೊಡೋದಲ್ಲವೇ ಅದನ್ನೂ ಕೊಡುವುದಕ್ಕೆ ಮೀನಮೇಷ..

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಕೊಡಬೇಕಿರುವ ಹಣವನ್ನು ಸರಿಯಾಗಿ ಬಿಡುಗಡೆ ಮಾಡದೆ ನಿಗಮಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯ ಸರ್ಕಾರ ಹೊರಟಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ರಾಜ್ಯದ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಜೂನ್‌ 11ರಿಂದ ಜೂನ್‌ 30ರವರೆಗೂ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಒಟ್ಟು ಟಿಕೆಟ್‌ ಮೌಲ್ಯ 2,50,96,43,365 ರೂ.ಗಳಾಗಿದೆ.

ಆದರೆ, ಸರ್ಕಾರ 2,50,96,43,365 ರೂ.ಗಳನ್ನು ಬಿಡುಗಡೆ ಮಾಡುವ ಬದಲಿಗೆ ಕೇವಲ 1,25,48,21,000 ರೂ.ಗಳನ್ನು ಬಿಡುಗಡೆ ಮಾಡಿದ್ದು ಇದರಿಂದ ನಿಗಮಗಳು ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಅಂದರೆ, ಜೂನ್‌ 11ರಿಂದ ಜೂನ್‌ 30ರವರೆಗೂ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 10,54,45,047 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅದರ ಟಿಕೆಟ್‌ ಮೌಲ್ಯ 2,50,96,43,365 ರೂ.ಗಳಾಗಿದೆ.

ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 92,73,75,730 ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ಆದರೆ ಸರ್ಕಾರ ಕೇವಲ 47,15,12,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 43,64,46,311 ರೂ.ಗಳನ್ನು ಬಿಡುಗಡೆ ಮಾಡಬೇಕು, ಆದರೆ ಕೇವಲ 21,85,10,000 ರೂ.ಗಳನ್ನು ಬಿಡುಗಡೆ ಮಾಡಿದೆ.

ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 64,99,21,721 ರೂ.ಗಳನ್ನು ಬಿಡುಗಡೆ ಮಾಡಬೇಕು. ಆದರೆ ಈ ಸಂಸ್ಥೆಗೆ 32,57,59,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 46,92,69,504 ರೂ.ಗಳ ಬದಲಿಗೆ ಕೇವಲ 23,90,40,000 ರೂ.ಗಳನ್ನಷ್ಟೆ ಬಿಡುಗಡೆ ಮಾಡಿದೆ.

ಇದರಿಂದ ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಂಬಳ ಕೊಡುವುದಕ್ಕೂ ಕಷ್ಟಸಾಧ್ಯವಾಗಲಿದೆ. ಇದರ ಜತೆಗೆ ಬಸ್‌ಗಳಿಗೆ ಡೀಸೆಲ್‌ ತುಂಬಿಸಲು ಎಲ್ಲಿಂದ ಹಣ ತರಬೇಕು ಎಂದು   ಸರ್ಕಾರ ಈ ನಡೆಯಿಂದ ಉನ್ನತ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ.

ಇನ್ನು ಸರ್ಕಾರ ಹೆಚ್ಚುವರಿ ಹಣಕೊಡಬೇಕು. ಅದರೆ, ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ ಟಿಕೆಟ್‌ ಮೌಲ್ಯದಲ್ಲೂ ಅರ್ಧಕರ್ಧ ಕಡಿತಮಾಡಿ ಕೊಟ್ಟಿರುವುದನ್ನು ನೋಡಿದರೆ, ರಾಜ್ಯದಲ್ಲಿ ಸಾರಿಗೆ ನಿಗಮಗಳನ್ನು ಮುಚ್ಚುವ ಹುನ್ನಾರದಲ್ಲಿ ಕಾಂಗ್ರೆಸ್‌ ಸರ್ಕಾರವೂ ಕೂಡ ತೊಡಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ರೀತಿಯ ಭಿಕ್ಷೆ ನೀಡುವುದನ್ನು ಬಿಟ್ಟು ಮಹಿಳೆಯಯರು ಓಡಾಡಿರುವುದಕ್ಕೆ ತಕ್ಕಂತೆ ಟಿಕೆಟ್‌ ಮೌಲ್ಯದ ಹಣವನ್ನು ಸಕಾಲದಲ್ಲಿ ಅದೂ ಕೂಡ ಪೂರ್ತಿ ಪಾವತಿ ಮಾಡಿ ನಿಗಮಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಇನ್ನು ಜೂನ್‌ ತಿಂಗಳ ಟಿಕೆಟ್‌ ಮೌಲ್ಯವನ್ನು ಆಗಸ್ಟ್‌ ಮೊದಲವಾರದಲ್ಲಿ ಪಾವತಿ ಮಾಡುತ್ತೇವೆ ಎಂದು ಸಾರಿಗೆ ಸಚಿವರು ಹುಬ್ಬೇರಿಸಿಕೊಂಡು ಹೇಳಿಕೆ ನೀಡಿದ್ದರು. ಆದರೆ ಇಲ್ಲಿ ಹುಬ್ಬಿಳಿಸಿಕೊಳ್ಳುವಂತೆ ಹಣ ಬಿಡುಗಡೆಯಾಗಿದೆಯಲ್ಲ ಇದಕ್ಕೆ ಇನ್ನೇನನ್ನು ಏರಿಸಿಕೊಂಡು ಮಾತನಾಡುತ್ತಾರೋ ಸಚಿವರು ಗೊತ್ತಿಲ್ಲ.

ಸಾರಿಗೆ ನಿಗಮಗಳು ಎಂದರೆ ರಾಜ್ಯದಲ್ಲಿ ಆಡಳಿತಕ್ಕೆ ಬರುವ ಸರ್ಕಾರಗಳಿಗೆ ಒಂದು ರೀತಿ ತಾತ್ಸಾರ. ಇದರಿಂದ ದುಡ್ಡುಮಾಡುವುದಕ್ಕಷ್ಟೇ ನೋಡುತ್ತಾರೆ, ನಿಗಮಗಳನ್ನು ಮೇಲೆತ್ತುವುದಕ್ಕೆ ಏನನ್ನು ಮಾಡುವುದಿಲ್ಲ. ಥೂ ನಿಮ್ಮ ಈ ನೀಚ ನಡೆಗೆ ನಮ್ಮ ಧಿಕ್ಕಾರ ಎಂದು ಜನ ಸಾಮಾನ್ಯರು ಛೀಮಾರಿ ಹಾಕುತ್ತಿದ್ದಾರೆ.

ಇನ್ನಾದರೂ ಬಡವರ ಸಾರಥಿಯಾಗಿರುವ ಸಾರಿಗೆ ನಿಗಮಳಿಗೆ ಸರಿಗೆಯಾಗಿ ಹಣ ಬಿಡುಗಡೆ ಮಾಡುವ ಮೂಲಕ ನಾವು ಬಡವರ ಪರ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ನೀವು ಕೂಡ ಉಳ್ಳವರ ಪರ ಸರ್ಕಾರ ನಡೆಸುತ್ತಿದ್ದೀರ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ ಎಚ್ಚರ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...